Top

Exclusive: 28ರಂದು ವಿಲನ್ ಚಿತ್ರದ ಟೀಸರ್ ಬಿಡುಗಡೆ: 500 ಶುಲ್ಕ ವಿಧಿಸಿರುವುದು ಯಾಕೆ ಗೊತ್ತಾ?

Exclusive: 28ರಂದು ವಿಲನ್ ಚಿತ್ರದ ಟೀಸರ್ ಬಿಡುಗಡೆ: 500 ಶುಲ್ಕ ವಿಧಿಸಿರುವುದು ಯಾಕೆ ಗೊತ್ತಾ?
X

ಭಾರೀ ಕುತೂಹಲ ಮೂಡಿಸಿರುವ ಹಾಗೂ ವಿವಾದ ಹುಟ್ಟುಹಾಕಿರುವ 'ವಿಲನ್' ಚಿತ್ರದ ಟೀಸರ್ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.

ಶಿವರಾಜ್​ ಕುಮಾರ್ ಮತ್ತು ಸುದೀಪ್​ ಮೊದಲ ಬಾರಿ ನಟಿ, ಪ್ರೇಮ್ ನಿರ್ದೇಶಿಸಿರುವ ವಿಲನ್ ಚಿತ್ರ ಕನ್ನಡ ಅಲ್ಲದೇ ಬಹುಭಾಷೆಯಲ್ಲಿ ನಿರ್ಮಾಣವಾಗಿದ್ದು, ಇದೇ ತಿಂಗಳು ಅಂದರೆ ಜೂನ್ 28ರಂದು ಟೀಸರ್ ಬಿಡುಗಡೆ ಆಗಲಿದೆ. ಟೀಸರ್ ಅನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಉದ್ಗಾಟಿಸಲಿದ್ದಾರೆ.

ವಿಶೇಷ ಅಂದರೆ ಈ ಟೀಸರ್ ಬಿಡುಗಡೆಯನ್ನು ಸಂಕಷ್ಟದಲ್ಲಿರುವ ಹಿರಿಯ ನಿರ್ದೇಶಕರಿಗೆ ಅರ್ಪಿಸಲಾಗಿದೆ. ಅಲ್ಲದೇ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರಿಗೆ 500 ರೂ. ಶುಲ್ಕ ವಿಧಿಸಲಾಗಿದೆ. ಏಕೆಂದರೆ ಈ ರೀತಿ ಸಂಗ್ರಹವಾದ ಮೊತ್ತವನ್ನು ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡಲು ಉದ್ದೇಶಿಸಲಾಗಿದೆ.

Next Story

RELATED STORIES