Top

ಪ್ರೊ.ಕೆ.ಎಸ್.ರಂಗಪ್ಪ ಶಿಕ್ಷಣ ಇಲಾಖೆ ಸಲಹೆಗಾರರಾಗಿ ನೇಮಕಕ್ಕೆ ಬಿಜೆಪಿ ಆಕ್ಷೇಪ

ಪ್ರೊ.ಕೆ.ಎಸ್.ರಂಗಪ್ಪ ಶಿಕ್ಷಣ ಇಲಾಖೆ ಸಲಹೆಗಾರರಾಗಿ ನೇಮಕಕ್ಕೆ ಬಿಜೆಪಿ ಆಕ್ಷೇಪ
X

ಬೆಂಗಳೂರು : ಫ್ರೊ.ಕೆ.ಎಸ್ ರಂಗಪ್ಪರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರನ್ನಾಗಿ ನೇಮಿಸಬಾರದು ಎಂದು ವಿನಂತಿಸಿ ವಿಧಾನಪರಿಷತ್ ಬಿಜೆಪಿ ಸದಸ್ಯರಾದ ಅರುಣ್ ಶಹಾಪುರ್ ಹಾಗೂ ರವಿಕುಮಾರ್ ಡಿಸಿಎಂ ಪರಮೇಶ್ವರ್‌ಗೆ ಪತ್ರ ಬರೆದಿದ್ದಾರೆ.

ಫ್ರೊ.ಕೆ.ಎಸ್.ರಂಗಪ್ಪರಿಂದಾಗಿ ಕರ್ನಾಟಕ ಮುಕ್ತ ವಿ.ವಿ ಕೋಮಾ ಸ್ಥಿತಿ ತಲುಪಿದೆ. ರಂಗಪ್ಪರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ರಂಗಪ್ಪ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಬಾರದು. ರಂಗಪ್ಪ ಮೇಲಿನ ಭ್ರಷ್ಟಾಚಾರದ ಆರೋಪ ಪ್ರಕರಣಗಳನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಿ ಎಂದು ಪತ್ರದಲ್ಲಿ ಬಿಜೆಪಿ ಸದಸ್ಯರು ಮನವಿ ಮಾಡಿದ್ದಾರೆ.

ಈ ಮೂಲಕ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು, ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ಸರ್ಕಾರ ನೇಮಿಸ ಹೊರಟಿರುವ ಪ್ರಕ್ರಿಯೆಗೆ, ಅಡ್ಡಿಯುಂಟಾಗಿದೆ. ಬಿಜೆಪಿ ಸದಸ್ಯರಾದ ಅರುಣ್ ಶಹಾಪುರ್, ರವಿಕುಮಾರ್ ಡಿಸಿಎಂಗೆ ಸಲ್ಲಿಸಿರುವ ಪತ್ರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಮುಂದಿನ ಹೆಜ್ಜೆ ಹೇಗೆ ಇಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES