Top

ರಾಜ್ಯ ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಭರ್ಜರಿ ತಯಾರಿ.!

ರಾಜ್ಯ ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಭರ್ಜರಿ ತಯಾರಿ.!
X

ವಿಶೇಷ ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೊ

ಬೆಂಗಳೂರು : ರಾಜ್ಯ ಲೋಕಸಭಾ ಚುನಾವಣೆಗೆ ಬಿಜೆಪಿ ನಾಯಕರು ಈಗಿನಿಂದಲೇ ಭರ್ಜರಿ ತಾಲೀಮು ನಡೆಸಿದ್ದಾರೆ. ಆರೆಸೆಸ್ ಮುಖಂಡರ ಜೊತೆ ಬಿಜೆಪಿ ನಾಯಕರು ನಿನ್ನೆ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಗುರಿಯಿಂದ ಈಗಿಂದಲೇ ಫೀಲ್ಡಿಗಿಳಿಯಲು ಬಿಜೆಪಿ ಮುಖಂಡರಿಗೆ ಆರ್.ಎಸ್.ಎಸ್ ಮಾರ್ಗದರ್ಶನ ಮಾಡಿದೆ.

ಬಹುಮತಕ್ಕೆ ಸನಿಹ ಬಂದು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ವಂಚಿತವಾದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸಿದೆ. ತೃತಿಯ ರಂಗದ ಬಲಪ್ರದರ್ಶನಕ್ಕೆ ವೇದಿಕೆಯಾದ ಕರ್ನಾಟಕದಲ್ಲಿ ಈ ಬಾರಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಡ್ಡು ಹೊಡೆಯಲು ಕಮಲ ಪಡೆ ಭಾರಿ ತಯಾರಿ ನಡೆಸಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ವಿರುದ್ದ ದೊಡ್ಡ ಮಟ್ಟದ ಗೆಲುವು ಸಾಧಿಸುವ ಸಂಬಂಧ ಆರ್.ಎಸ್.ಎಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ ಎನ್ನಲಾಗಿದೆ. ನಿನ್ನೆ ಚಾಮರಾಜಪೇಟೆಯ ಕೇಶವ ಕೃಪಾದಲ್ಲಿ ನಡೆದ ಸಭೆಯಲ್ಲಿ ಆರ್.ಎಸ್.ಎಸ್ ಮುಖಂಡರು ಬಿಜೆಪಿ ನಾಯಕರ ಜೊತೆ ಲೋಕಸಭಾ ಚುನಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

20 ರಿಂದ 25 ಸ್ಥಾನಗಳನ್ನು ಗೆಲ್ಲಲು ಆರೆಸ್ ಮುಖಂಡರು ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಲವು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಆರ್.ಎಸ್.ಎಸ್ ಮುಖಂಡರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. 3 ಲೋಕಸಭೆ ಉಪಚುನಾವಣೆಗಳಿಗೂ ಸಂಭವನೀಯ ಅಭ್ಯರ್ಥಿಗಳ ಹೆಸರು ಸೂಚಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಬಿಎಸ್ವೈ ಪುತ್ರ ಬಿ.ವೈ ರಾಘವೇಂದ್ರ ಹೆಸರಿಗೆ ಆರೆಸೆಸ್ ಮುಖಂಡರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶ್ರೀರಾಮುಲು ಸಹೋದರಿ ಜೆ.ಶಾಂತಾ ಹೆಸರಿಗೂ ಆರೆಸೆಸ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ವಿದ್ಯಾ ನಾಗೇಂದ್ರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಮೂರೂ ಉಪಚುನಾವಣೆಗಳಲ್ಲಿ ಗೆಲ್ಲಲೇಬೆಕೆಂದು ಆರ್.ಎಸ್.ಎಸ್ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಬರುವ ಲೋಕಸಭೆಯ ಚುನಾವಣೆಗೂ ಸಂಘ ಪರಿವಾರದ ಮುಖಂಡರು ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಆರ್.ಎಸ್.ಎಸ್ ನೀಡಿರುವ ಟಾರ್ಗೆಟ್ ಏನು?

ಬೆಂಗಳೂರಿನಲ್ಲಿ ಮೂರೂ ಸ್ಥಾನಗಳನ್ನು ಗೆಲ್ಲಲೇಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ಆರೆಸೆಸ್ ಆಂತರಿಕ ಸರ್ವೆ ಪ್ರಕಾರ ಬಿಜೆಪಿ ಕರ್ನಾಟಕದಲ್ಲಿ 13-15 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಈಗಿಂದಲೇ ಶ್ರಮ ಹಾಕಿ 25 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಆರೆಸೆಸ್ ಮುಖಂಡರು ಸಲಹೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತ ಪಡಿಸಿವೆ.

ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಆರೆಸೆಸ್ ಮುಖಂಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಉಡುಪಿ ಚಿಕ್ಕಮಗಳೂರು ಎಂಪಿ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡರನ್ನು ಕಣಕ್ಕಿಳಿಸಿದರೆ ಉತ್ತಮ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬದಲು ಡಿವಿಎಸ್ ಹೆಸರನ್ನು ಆರೆಸೆಸ್ ಶಿಫಾರಸು ಮಾಡಿದೆ ಎನ್ನಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಆರೆಸೆಸ್ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ದಾಸರಹಳ್ಳಿ ಮುನಿರಾಜು ಹೆಸರನ್ನು ಆರ್.ಎಸ್.ಎಸ್ ಮುಖಂಡರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಕ್ಷೇತ್ರಕ್ಕೆ ಜನಾರ್ಧನ ಸ್ವಾಮಿ, ತುಮಕೂರು ಕ್ಷೇತ್ರಕ್ಕೆ ಜಿ.ಎಸ್.ಬಸವರಾಜು,ಹೆಸರುಗಳನ್ನು ಆರ್.ಎಸ್.ಎಸ್ ಮುಖಂಡರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಕೋಲಾರ ಕ್ಷೇತ್ರದಿಂದ ಮಾಜಿ ಎಂ‌.ಎಲ್.ಸಿ ಡಿ.ಎಸ್.ವೀರಯ್ಯ ಲೋಕಸಭಾ ಟಿಕೇಟ್ ಆಕಾಂಕ್ಷಿ ಆಗಿದ್ದಾರೆ ಎನ್ನಲಾಗಿದೆ.ಡಿ.ಎಸ್ ವೀರಯ್ಯ ಸ್ಪರ್ಧೆಗೆ ಆರೆಸೆಸ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಂಭವನೀಯ ಅಭ್ಯರ್ಥಿ ಎನ್ನಲಾಗಿದೆ.ಚಾಮರಾಜನಗರಕ್ಕೆ ಶಿವಣ್ಣ ಬದಲು ನಂಜುಂಡ ಸ್ವಾಮಿ ಹೆಸರನ್ನು ಆರ್.ಎಸ್.ಎಸ್ ಮುಖಂಡರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಹಾಸನ ನವಿಲೆ ಪ್ರಕಾಶ್ ಸಂಭವನೀಯ ಬಿಜೆಪಿ ಅಭ್ಯರ್ಥಿ ಎಂದೇ ಹೇಳಲಾಗಿದೆ. ಗುಲ್ಬರ್ಗಾ ಕ್ಷೇತ್ರಕ್ಕೆ ಸುನೀಲ್ ವಯಾಪುರೆ ಹೆಸರನ್ನು ಆರೆಸೆಸ್ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಹಾಲಿ ಸಂಸದರೆ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ 25 ಸ್ಥಾನಗಳನ್ನು ಗೆಲ್ಲುವಂತೆ ಬಿಜೆಪಿಗೆ ಆರೆಸೆಸ್ ಟಾರ್ಗೆಟ್ ನೀಡಿದೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಮಿತ್ ಷಾ ಹಾಗೂ ಮೋದಿ ಕೊನೆಕ್ಷಣದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಗಳಿವೆ.

Next Story

RELATED STORIES