ನಿಯಮ ಉಲ್ಲಂಘಿಸಿದ್ದನ್ನು ಒಪ್ಪಿಕೊಂಡ ಶ್ರೀಲಂಕಾ ಕ್ರಿಕೆಟ್ ತಂಡ

X
TV5 Kannada22 Jun 2018 10:12 AM GMT
ಐಸಿಸಿ ನೀತಿ ನಿಯಮಗಳನ್ನ ಉಲ್ಲಂಘಿಸಿರುವುದನ್ನ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಲ್, ಕೋಚ್ ಚಂಡಿಕಾ ಹಾತುರ್ಸಿಂಘೆ ಮತ್ತು ತಂಡದ ಮ್ಯಾನೇಜರ್ ಅಸನ ಗುರುಸಿನ್ಹ ಒಪ್ಪಿಕೊಂಡಿದ್ದಾರೆ.
ಮೊನ್ನೆ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್ ಆಡುವ ವೇಳೆ ಚೆಂಡು ವಿರೂಪ ಮಾಡಿದ ದೃಶ್ಯ ಸೆರೆಯಾಗಿತ್ತು. ಆರಂಭದಲ್ಲಿ ಆರೋಪವನ್ನ ತಳ್ಳಿ ಹಾಕಿದ್ದ ಚಾಂಡಿಮಲ್ ನಂತರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಇದರ ಪರಿಣಾಮ ಚಾಂಡಿಮಲ್ಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗಿತ್ತು.ಇದನ್ನ ವಿರೋಧಿಸಿ ಚಾಂಡಿಮಲ್ ಮೇಲ್ಮನವಿ ಸಲ್ಲಿಸಿದ್ದರು.
Next Story