Top

ಕೈಗಾ ವಿಕಿರ್ಣಕ್ಕೆ ಹೆಚ್ಚಾದ ಕ್ಯಾನ್ಸರ್ : ಮಹಿಳೆಯರಲ್ಲೇ ಹೆಚ್ಚು ಎಂದ ಸಮೀಕ್ಷೆ.!!

ಕೈಗಾ ವಿಕಿರ್ಣಕ್ಕೆ ಹೆಚ್ಚಾದ ಕ್ಯಾನ್ಸರ್ : ಮಹಿಳೆಯರಲ್ಲೇ ಹೆಚ್ಚು ಎಂದ ಸಮೀಕ್ಷೆ.!!
X

ಉತ್ತರ ಕನ್ನಡ : ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ ರೇಡಿಯೇಷನ್‌ನಿಂದಾಗಿ ಕ್ಯಾನ್ಸರ್ ಪ್ರಮಾಣ ದುಪ್ಪಟ್ಟಾಗಿವೆ ಎಂಬ ಆತಂಕಕಾರಿ ಸಂಶೋಧನಾ ವರದಿ ಟಿ.ವಿ5 ಗೆ ದೊರಕಿದೆ.

ಕರ್ನಾಟಕ ಸರ್ಕಾರ ಹಾಗೂ ಕೆ.ಪಿ.ಸಿ.ಐ.ಎಲ್ ( ಕೈಗಾ ಅಣು ವಿದ್ಯುತ್ ಸ್ಥಾವರ ) ದವರ ಸಹಭಾಗಿತ್ವದಲ್ಲಿ ಮುಂಬೈ ಮೂಲದ ಪ್ರಸಿದ್ಧ ಟಾಟಾ ಮೆಮೋರಿಯಲ್ ಸೆಂಟರ್ ನಡೆಸಿರುವ ಸಂಶೋಧನಾ ವರದಿ ಇದಾಗಿದೆ. ಈ ವರದಿಯಲ್ಲಿ 2010 ರಿಂದ 2013ರ ವರೆಗೆ ಕಾರವಾರ ತಾಲೂಕಿನ ಕೈಗಾ ದಲ್ಲಿನ ಅಣು ವಿದ್ಯುತ್ ಸ್ಥಾವರವಿರುವ ಕೈಗಾದ ಸುತ್ತಮುತ್ತ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯ ಬೆಚ್ಚಿ ಬೀಳುವ ಮಾಹಿತಿ ಹೊರ ಬಿದ್ದಿದೆ.

ಅಂದಹಾಗೇ, ಹಿಂದಿಗಿಂತಲೂ ಶೇಕಡ 200% ಕ್ಯಾನ್ಸರ್ ಪೀಡಿತರು ಹೆಚ್ಚಾಗಿದ್ದಾರೆ. ತಜ್ಞ ಸಂಶೋಧನಾ ತಂಡ ವರದಿ ನೀಡಿರುವ ಪ್ರಕಾರ ಮೂರು ವರ್ಷದಲ್ಲಿ 316 ಜನ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಇದರಲ್ಲಿ ಪುರುಷರು-129, ಮಹಿಳೆಯರು - 187 ಜನರಾಗಿದ್ದಾರಂತೆ. ಹೀಗಾಗಿ ಶೇಕಡ 30% ಮಹಿಳೆಯರೇ ಈ ರೋಗಕ್ಕೆ ತುತ್ತಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಸಮೀಕ್ಷೆಯ ವರದಿಯಲ್ಲಿ ಇದೆ.

ಅದರಲ್ಲೂ ಮಹಿಳೆಯರಲ್ಲಿ ಸ್ತನ, ಬಾಯಿ, ಗರ್ಭಕೋಶ ಕ್ಯಾನ್ಸರ್ ದುಪ್ಪಟ್ಟಾಗಿದ್ದರೇ, ಪುರುಷರಲ್ಲಿ ಬಾಯಿ, ಗಂಟಲು, ಅನ್ನನಾಳ, ಲಂಗ್ಸ್ ಕ್ಯಾನ್ಸರ್‌ಗೆ ಕೈಗಾದ ಅಣುವಿದ್ಯುತ್ ಸ್ಥಾವರದಿಂದ ಹೊರಸೂಸುವ ವಿಕಿರಣವೇ ಕಾರಣವಾಗಿದೆಯಂತೆ.

ಇನ್ನು ರೋಗ ಪೀಡಿತರು ನೆರೆಯ ಗೋವಾ ಹಾಗೂ ಕರ್ನಾಟಕದ ವಿವಿಧ ಭಾಗದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಸಂಶೋಧನೆ ಬಗ್ಗೆ ಮಾರ್ಚ 2018ರಂದು ಸಮಗ್ರ ಮಾಹಿತಿ ಇರುವ ಪುಸ್ತಕವನ್ನು ಪ್ರಿಂಟ್ ಮಾಡಿದ್ದು, ಈ ವರೆಗೂ ಬಿಡುಗಡೆ ಮಾಡಿಲ್ಲ. ಆದರೇ ಈಗಾಗಲೆ ಈ ಮಾಹಿತಿ ಸೋರಿಕೆ ಯಾಗಿ ಟಿ.ವಿ5 ಗೆ ದೊರಕಿದೆ.

[story-lines]

ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು ಈ ವರೆಗೂ ಮಾಹಿತಿ ಲಭ್ಯ ವಾಗಿಲ್ಲ. ಇದರ ಅಂಕಿ ಅಂಶ ಬಂದಕೂಡಲೇ ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ರೇಡಿಯೇಷನ್‌ನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದರೇ ಇದರಿಂದಲೇ ಬಂದಿದೆಯೇ ಎಂಬುದು ತಿಳಿಯಬೇಕಿದೆ ಎಂದಿದ್ದಾರೆ.

ಆದ್ರೇ, ಏನೇ ಆದ್ರೂ, ಇದೊಂದು ಸ್ಪೋಟಕ ಮಾಹಿತಿಯಾಗಿದ್ದು, ಮಾನವ ಸಂಕುಲದ ಮೇಲೆ ಬೀರುತ್ತಿರುವ ದೊಡ್ಡ ಪರಿಣಾಮವಾಗಿದೆ. ಇದು ಹೀಗೆ ಮುಂದುವರೆದರೇ, ಕೈಗಾ ಪ್ರದೇಶದ ಸುತ್ತಮುತ್ತಲ ಜನರು ಹೆಚ್ಚು ಹೆಚ್ಚು ಕ್ಯಾನ್ಸರ್‌ ಪೀಡಿತರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಎಂದು ಆಶಿಸೋಣ.

ವರದಿ : ಪ್ರಶಾಂತ ಮಹಾಲೆ, ಟಿವಿ5 ಕಾರವಾರ

Next Story

RELATED STORIES