Top

ವೇತನ ಹೆಚ್ಚಳಕ್ಕಾಗಿ ಸಾಯಿ ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ

ವೇತನ ಹೆಚ್ಚಳಕ್ಕಾಗಿ ಸಾಯಿ ಗಾರ್ಮೆಂಟ್ಸ್‌ ನೌಕರರ ಪ್ರತಿಭಟನೆ
X

ಮಂಡ್ಯ : ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ಎದುರು ನೂರಾರು ಮಹಿಳಾ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಿನ್ನೆಯಿಂದ ಆರಂಭವಾಗಿರುವ ಪ್ರತಿಭಟನೆ ಇಂದು ಸಹ ಮುಂದುವರೆದಿದೆ. ಕಳೆದ ನಾಲ್ಕೈದು ವರ್ಷದಿಂದ ಕೆಲಸ ಮಾಡುತ್ತಿರುವ ನಾವು ಬೆಳಿಗ್ಗೆ 9.30 ರಿಂದ 5 ಗಂಟೆ ವರೆಗು ಕೆಲಸ ಮಾಡ್ತಾವೆ. ಆದರೆ ಕೇವಲ ಎಂಟು ಸಾವಿರ ಸಂಬಳ ಕೊಡ್ತಾರೆ ಎಂದು ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳ ಮಾತನಾಡಿದ, ಗಾರ್ಮೆಂಟ್‌ನ ಉದ್ಯೋಗಿ ಸುಗುಣ ಎಂಬುವರು, ಕಾರ್ಖಾನೆ ತಿಳಿಸುವ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದೇವೆ. ಹೀಗೆ ಕೆಲಸ ಮಾಡಿದರೂ ಸರಿಯಾದ ಸಮಯಕ್ಕೆ ಸಂಬಳ ಹೆಚ್ಚಿಸುತ್ತಿಲ್ಲ. ಅಲ್ಲದೇ, ಪಿ.ಎಫ್, ಬಸ್ ಚಾರ್ಜ್ ಎರಡು ಸಾವಿರ ಹೋದ್ರೆ, ನಮಗೆ ಉಳಿಯೋದು ಆರು ಸಾವಿರ ಮಾತ್ರ. ಇಷ್ಟು ಕಡಿಮೆ ಸಂಬಳಕ್ಕೆ ನಾವು ಜೀವನ ನಡೆಸೋದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಸಂಬಳ ಹೆಚ್ಚಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದ್ರು.

Next Story

RELATED STORIES