Top

ಗನ್ ಬಿಟ್ಟು ಪೆನ್ ಹಿಡಿದ ಹ್ಯಾಟ್ರಿಕ್ ಹೀರೋ..!

ಗನ್ ಬಿಟ್ಟು ಪೆನ್ ಹಿಡಿದ ಹ್ಯಾಟ್ರಿಕ್ ಹೀರೋ..!
X

ಇಷ್ಟು ದಿನಗಳ ಕಾಲ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಕೈಯಲ್ಲಿ ಮಚ್ಚು-ಲಾಂಗು, ಗನ್​​ ಕೊಡುತ್ತಿದ್ದ ಸ್ಯಾಂಡಲ್​ವುಡ್​ ನಿರ್ದೇಶಕರು, ಇದೀಗ ಪೆನ್​ ಕೊಟ್ಟಿದ್ದಾರೆ.

ಟಗರು ಚಿತ್ರದ ಸಕ್ಸಸ್​ ಅಲೆಯಲ್ಲಿರುವಾಗಲೇ ಶಿವಣ್ಣ, ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಸದ್ದಿಲ್ಲದೆ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಇಂದು ರಾಮಾಂಜನೇಯ ದೇವಸ್ಥಾನದಲ್ಲಿ ನೆರವೇರಿದ್ದು, ಚಿತ್ರಕ್ಕೆ ದ್ರೋಣ ಎಂದು ಹೆಸರಿಡಲಾಗಿದೆ.

ಮಚ್ಚು-ಲಾಂಗು ಹಿಡಿಯುತ್ತಿದ್ದ ಕೈಯಲ್ಲಿ, ಇದೀಗ ಪೆನ್​ ಹಿಡಿದುಕೊಂಡು ಪಾಠ ಮಾಡಲು ಶಿವಣ್ಣ ಸಿದ್ಧರಾಗಿದ್ದಾರೆ. ಮೊದಲ ಬಾರಿಗೆ ಶಿಕ್ಷಕನ ಪಾತ್ರ ನಿರ್ವಹಿಸುತ್ತಿರುವ ಹ್ಯಾಟ್ರಿಕ್​ ಸ್ಟಾರ್​ ತಮ್ಮ ಪಾತ್ರದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ. ಇದೊಂದು ಸಾಮಾಜಿಕ ಸಂದೇಶ ಹೊಂದಿರುವಂತಹ ಸಿನಿಮಾ, ಇಂತಹ ಸಿನಿಮಾದಲ್ಲಿ ನಟಿಸೋಕೆ ನನಗೂ ಖುಷಿ ಇದೆ ಎಂದು ಹೇಳಿದ್ದಾರೆ.

ಇನ್ನು ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಆ್ಯಕ್ಷನ್​ ಕಟ್​ ಹೇಳುತ್ತಿದ್ದು. ಆಗಸ್ಟ್​ ವೇಳೆಗೆ ಚಿತ್ರೀಕರಣ ಶುರುವಾಗಲಿದೆ. ಇನ್ನಿತರೆ ತಾರಾ ಬಳಗದಲ್ಲಿ ವಿದ್ಯಾರ್ಥಿನಿಯಾಗಿ ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಸ್ವಾತಿ ಶರ್ಮ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಮಹದೇವ್​, ಸಂಗಮೇಶ್​, ಶೇಷು ಚಕ್ರವರ್ತಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Next Story

RELATED STORIES