Top

ಎಟಿಎಂನಲ್ಲಿ ಹರಿದ ನೋಟು, ಸುಟ್ಟ ನೋಟು ಪತ್ತೆ

ಎಟಿಎಂನಲ್ಲಿ ಹರಿದ ನೋಟು, ಸುಟ್ಟ ನೋಟು ಪತ್ತೆ
X

[story-lines]

ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಎಟಿಎಂ ಒಂದರಲ್ಲಿ ಹೆಗ್ಗಣ ದುಡ್ಡನ್ನೆಲ್ಲ ತಿಂದು ಹಾಕಿತ್ತು ಎಂಬ ಸುಳ್ಳು ಸುದ್ದಿ ಹರಡಿತ್ತು. ಆದ್ರೆ ಕೊನೆಗೆ ಆ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ, ಅಸ್ಸಾಮ್‌ನಲ್ಲಿ ಎಂದು ಸಾಬೀತಾಯ್ತು. ಇದೀಗ ಕರ್ನಾಟಕದಲ್ಲೇ ಎಟಿಎಂನಲ್ಲಿ ಹರಿದ ನೋಟು, ಸುಟ್ಟ ನೋಟು ಪತ್ತೆಯಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಲಾ ಗ್ರಾಮದಲ್ಲಿ ಎಸ್.ಬಿ.ಐಗೆ ಸೇರಿದ ಎಟಿಎಂನಲ್ಲಿ ಸುಟ್ಟ ನೋಟುಗಳು, ಹರಿದ ನೋಟುಗಳು ಪತ್ತೆಯಾಗಿದೆ. ಹಣ ಡ್ರಾ ಮಾಡಲು ಬಂದಿದ್ದ ಗ್ರಾಹಕರು ಇದನ್ನು ನೋಡಿ, ಕಂಗಾಲಾಗಿದ್ದಾರೆ.

ಹೆಚ್ ಎ ಎಲ್ ಕಂಪನಿ ನೌಕರ ರಫೀಕ ಭಾಗವಾನ್ ಎಂಬುವರು ಹಣ ಡ್ರಾ ಮಾಡಿಕೊಂಡಿದ್ದರು, ಈ ವೇಳೆ 2 ಸಾವಿರ ರೂ.ಮುಖಬೆಲೆಯ 6 ಡ್ಯಾಮೇಜ್ ಆದ ನೋಟುಗಳು, ಸುಟ್ಟ, ಹರಿದ, ಮಸಿ ಮೆತ್ತಿಕೊಂಡ ನೋಟು ಡ್ರಾ ಆಗಿದೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕ ರಫೀಕ್ ಭಾಗವಾನ್ ಸಂಬಂಧಿಸಿದ ಬ್ಯಾಂಕ್ ಶಾಖೆಗೆ ದೂರು ನೀಡಿದ್ದಾರೆ.

Next Story

RELATED STORIES