Top

ರೈತನಿಗೆ ಮೊಬೈಲ್ ಟವರ್ ದೋಖಾ : ಜಿಪಂ ಅಧ್ಯಕ್ಷೆಗೆ ಫೋನ್ ಇನ್‌ನಲ್ಲಿ ಅಳಲು

ರೈತನಿಗೆ ಮೊಬೈಲ್ ಟವರ್ ದೋಖಾ : ಜಿಪಂ ಅಧ್ಯಕ್ಷೆಗೆ ಫೋನ್ ಇನ್‌ನಲ್ಲಿ ಅಳಲು
X

ಬಾಗಲಕೋಟೆ : ಖಾಸಗಿ ಮೊಬೈಲ್ ಕಂಪನಿಯೊಂದು ರೈತನ ಹೊಲದಲ್ಲಿ ಮೊಬೈಲ್ ಟವರ್ ಅಳವಡಿಸುವದಾಗಿ ಹೇಳಿ ರೈತನಿಗೆ ವಂಚಿಸಿದ್ದಾರೆ ಎಂದು ನೊಂದ ರೈತ ಫೋನ್ ಇನ್ ಕಾರ್ಯಕ್ರಮದಲ್ಲಿ ಅಳಲುತೋಡಿಕೊಂಡಿದ್ದಾನೆ.

ಬಾಗಲಕೋಟೆ ಜಿಲ್ಲಾಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧಿಕಾರವಹಿಸಿಕೊಂಡ ಬಳಿಕ ಎರಡು ವರ್ಷ ನಂತರ ಇದೇ ಮೊದಲ ಬಾರಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದರು. ಹುನಗುಂದ ಪಟ್ಟಣದಲ್ಲಿ ಸಿಂಗ್ ಎನ್ನುವ ರೈತರೊಬ್ಬರು ಫೋನ್ ಇನ್ ಕಾರ್ಯಕ್ರಮದಲ್ಲಿ ಫೋನ್ ಮಾಡಿ ನ್ಯಾಯ ಕೊಡಿಸಿಬೇಕೆಂದು ಕೇಳಿಕೊಂಡಿದ್ದಾರೆ. ಇದರ ಬಗ್ಗೆ ಪರಿಶೀಲಿಸಿ ನ್ಯಾಯಕೊಡಿಸುತ್ತೇನೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನೊಂದ ರೈತರಿಗೆ ಅಭಯ ನೀಡಿದರು.

ಇವತ್ತು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೊದಲ ಕರೆ ಶಾಲಾ ಕೊಠಡಿ ಕೊರತೆ, ವಾಟರ್ ಮನ್‌ಗಳ ಸಂಬಳ ಸಮಸ್ಯೆ, ಶೌಚಾಲಯ, ಶಾಲಾ ಕಟ್ಟಡ ದ ಶಿಥಿಲಾವಸ್ಥೆ, ತಹಶೀಲ್ದಾರ್ ಕಚೇರಿಯಲ್ಲಿ ರೈತರ ಹೊಲದ ಮೋಜನಿ ವಿಳಂಬ, ಗ್ರಾಮಪಂಚಾಯತ್ ನಲ್ಲಿ ಇಂಟರ್ನೆಟ್ ಅಳವಡಿಕೆಯಲ್ಲಿನ ಲೋಪದೋಷಗಳ ಕುರಿತಾಗಿ ಸಾರ್ವಜನಿಕರ ದೂರುಗಳ ಸರಮಾಲೆ ಹರಿದುಬಂದವು.

ಇನ್ನು ಫೋನ್ ಇನ್ ಕಾರ್ಯಕ್ರಮದಲ್ಲಿದ್ದ ಸಂಬಂಧ ಪಟ್ಟ ದೂರುಗಳಿಗೆ ಅಧಿಕಾರಿಗಳು ಸಮಜಾಯಿಸಿ ನೀಡಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನ್ನವರ ದೂರದಾರರಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವದಕ್ಕೆ ಫೋನ್ ಇನ್ ಕಾರ್ಯಕ್ರಮ ಮಾಡಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.

ಅದೇನೇ ಆಗಲೀ, ಸಾರ್ವಜನಿಕರಿಗೆ ಜನಪ್ರತಿನಿಧಿಯೊಬ್ಬರು ಕಷ್ಟಗಳನ್ನು ಹೇಳಿಕೊಂಡು, ಪರಿಹಾರದ ವಾಗ್ದಾನ ನೀಡಿದ್ದಾರೆ. ಈಗ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದಿರುವ ದೂರುಗಳಿಗೆ ಪರಿಹಾರ ನೀಡಲು ಜಿಲ್ಲಾಪಂಚಾಯತ್ ಅಧ್ಯಕ್ಷೆ ಮುಂದಾಗುತ್ತಾರಾ ಅಂತ ಎಂಬುವದನ್ನು ಕಾದುನೋಡಬೇಕಿದೆ.

ವರದಿ : ಮಂಜುನಾಥ್ ತಳವಾರ್, ಟಿವಿ5 ಬಾಗಲಕೋಟೆ

Next Story

RELATED STORIES