Top

ಆಡಳಿತಾತ್ಮಕ ಸಮಸ್ಯೆಗೆ ಸರ್ಕಾರದ ಬ್ರೇಕ್ : ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

ಆಡಳಿತಾತ್ಮಕ ಸಮಸ್ಯೆಗೆ ಸರ್ಕಾರದ ಬ್ರೇಕ್ : ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ
X

ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯಲ್ಲಿ ವಿಳಂಬವಾದ ಹಿನ್ನಲೆಯಲ್ಲಿ, ಆಡಳಿತಾತ್ಮಕ ಸಮಸ್ಯೆಗಳು ಉಂಟಾಗಬಾರದು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಹಿತದೃಷ್ಠಿಯಿಂದ, ಸರ್ಕಾರ ಎಲ್ಲಾ ಜಿಲ್ಲೆಗಳಿಗೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಿದೆ. ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಸರ್ಕಾರ, ಮುಂಗಾರು ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಆವಾಂತರಗಳ ಬಗ್ಗೆ ಕ್ರಮ, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಿಸುವತ್ತಾ ಸಕ್ರೀಯವಾಗುವಂತೆ, ಬಿತ್ತನೆ ಬೀಜ ಸೇರಿದಂತೆ, ಇತರೇ ಸಮಸ್ಯೆಗಳನ್ನು ಸಮರೋಪಾದಿಯಲ್ಲಿ ಪರಿಹರಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ನಿಗಾ ವಹಿಸಲು ಆದೇಶಿಸಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ವಿವರ ಇಂತಿದೆ

  1. ಅಂಜುಂ ಪರ್ವೇಜ್- ಬೆಂಗಳೂರು ನಗರ
  2. ಡಾ.ಬಿ.ಬಸವರಾಜು- ಬೆಂಗಳೂರು ಗ್ರಾಮಾಂತರ
  3. ಅಜಯ ಸೇಠ್ - ರಾಮನಗರ
  4. ಪಂಕಜ್ ಕುಮಾರ್ ಪಾಂಡೆ-ಚಿತ್ರದುರ್ಗ
  5. ವಿ.ಮಂಜುಳಾ- ಕೋಲಾರ
  6. ಡಾ.ಶಾಲಿನಿ ರಜನೀಶ್-ತುಮಕೂರು
  7. ಡಾ.ನಾಗಾಂಬಿಕಾದೇವಿ-ಚಿಕ್ಕಬಳ್ಳಾಪುರ
  8. ಚಕ್ರವರ್ತಿ ಮೋಹನ್-ಶಿವಮೊಗ್ಗ
  9. ಉಮಾಶಂಕರ -ದಾವಣಗೆರೆ
  10. ಎಂ.ಲಕ್ಷ್ಮೀನಾರಾಯಣ-ಮೈಸೂರು
  11. ಜಾವೇದ್ ಅಖ್ತರ್-ಮಂಡ್ಯ
  12. ರಾಜೇಂದ್ರಕುಮಾರ್ ಕಠಾರಿಯಾ-ಚಾಮರಾಜನಗರ
  13. ನವೀನ್ರಾಜ್ ಸಿಂಗ್-ಹಾಸನ
  14. ಡಾ.ಜಿ.ಕಲ್ಪನ-ಕೊಡಗು
  15. ರಾಜೀವ್ ಚಾವ್ಲಾ-ಚಿಕ್ಕಮಗಳೂರು
  16. ಮಹೇಶ್ವರ್ ರಾವ್-ಉಡುಪಿ
  17. ಪೊನ್ನುರಾಜ್-ದಕ್ಷಿಣ ಕನ್ನಡ
  18. ರಾಕೇಶ್ ಸಿಂಗ್-ಬೆಳಗಾವಿ
  19. ದರ್ಪಣ್ ಜೈನ್- ಧಾರವಾಡ
  20. ಆಮ್ಲನ್ ಆದಿತ್ಯಬಿಸ್ವಾಸ್-ಗದಗ
  21. ಪಿ.ಹೇಮಲತಾ-ಹಾವೇರಿ
  22. ಮೊಹಮ್ಮದ ಮೊಹಸ್ಸಿನ್-ವಿಜಯಪುರ
  23. ಮನಿಷ್ ಮೌದ್ಗಿಲ್-ಉತ್ತರ ಕನ್ನಡ
  24. ರೇಣುಕಾ ಚಿದಂಬರಂ-ಬಾಗಲಕೋಟೆ
  25. ಜೆ.ರವಿಶಂಕರ್-ಕಲಬುರಗಿ
  26. ಟಿ.ಕೆ.ಅನಿಲ್ಕುಮಾರ್-ಯಾದಗಿರಿ
  27. ಜಿ.ಕುಮಾರ್ನಾಯಕ್-ರಾಯಚೂರು
  28. ಉಮಾ ಮಹದೇವನ್-ಕೊಪ್ಪಳ
  29. ಡಾ.ರಜನೀಶ್ ಗೋಯಲ್-ಬಳ್ಳಾರಿ
  30. ಡಾ.ಇ.ವಿ.ರಮಣರೆಡ್ಡಿ-ಬೀದರ್

ಹೀಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕಗೊಂಡಿರುವ ಅಧಿಕಾರಿಗಳು, ತಮ್ಮ ತಮ್ಮ ಕಾರ್ಯದಲ್ಲಿ ತೊಡಗುವಂತೆ, ರಾಜ್ಯ ಸರ್ಕಾರ ಸೂಚಿಸಿದೆ.

ವರದಿ : ಗುರುಲಿಂಗಸ್ವಾಮಿ, ಪೊಲಿಟಿಕಲ್ ಎಡಿಟರ್, ಟಿವಿ5 ಬೆಂಗಳೂರು

Next Story

RELATED STORIES