Top

ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ ಸಜ್ಜು

ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ ಸಜ್ಜು
X

ನವದೆಹಲಿ: ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಐರ್ಲೆಂಡ್ ಕ್ರಿಕೆಟ್ ಮಂಡಳಿ 14 ಆಟಗಾರರನ್ನೊಳಗೊಂಡ ಆಟಗಾರರ ಹೆಸರುಗಳನ್ನ ಪ್ರಕಟಿಸಿದೆ. ತಂಡದಲ್ಲಿ ಆಫ್ ಸ್ಪಿನ್ನರ್ ಆಂಡಿ ಮೆಕ್‍ಬ್ರಿನ್ ಮತ್ತು ಎಡಗೈ ವೇಗಿ ಜೊಶುಹಾ ಲಿಟಲ್‍ಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ 18 ವರ್ಷದ ಲಿಟಲ್ ಐರ್ಲೆಂಡ್ ತಂಡದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಜೂನ್ 27 ಮತ್ತು 29 ರಂದು ಡಬ್ಲಿನ್‍ನಲ್ಲಿ ಟಿ 20 ಸರಣಿ ನಡೆಯಲಿದೆ.

ಐರ್ಲೆಂಡ್ ತಂಡ

ಗ್ಯಾರಿ ವಿಲ್ಸನ್ (ನಾಯಕ), ಆಂಡ್ರಿವ್ ಬಾಲ್ಬ್ರಿನ್, ಪೀಟರ್ ಚೇಸ್, ಜಾರ್ಜ್ ಡಾಕ್ರೆಲ್, ಜೋಶ್ ಲಿಟಲ್, ಅಂಡ್ರಿವ್ ಮೆಕ್‍ಬ್ರಿನ್, ಕೆವಿನ್ ಒಬ್ರಿಯಾನ್, ವಿಲಿಯಮ್ ಪೋರ್ಟ್ ಫೀಲ್ಡ್, ಸ್ಟುವರ್ಟ್ ಪಾಯಿಂಟರ್, ಬೊಯ್ಡ್ ರಾಂಕಿನ್, ಜೇಮ್ಸ್ ಶಾನನ್,ಸಿಮಿ ಸಿಂಗ್, ಪಾಲ್ ಸ್ಟಿರ್ಲಿಂಗ್, ಸ್ಟುವರ್ಟ್ ಥಾಮ್ಸನ್.

Next Story

RELATED STORIES