Top

ರೈಲ್ವೆ ನಿಲ್ದಾಣದಲ್ಲಿ ಮಲಗಿದವನ ಮೇಲೆ ಪೇದೆ ಹಲ್ಲೆ

ರೈಲ್ವೆ ನಿಲ್ದಾಣದಲ್ಲಿ ಮಲಗಿದವನ ಮೇಲೆ ಪೇದೆ ಹಲ್ಲೆ
X

ಬಾಗಲಕೋಟೆ: ರೇಲ್ವೆ ನಿಲ್ದಾಣದಲ್ಲಿ ಮಲಗಿದ ವ್ಯಕ್ತಿಗೆ ರೇಲ್ವೆ ಪೇದೆ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ನಡೆದಿದೆ.

ರಾಘವೇಂದ್ರ ಗೋಕಾಕ್ ಎಂಬ ವ್ಯಕ್ತಿ ಮೇಲೆ ಅರುಣಕುಮಾರ ಎಂಬ ಪೊಲೀಸ್ ಹಲ್ಲೆ ಮಾಡಿದ್ದಾನೆ. ಇದರಿಂದ ರಾಘವೇಂದ್ರನ ಮೊಣಕೈಗೆ ಗಾಯವಾಗಿದೆ. ಕೂಡಲೆ ಆಂಬುಲೆನ್ಸ್ ಕರೆಯಿಸಿ ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ರಾಘವೇಂದ್ರ ಗದಗ ಮೂಲದವನಾಗಿದ್ದು,ಪತ್ನಿ ಬೇಗಮ್ ಮತ್ತು ಮಗಳ ಜೊತೆ ರೇಲ್ವೆ ನಿಲ್ದಾಣದಲ್ಲಿ ಮಲಗಿದ್ದ.ಯಾವುದೇ ಟಿಕೆಟ್ ಕೂಡ ಇರಲಿಲ್ಲವಂತೆ. ಆದ್ದರಿಂದ ನಿಲ್ದಾಣದಿಂದ ಎದ್ದು ಹೋಗುವಂತೆ ಪೇದೆ ಅರುಣ ಕುಮಾರ ಹೇಳಿದ್ದಾನೆ. ಪೇದೆ ಮಾತು ಕೇಳದಿದ್ದಾಗ ಲಾಟಿಯಿಂದ ಹೊಡೆದು ಹಲ್ಲೆ ಮಾಡಿದ್ದಾನಂತೆ. ಇದನ್ನು ಕಂಡ ರೇಲ್ವೆ ನಿಲ್ದಾಣದಲ್ಲಿನ ಇತರೆ ಪ್ರಯಾಣಿಕರು ಪೇದೆ ಅರುಣಕುಮಾರನನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ರೇಲ್ವೆ ಇಲಾಖೆ ಪಿಎಸ್ ಐ ಕೃಷ್ಣಮೂರ್ತಿ ಅವರಿಗೆ ರಾಘವೇಂದ್ರನ ಚಿಕಿತ್ಸೆಯನ್ನು ನೀವೆ ಭರಿಸಬೇಕೆಂದು ಆಗ್ರಹ ಮಾಡಿದರು. ರಾಘವೇಂದ್ರ ಕಳೆದ ಒಂದು ವಾರದಿಂದ ರೇಲ್ವೆ ನಿಲ್ದಾಣದಲ್ಲೇ ಪತ್ನಿ ಮತ್ತು ಮಗಳ ಸಮೇತ ಮಲಗುತ್ತಿದ್ದ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ರಾಘವೇಂದ್ರನ ಮೊಣಕೈ ಸ್ವಲ್ಪ ಬಾವು ಬಂದಿದ್ದು,ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Next Story

RELATED STORIES