Top

ಮೈಸೂರು ಬೆಡಗಿ ಅಪೂರ್ವಗೆ ಒಲಿದ ವಿಕ್ಟರಿ

ಮೈಸೂರು ಬೆಡಗಿ ಅಪೂರ್ವಗೆ ಒಲಿದ ವಿಕ್ಟರಿ
X

ಅಪೂರ್ವ. ಎರಡು ವರ್ಷಗಳ ಹಿಂದೆ ತೆರೆಗೆ ಬಂದ ಕನಸುಗಾರನ ಕನಸಿನ ಕೂಸು. ಇದು ಕ್ರೇಜಿ ಸ್ಟಾರ್ ಮತ್ತೊಂದು ಪ್ರಯೋಗ. 61 ವರ್ಷದ ಮುದುಕ ಹಾಗೂ 19ರ ಹರೆಯದ ತರುಣಿ ನಡುವಿನ ಅಪರೂಪದ ‘ಅಪೂರ್ವ' ಪ್ರೇಮ ಕಾವ್ಯ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡದೇ ಇದ್ರೂ, ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ.

ಕ್ರೇಜಿಸ್ಟಾರ್​ ರವಿಚಂದ್ರನ್ ಒನ್​​ ಮ್ಯಾನ್ ಶೋ ಅಪೂರ್ವ.. ಈ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಿತರಾದ ನಟಿ ಅಪೂರ್ವ. ಈ ಚಿತ್ರದ ನಾಯಕಿ ಪಾತ್ರಕ್ಕೆ ಮುಗ್ಧ ಹುಡುಗಿಯ ಹುಡುಕಾಟದಲ್ಲಿದ್ದ ರವಿಮಾಮನಿಗೆ ಸಿಕ್ಕ ಕೋಮಲೆ ಅಪೂರ್ವ..

ರವಿಚಂದ್ರನ್‌ ಅವರ ಇ-ಮೇಲ್‌ ಐಡಿ ಕಲೆಕ್ಟ್ ಮಾಡಿ, ತಮ್ಮ ನಾಲ್ಕು ಫೋಟೋ ಕಳುಹಿಸಿದ್ದರಂತೆ ಅಪೂರ್ವ. ಮೂರ್ನಾಲ್ಕು ತಿಂಗಳ ನಂತರ ಆಡಿಷನ್‌ಗೆ ಬರಬೇಕೆಂದು ರವಿಚಂದ್ರನ್‌ ಅವರಿಂದ ಕರೆಬಂತು. ಅಪೂರ್ವ ಫೋಟೋ ನೋಡಿ ಇಂಪ್ರೆಸ್‌ ಆದ ರವಿಚಂದ್ರನ್‌, ಸಿನಿಮಾಗಾಗಿ ಒಂದು ಫೋಟೋ ಶೂಟ್‌ ಮಾಡಿಸ್ರಿದಂತೆ. ಫೋಟೋದಲ್ಲಿ ಚೆನ್ನಾಗಿ ಕಾಣದ ಕಾರಣ ರಿಜೆಕ್ಟ್ ಕೂಡ ಮಾಡಿದ್ರಂತೆ. ಮತ್ತೊಂದು ಫೋಟೋಶೂಟ್ ಮಾಡಿ, ತಮ್ಮ ಅಪೂರ್ವ ಚಿತ್ರಕ್ಕೆ ಇವಳೇ ನಾಯಕಿ ಅಂತ ಫಿಕ್ಸ್ ಆದ್ರಂತೆ ರವಿಚಂದ್ರನ್.

ಅಪೂರ್ವ ನಂತ್ರ ಆಶಾ, ಕೀಚಕ ಅನ್ನೋ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ ನಟಿಸೋ ಮಾತುಗಳು ಕೇಳಿಬಂದಿತ್ತು.ಆದ್ರೆ ಅದಕ್ಕೂ ಮೊದ್ಲು ಶರಣ್​ ಅಭಿನಯದ ವಿಕ್ಟರಿ 2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಸದ್ದಿಲ್ಲದೆ ಶೂಟಿಂಗ್ ಕೂಡ ಮಾಡಿ ಮುಗಿಸಿದ್ದಾರೆ.

ಅಂದಹಾಗೆ ವಿಕ್ಟರಿ 2 ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರೋದು ಅಲೆಮಾರಿ ಮತ್ತು ಕಾಲೇಜ್ ಕುಮಾರ ಖ್ಯಾತಿಯ ನಿರ್ದೇಶಕ ಹರಿ ಸಂತು. ಇನ್ನು ಈ ಚಿತ್ರಕ್ಕೆ ರೋಜ್ ಮತ್ತು ಮಾಸ್ ಲೀಡರ್ ಖ್ಯಾತಿಯ ತರುಣ್ ಶಿವಪ್ಪ ಬಂಡವಾಳ ಹಾಕಿದ್ದು, ಸದ್ಯದಲ್ಲೇ ಪ್ರಮೋಷನ್ಸ್ ಶುರು ಮಾಡಲಿದ್ದಾರೆ. ಇನ್ನು ಮೆಗಾ ಕಾಂಬಿನೇಷನ್​ನ ಮೆಗಾ ಸಿನಿಮಾ ಇದಾಗಿದ್ದು, ಈ ಬಾರಿ ಸಿನಿಮಾದ ಜೊತೆ ಅಪೂರ್ವಗೂ ಬಿಗ್ ಬ್ರೇಕ್ ಸಿಗೋ ಎಲ್ಲಾ ಲಕ್ಷಣಗಳಿವೆ.

ಮೈಸೂರು ಮೂಲದ ಈ ಗ್ಲಾಮರ್ ಡಾಲ್​ಗೆ ಸ್ಯಾಂಡಲ್​ವುಡ್​ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜೊತೆ ನಟಿಸೋ ಆಸೆಯಿದೆ. ಪುನೀತ್​ರ ಅಭಿಮಾನಿಯಾಗಿ ಕೂಡ ಅವ್ರೆಲ್ಲಾ ಸಿನಿಮಾ ನೋಡಿರೋ ಅಪೂರ್ವ, ಮುಂದೆ ಅಪ್ಪು ಜೊತೆ ನಟಿಸೋ ಆಶಯ ವ್ಯಕ್ತಪಡಿಸಿದ್ದಾರೆ.

ವಿಕ್ಟರಿ 2 ಸಿನಿಮಾದಿಂದ ಸದ್ಯ ಟಾಕ್ ಆಫ್ ದ ಟೌನ್ ಆಗಿರೋ ಅಪೂರ್ವ, ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರಂತೆ. ಶಶಿಕುಮಾರ್ ಮಗನನ್ನ ಲಾಂಚ್ ಮಾಡ್ತಿರೋ ಸಿನಿಮಾದಲ್ಲಿ ಅಪೂರ್ವ ನಾಯಕಿ ಆಗೋ ಸಾಧ್ಯತೆಯಿದೆ ಎನ್ನಲಾಗ್ತಿದೆ.

Next Story

RELATED STORIES