Top

ಪೊಲೀಸ್ ಠಾಣೆಯಲ್ಲಿ ಸೀಮಂತ : ಯಾರಿಗೆ ಗೊತ್ತಾ.?

ಪೊಲೀಸ್ ಠಾಣೆಯಲ್ಲಿ ಸೀಮಂತ : ಯಾರಿಗೆ ಗೊತ್ತಾ.?
X

ಮಂಡ್ಯ : ಗರ್ಭಿಣಿ ಸ್ತ್ರೀಗೆ ಕುಟುಂಬ ವರ್ಗ, ಬಂಧು ಬಳಗದವರು ಸೀಮಂತ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯ. ಆದ್ರೆ ಒರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಠಾಣೆಯ ಸಿಬ್ಬಂದಿಯೇ ಹೃದಯ ತುಂಬಿ ಕುಟುಂಬಸ್ಥರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು.

ಹೌದು, ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮಾರಾಣಿ ಅವ್ರ ಸೀಮಂತ ಕಾರ್ಯಕ್ರಮ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಸ್ಕೃತಿಯಂತೆ ಸಮಾರಂಭ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಬ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರು ಪಾಂಡವಪುರ ಪೊಲೀಸ್ ಠಾಣೆಗೆ ಕಳೆದ ಹತ್ತು ತಿಂಗಳ‌ ಹಿಂದೆ ಕರ್ತವ್ಯಕ್ಕೆ ಹಾಜರಾಗಿ ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧ ಹಂತದಲ್ಲಿ ಉತ್ತಮ‌ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ರು. ಸದಾ ಜಗಳ, ಗಲಾಟೆ, ಕ್ರೈಂ ಸೇರಿದಂತೆ ಅನೇಕ ಘಟನೆಗಳ ಬಗ್ಗೆ ದೂರು‌ ಪಡೆಯುವ ಪೊಲೀಸ್ ಠಾಣೆಯಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ಸೀಮಂತ ಸಮಾರಂಭ ನಡೆದದ್ದು‌ ಒಂದು ವಿಶೇಷವಾಗಿತ್ತು.

ಸೀಮಂತ ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಸುಮಾರಾಣಿ ಅವರಿಗೆ ಮಹಿಳಾ ಸಿಬ್ಬಂದಿ ವರ್ಗ ಹರಿಶಿನ ಕುಂಕುಮ ಹಚ್ಚಿ, ಹಣ್ಣು ಹಂಪಲು, ಸೀರೆ ನೀಡಿ ಮಡಿಲು‌ ತುಂಬಿದರು. ಜೊತೆಗೆ ಠಾಣೆಯ ಹಿರಿಯರು ಸುಮಾರಾಣೆ ಅವರಿಗೆ ಅಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು. ಇನ್ನು ಸಹೋದ್ಯೋಗಿ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಬ್‌ಇನ್ಸ್ ಸ್ಪೆಕ್ಟರ್ ಸುಮಾರಾಣಿ ಸಹ ಸಂತಸ ವ್ಯಕ್ತಪಡಿಸಿದ್ರು‌.

ಒಟ್ಟಾರೆ ಸದಾ ಕ್ರೈಂ, ತನಿಖೆ, ವಿಚಾರಣೆ ಇಂತಹ ವಿವಾರದಲ್ಲೇ ಬ್ಯುಸಿಯಾಗಿರುತ್ತಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಮೇಲಾಧಿಕಾರಿಯ ಸೀಮಂತ ಮಾಡಿ ಅಧಿಕಾರಿಯ ಮೇಲಿರುವ ಅಭಿಮಾನ ಮೆರೆದ್ರು. ಈ ಮೂಲಕ ಪೊಲೀಸ್‌ ಠಾಣೆಯಲ್ಲಿ ಕಾನೂನು ಪಾಲನೆ ಮಾತ್ರವಲ್ಲ, ಸಂಪ್ರದಾಯಕ್ಕೂ ನಾಂದಿ ಹಾಡಲಾಗುತ್ತದೆ ಎಂಬುದನ್ನು ಎಲ್ಲರಿಗೂ ತೋರಿಸಿಕೊಟ್ಟರು.

ವರದಿ : ಎಂ.ಕೆ.ಮೋಹನ್ ರಾಜ್, TV 5 ಮಂಡ್ಯ

Next Story

RELATED STORIES