Top

ಕುಸಿದು ಬಿದ್ದ ಶಾಲಾ ಮೇಲ್ಛಾವಣೆ : ಶಿಥಿಲಾವಸ್ಥೆಯಲ್ಲಿವೆ ಶಾಲಾ ಕೊಠಡಿ

ಕುಸಿದು ಬಿದ್ದ ಶಾಲಾ ಮೇಲ್ಛಾವಣೆ : ಶಿಥಿಲಾವಸ್ಥೆಯಲ್ಲಿವೆ ಶಾಲಾ ಕೊಠಡಿ
X

ಬಾಗಲಕೋಟೆ : ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲಾ ಕೊಠಡಿ ಮೇಲ್ಛಾವಣೆ ಕುಸಿದುಬಿದ್ದಿದ್ದು ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದ ಶಾಲೆಯಲ್ಲಿ ನಡೆದಿದೆ.

ಕಳೆದ ರಾತ್ರಿ ಶಾಲಾಕೊಠಡಿಯ ಮೇಲ್ಚಾವಣಿ ಕುಸಿದು ಬಿದ್ದಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಎಂದಿನಂತೆ ಇವತ್ತು ಕೂಡಾ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳು, ಶಿಕ್ಷಕರು ಬಂದಿದ್ದಾರೆ.ಆ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿ ಮೇಲ್ಛಾವಣೆ ಕುಸಿದುಬಿದ್ದಿರೋದನ್ನು ಕಂಡು ಆತಂಕಗೊಂಡಿದ್ದಾರೆ. ಬಳಿಕ ಶಾಲೆಯ ಹೊರಾಂಗಣದಲ್ಲಿ ಮಕ್ಕಳು ಅಧ್ಯಯನ ಮಾಡಿದ್ದಾರೆ.

ಶಿಥಿಲಾವಸ್ಥೆಯಲ್ಲಿದ್ದ ಎರಡು ಕೊಠಡಿಯನ್ನು ದುರಸ್ತಿ ಗೊಳಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇನ್ನು ಶಾಲೆಯಲ್ಲಿ 1 ರಿಂದ 7 ತರಗತಿಯವರೆಗೆ 185 ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ.. ಒಟ್ಟು 7 ಕೊಠಡಿಗಳಿದ್ದು ಅದರಲ್ಲಿ ಎರೆಡು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಎರಡು ಕೊಠಡಿ ಕೊರತೆಯಿಂದಾಗಿ ಮಕ್ಕಳಿಗೆ ಹೊರಗಡೆ ಪಾಠ ಮಾಡ್ತಿದ್ದಾರೆ.

ಇನ್ನು ಶಿಥಿಲಾವಸ್ಥೆ ಕೊಠಡಿ ದುರಸ್ತಿ, ಹಾಗೂ ಆಟದ ಮೈದಾನದ ವ್ಯವಸ್ಥೆ ಮಾಡ್ಬೇಕೆಂದು ಮೇಲಾಧಿಕಾರಿಗಳಿಗೆ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯರಿಗೆ ಮನವಿಕೊಟ್ಟಿದ್ದೇವೆ ಅಂತಾರೆ ಮುಖ್ಯಶಿಕ್ಷಕರು. ಆದರೇ ಶಿಥಿಲಾವಸ್ಥೆಯಲ್ಲಿರುವ ಇಂತಹ ಶಾಲೆಯ ದುರಸ್ಥಿಗೆ ಮುಂದಾಗದೇ ಇರೋದು ದೊಡ್ಡ ದುರಂತ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು, ಇತ್ತ ಗಮನ ಹರಸಿ, ವಿದ್ಯಾರ್ಥಿಗಳ ಜೀವಕ್ಕೆ ಕಂಠಕವಾಗುವ ಮುನ್ನಾ ಕ್ರಮ ಕೈಗೊಳ್ಳಬೇಕಿದೆ.

Next Story

RELATED STORIES