Top

ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ

ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ
X

ಹುಬ್ಬಳ್ಳಿ: ಬಸ್, ಆಟೋ ರಿಕ್ಷಾ ಅಥವಾ ಕ್ಯಾಬ್‌ಗಳಲ್ಲಿ ಯಾರಾದರೂ ಲಗೇಜ್ ಬಿಟ್ಟು ಹೋದರೆ, ಅದನ್ನ ಚಾಲಕರು ಪ್ರಯಾಣಿಕರಿಗೆ ಮರಳಿಸುವುದು ಅಪರೂಪ. ಕೆಲ ಚಾಲಕರು ಪ್ರಯಾಣಿಕರು ಬಿಟ್ಟು ಹೋದ ವಸ್ತು, ಹುಡುಕಿಕೊಂಡು ಹೋಗಿ ಕೊಡೋರ್ಯಾರು ಅಂತಾ ಸುಮ್ಮನಿದ್ದರೆ, ಇನ್ನು ಕೆಲವರು ಸಿಕ್ಕಿದ್ದೆ ಚಾನ್ಸು ಅಂತಾ ಸುಮ್ಮನಿರುತ್ತಾರೆ. ಮತ್ತೆ ಕೆಲವರು ಬೇರೆಯವರ ವಸ್ತು ನಮಗ್ಯಾಕೆ ಅಂತಾ ಪ್ರಯಾಣಿಕರ ವಸ್ತುವನ್ನು, ಪ್ರಯಾಣಿಕರಿಗೆ ಮರಳಿಸುವ ಪ್ರಯತ್ನ ಮಾಡುತ್ತಾರೆ. ಅಂಥ ಪ್ರಾಮಾಣಿಕರಲ್ಲಿ ಲಕ್ಷ್ಮಣ್ ಡೋಂಗರೆ ಕೂಡ ಒಬ್ಬರು.

ಯಾರು ಈ ಲಕ್ಷ್ಮಣ್ ಡೋಂಗರೆ ಅಂದ್ರಾ..?..ಇವರು ಕೆಎಸ್‌ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ. ಅನಸೂಯಮ್ಮ ಎಂಬ ಮಹಿಳೆ, ಬಸ್‌ನಲ್ಲಿ ಬೆಲೆ ಬಾಳುವ ಬಂಗಾರ ಬಿಟ್ಟು ಹೋಗಿದ್ದರು. ಆಗ ಕೆಎಸ್‌ಆರ್ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಲಗೇಜ್ ಸಮೇತ, ಬೆಲೆ ಬಾಳುವ ಒಡವೆಗಳನ್ನು ಹಿಂದಿರುಗಿಸಿದ್ದಾರೆ.

ಕಲಘಟಗಿಯಿಂದ ಹುಬ್ಬಳ್ಳಿಗೆ ಬಂದು ಅಲ್ಲಿಂದ ಬಿಜಾಪುರಕ್ಕೆ ಹೊರಟಿದ್ದ ಅನಸೂಯಮ್ಮಾ, ಬಸ್‌ನಲ್ಲೇ ತಮ್ಮ ಲಗೇಜ್ ಬಿಟ್ಟು ಕೆಳಗಿಳಿದಿದ್ದರು. ಸುಮಾರು 2.50ಲಕ್ಷ ಮೌಲ್ಯದ ಆಭರಣವಿದ್ದ ಲಗೇಜನ್ನ ಲಕ್ಷ್ಮಣ್ ಪೊಲೀಸರ ಸಮ್ಮುಖದಲ್ಲಿ ಅನಸೂಯಮ್ಮಗೆ ನೀಡಿದ್ದಾರೆ. ಇನ್ನು ಸಾರಿಗೆ ಇಲಾಖೆಯ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Next Story

RELATED STORIES