Top

ನಿನ್ನೆ ಮೊನ್ನೆ ಬಂದೊರೆಲ್ಲಾ ನಂ.1: ಪ್ರೇಮ್ ವಿವಾದಾತ್ಮಕ ಟ್ವೀಟ್​

ನಿನ್ನೆ ಮೊನ್ನೆ ಬಂದೊರೆಲ್ಲಾ ನಂ.1: ಪ್ರೇಮ್ ವಿವಾದಾತ್ಮಕ ಟ್ವೀಟ್​
X

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಅನಗತ್ಯ ವಾದ-ವಿವಾದ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ತಮ್ಮ ನೆಚ್ಚಿನ ನಟನನ್ನು ಆರಾಧಿಸುವ ಭರದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಯಕ ನಟರೇ ಈ ವಿವಾದಗಳನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೀಗ ನಿರ್ದೇಶಕ ಹಾಗೂ ನಟ ಪ್ರೇಮ್ ತಮ್ಮ ಚಿತ್ರದ ಹಾಡಿನ ಬಗ್ಗೆ ಮಾಡಿದ ಟ್ವೀಟ್ ಈಗ ವಿವಾದಕ್ಕೆ ತಿರುಗಿದೆ.

ಪ್ರಸ್ತುತ ಪ್ರೇಮ್​ ನಿರ್ದೇಶಿಸುತ್ತಿರುವ ಮಲ್ಟಿ ಸ್ಟಾರ್ ಚಿತ್ರ ವಿಲನ್ ಚಿತ್ರದ ಹಾಡಿನ ಚಿತ್ರೀಕರಣ ಪೂರೈಸಿತು. ಈ ಸಂಭ್ರಮವನ್ನು ಪ್ರೇಮ್ ಟ್ವೀಟರ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಸಂಭ್ರಮ ಹಂಚಿಕೊಳ್ಳುವ ಭರದಲ್ಲಿ ಹಾಡಿನ ಸಾಲೊಂದನ್ನು ಹಾಕಿದ್ದಾರೆ ಅದು ಈ ವಿವಾದಕ್ಕೆ ತಿರುಗಿದೆ.

ನಿನ್ನೆ ಮೊನ್ನೆ ಬಂದೋರೆಲ್ಲಾ ನಂ.1 ಅಂತಾರಲ್ಲ..ಈ ಹಾಡಿನ ಚಿತ್ರೀಕರಣ ಮುಗಿಯಿತು. ಶಿವರಾಜ್​ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ವಿ.ನಾಗೇಶ್ ಅದ್ಭುತವಾಗಿ ಕೋರಿಯೋಗ್ರಾಫ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಹಾಡಿನ ಚಿತ್ರೀಕರಣದ ಕೆಲವೊಂದು ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ.

ಆದರೆ ಇತ್ತೀಚೆಗೆ ನಾನೇ 'ಬಾಸ್​' ನಾನೇ ನಂ.1 ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಶ್​, ದರ್ಶನ್​, ದುನಿಯಾ ವಿಜಿ, ಸುದೀಪ್​ ಮುಂತಾದ ನಾಯಕ ನಟರ ನಡುವೆ ಯಾರು ನಂ.1 ನಟ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಅಭಿಮಾನಿಗಳು ತಮ್ಮದೇ ಆದ ವ್ಯಾಖ್ಯಾನ ನೀಡುತ್ತಿದ್ದು, ಜಟಾಪಟಿಗೆ ಕಾರಣವಾಗಿದೆ. ಆದರೆ ಇದೀಗ ಪ್ರೇಮ್ ಅವರ ಟ್ವೀಟ್ ವಿವಾದಕ್ಕೆ ಬೆಂಕಿ ಸುರಿದಿದೆ.

ಸದಾ ಪ್ರಚಾರದ ಮೂಲಕ ತಮ್ಮ ಸಿನಿಮಾ ಪ್ರಮೋಟ್ ಮಾಡುವ ಪ್ರೇಮ್ ಉದ್ದೇಶಪೂರ್ವಕವಾಗಿಯೇ ಈ ರೀತಿಯ ಟ್ವೀಟ್ ಹಾಕಿದ್ದಾರೆಯೇ ಅಂತ ಅದರ ಹಿಂದೆ ಬೇರೆಯದ್ದೇ ಕಾರಣವಿದೆಯೇ ಎಂಬುದು ಕಾದು ನೋಡಬೇಕಿದೆ.

Next Story

RELATED STORIES