Top

ರಗಡ್ ಲುಕ್‌ನಲ್ಲಿ ಮಿಂಚಲಿದ್ದಾರೆ ವಿನೋದ್ ಪ್ರಭಾಕರ್

ರಗಡ್ ಲುಕ್‌ನಲ್ಲಿ ಮಿಂಚಲಿದ್ದಾರೆ ವಿನೋದ್ ಪ್ರಭಾಕರ್
X

ಟೈಗರ್ ಪ್ರಭಾಕರ್. 70,80,90ರ ದಶಕದಲ್ಲಿ ಟೈಗರ್ ಪ್ರಭಾಕರ್​ ಅಂದ್ರೆ ಇಡೀ ದಕ್ಷಿಣ ಭಾರತಕ್ಕೆ ಫೇಮಸ್ ಖಳ ನಟ. ಒಬ್ಬ ಖಡಕ್ ವಿಲನ್ ಹೇಗಿರಬೇಕು ಅನ್ನೊ ಕಲ್ಫನೆಗೆ ಇಂದಿಗೂ ಬೆಸ್ಟ್ ಎವರ್​ಗ್ರೀನ್ ಎಕ್ಸಾಂಪಲ್ ಟೈಗರ್ ಪ್ರಭಾಕರ್. ಆ ಕಟ್ಟು ಮಸ್ತು ದೇಹ , ಆ ಕಂಚಿನ ಕಂಠ ಯಾರು ಮರಿಯಲು ಸಾಧ್ಯ ಹೇಳಿ..? ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳ 500 ಹೆಚ್ಚು ಸಿನಿಮಾದಲ್ಲಿ ಟೈಗರ್ ಪ್ರಭಾಕರ್ ಘರ್ಜಿಸಿದ್ರು. ಅದೆಷ್ಟೋ ಸ್ಟಾರ್​ಗಳಿಗೆ ಖಡಕ್ ಖಳನಟನಾಗಿ ನಾಯಕನ ಇಮೇಜ್ ಹೆಚ್ಚಿಸಿದವರು. ಇಂತಿಪ್ಪ ಮಹಾಶಯನ ಮಗನೇ ವಿನೋದ್ ಪ್ರಭಾಕರ್​.

ಹುಲಿ ಹೊಟ್ಟೆಯಲ್ಲಿ ಹುಲಿನೇ ಹುಟ್ಟೋದು ಅನ್ನೋಹಾಗೆ ಅಪ್ಪನ ದಾರಿಯಲ್ಲಿ ವಿನೋದ್ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಿದ್ದಾರೆ. ಟೈಸನ್​​, ಕ್ರ್ಯಾಕ್ ಹಾಗೂ ಮರಿ ಟೈಗರ್ ಚಿತ್ರಗಳ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ ಎಚ್ಚರಿಕೆಯಿಂದ ಸಿನಿಮಾಗಳ ಆಯ್ಕೆ ಮಾಡುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಬಾಡಿ ಲಾಗ್​​ವೆಂಜ್ ಇಂಪ್ರೂವ್ ಮಾಡಿಕೊಳ್ತಾ ವಿಭಿನ್ನತೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಸದ್ಯ ವಿನೋದ್ ಪ್ರಭಾಕರ್ ಮತ್ತೆ ಟಾಕ್ ಆಫ್ ಟೌನ್​ ಬಂದಿರುವುದಕ್ಕೆ ಕಾರಣ ರಗಡ್ ಸಿನಿಮಾ. ಮಹೇಶ್ ಗೌಡ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ರಗಡ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ 8ಪ್ಯಾಕ್ ಮಾಡಿ ಎಲ್ಲರ ಗಮನ ಸೆಳೆದ್ದಿದ್ದಾರೆ. ಈ ಫಾಸ್ಟ್ ಫುಡ್ , ಜಂಕ್ ಫುಡ್ ಜಮಾನದಲ್ಲಿ ಸಿಕ್ಸ್ ಪ್ಯಾಕ್ ಮಾಡಿ ಜೀರ್ಣಿಸಿಕೊಳ್ಳದೆ ಕಷ್ಟವಾಗಿರುವಾಗ ವಿನೋದ್ ಒಂದು ಹೆಜ್ಜೆ ಮುಂದೆ ಹೋಗಿ 8 ಪ್ಯಾಕ್​​ನಲ್ಲಿ ಕ್ಯಾಮೆರಾಗೆ ಡಿಚ್ಚಿ ಹೊಡೆದ್ದಿದ್ದಾರೆ.

ರಗಡ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಖಡಕ್ ಲುಕ್ ಹೇಗಿರಲಿದೆ ಅನ್ನೋ ಜಬರ್​ದಸ್ತ್ ಟೀಸರ್ ಝಲಕ್ ರಿವೀಲ್ ಮಾಡಿದೆ ಚಿತ್ರತಂಡ.

ಮಹೇಶ್ ಗೌಡ ಸಾರಥ್ಯದ ರಗಡ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್​ನಲ್ಲಿ ಬಂದಿದ್ದಾರೆ. ಲವರ್ ಬಾಯ್​ ಕಮ್ ಆಕ್ಯನ್ ಇಮೇಜ್​ನಲ್ಲಿ ಮಿಂಚಲಿದ್ದಾರೆ. ಇಷ್ಟು ದಿನ ಟೈಗರ್, ಮರಿ ಟೈಗರ್ ಎಂದು ಘರ್ಜಸಿದ್ದ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ಆನೆಯನ್ನು ಪ್ರತಿನಿಧಿಸಿದ್ದಾರೆ. ತಮ್ಮ ಬಲ ತೋಳಿನ ಮೇಲೆ ಆನೆಯ ಟ್ಯಾಟೋವನ್ನು ಬಿಡಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್​ನ ಸಂಪೂರ್ಣ ಬದಲಾಯಿಸಿಕೊಂಡಿದ್ದಾರೆ.

ಈ ಎಲ್ಲಾ ಬದಲಾವಣೆ ಹಾಗೂ ‘ರಗಡ್’​ ಟೀಸರ್​ನಲ್ಲಿರುವ ಮಿಕ್ಸ್ ಮನೋರಂಜನೆ ನೋಡುಗರ ನೋಟವನ್ನು ತನ್ನತ್ತ ಸೆಳೆಯುತ್ತಿದೆ. ಅರುಣ್ ಕುಮಾರ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ‘ರಗಡ್’​ ತನ್ನ ರಂಗು ಬಿರಂಗು ಥೀಯೆಟರ್​ನಲ್ಲಿ ಬಿತ್ತರಿಸಲಿದೆ.

Next Story

RELATED STORIES