ಎರಡು ಹೊಸ ಚೆಂಡು ಬಳಕೆ : ಸಚಿನ್ ಅಸಮಾಧಾನ

X
TV5 Kannada22 Jun 2018 9:58 AM GMT
ಮುಂಬೈ: ಏಕದಿನ ಕ್ರಿಕೆಟ್ನಲ್ಲಿ ಎರಡು ಹೊಸ ಚೆಂಡುಗಳ ಬಳಕೆ, ದುರಂತಕ್ಕೆ ಮತ್ತೊಂದು ಉದಾಹರಣೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕಿಡಿಕಾರಿದ್ದಾರೆ.
ಐಸಿಸಿ ಹೊರ ತಂದಿರುವ ಹೊಸ ನಿಯಮದ ಪ್ರಕಾರ ಏಕದಿನ ಕ್ರಿಕೆಟ್ನಲ್ಲಿ ಹೊಸ ಚೆಂಡನ್ನ ಬಳಸಲಾಗುತ್ತಿದೆ. ಇದರ ಪರಿಣಾಮವೇ ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ಬ್ಯಾಟ್ಸ್ ಮನ್ಗಳು ಅಬ್ಬರಿಸುತ್ತಿದ್ದಾರೆ. ಈ ನಿಯಮವನ್ನ ಇದೀಗ ಸಚಿನ್ ತೆಂಡೂಲ್ಕರ್ ವಿರೋಧಿಸಿ ಟ್ವೀಟರ್ನಲ್ಲಿ ಬರೆದಿದ್ದಾರೆ. ಈ ಎರಡು ಹೊಸ ಚೆಂಡುಗಳಿಗೆ ರಿವರ್ಸ್ ಸ್ವಿಂಗ್ಗೆ ಅವಕಾಶವೇ ಇಲ್ಲ. ಡೆತ್ ಓವರ್ಗಳಲ್ಲಿ ಪ್ರಮುಖ ಅಂಶವಾಗಿರುವ ರಿವರ್ಸ್ ಸ್ವಿಂಗ್ನ್ನ ನೋಡದೇ ಎಷ್ಟೋ ದಿನಗಳಾಗಿವೆ ಎಂದು ಹೇಳಿದ್ದಾರೆ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ರಿವರ್ಸ್ ಸ್ವಿಂಗ್ ಸ್ಪೆಶಲಿಸ್ಟ್ ವಾಕರ್ ಯೂನಿಸ್ ಕೂಡ ಸಚಿನ್ ಟ್ವೀಟ್ನ್ನ ಒಪ್ಪಿಕೊಂಡಿದ್ದಾರೆ.
Next Story