Top

ಕರ್ನಾಟಕ ಪುಸ್ತಕ ಮಂಡಳಿಯಿಂದ ಪಠ್ಯಪುಸ್ತಕದಲ್ಲಿ ಯಡವಟ್ಟು

ಕರ್ನಾಟಕ ಪುಸ್ತಕ ಮಂಡಳಿಯಿಂದ ಪಠ್ಯಪುಸ್ತಕದಲ್ಲಿ ಯಡವಟ್ಟು
X

ಕೋಲಾರ : ಎಂಟನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ 10ನೇ ತರಗತಿಯ ಇಂಗ್ಲೀಷ್ ಮೀಡಿಯಂಗೆ ಸೇರಿದ 8 ಪುಟಗಳನ್ನು ಸೇರಿಸಿ, ಪ್ರಿಂಟ್‌ ಮಾಡಿ, ಕರ್ನಾಟಕ ಪುಸ್ತಕ ಮಂಡಳಿ ಎಡವಟ್ಟು ಮಾಡಿದೆ.

ಈಗಾಗಲೇ ಶಾಲೆಯಲ್ಲಿ ತರಗತಿಗಳು ಪ್ರಾರಂಭವಾಗಿದ್ದು, ಮಕ್ಕಳಿಗೆ ವಿತರಿಸಲಾಗಿರುವ ಶಾಲಾ ಪಠ್ಯ ಪುಸ್ತಕದಲ್ಲಿ ಇಂತಹ ಎಟವಟ್ಟು ಬಹಿರಂಗವಾಗಿದೆ. ಕೋಲಾರ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಗೆ 8 ನೇ ತರಗತಿಯ ಕನ್ನಡ ಪುಸ್ತಕಗಳನ್ನ ಮಾರಾಟ ಮಾಡಿರುವ ಪುಸ್ತಕ ಮಂಡಳಿ, ಹೀಗೆ ದೊಡ್ಡ ಯಡವಟ್ಟು ಮಾಡಿ 20 ದಿನವಾದ್ರು ಇನ್ನೂ ತಪ್ಪನ್ನ ತಿದ್ದುಕೊಂಢಿಲ್ಲ.

ಅಂದಹಾಗೇ, 8ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ 2ನೇ ವಿಷಯದ ಜಾಗದಲ್ಲಿ 10ನೇ ತರಗತಿಗೆ ಸೇರಿದ ಇಂಗ್ಲೀಷ್ ಮಾಧ್ಯಮದ ಮ್ಯಾಥಮೆಟಿಕ್ ನ 4 ನೇ ಚಾಪ್ಟರ್‍ನ್ನ ಪ್ರಿಂಟ್ ಮಾಡಿ ಮಕ್ಕಳಿಗೆ ವಿತರಿಸಿದೆ. ಖಾಸಗಿ ಶಾಲೆಗಳು ಮುದ್ರಣದ ತಪ್ಪನ್ನ ಗಮನಿಸಿ ಶಿಕ್ಷಣ ಇಲಾಖೆಗೆ ತಿಳಿಸಿದ್ರು ಅಧಿಕಾರಿಗಳು ಮಾತ್ರ ಸುಮ್ಮನಾಗಿದ್ದಾರೆ.

ಮೊದಲೇ ಕನ್ನಡ ಭಾಷೆಯನ್ನ ದ್ವಿತೀಯ ಭಾಷೆಯನ್ನಾಗಿಸಿಕೊಂಡು ಶಾಲೆಗಳನ್ನ ನಡೆಸ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಕನ್ನಡ ಪಠ್ಯ ಪುಸ್ತಕದಲ್ಲಿನ ತಪ್ಪುಗಳನ್ನ ಗಮನಿಸಿ ದೂರು ನೀಡಿದ್ದಾರ. ಆದ್ರೇ, ಮಕ್ಕಳಿಗೆ ಕೊಟ್ಟ ಪುಸ್ತಕಗಳನ್ನ ವಾಪಸ್ ಪಡೆದುಕೊಂಡು, ಬದಲಿಸಿಕೊಟ್ಟಿಲ್ಲ.

ಅಂದಹಾಗೇ, ಕರ್ನಾಟಕ ಟೆಕ್ಸ್ಟಬುಕ್ ಸೊಸೈಟಿಯಿಂದ ಗುತ್ತಿಗೆ ಪಡೆದಿರುವ ಅಭಿಮಾನಿ ಪ್ರಕಾಶನ ಸಂಸ್ಥೆ ಪ್ರಿಂಟಿಗ್‍ನಲ್ಲಿ ಈ ತಪ್ಪು ಮಾಡಿದ್ದು, ಇದೀಗ ಕೂಡಲೇ ಕ್ರಮ ಕೈಗೊಳ್ಳುವಂತೆ ವಿಧ್ಯಾರ್ಥಿ ಮುಖಂಡರು ಮತ್ತು ವಿಧ್ಯಾರ್ಥಿ ಮುಖಂಡರು ಆಗ್ರಹಿಸಿದ್ದಾರೆ.

Next Story

RELATED STORIES