Top

ಕ್ರೊವೇಶಿಯಾ ಜಯಭೇರಿ: ಹೊರಬೀಳುವ ಭೀತಿಯಲ್ಲಿ ಅರ್ಜೆಂಟೀನಾ

ಕ್ರೊವೇಶಿಯಾ ಜಯಭೇರಿ: ಹೊರಬೀಳುವ ಭೀತಿಯಲ್ಲಿ ಅರ್ಜೆಂಟೀನಾ
X

ಮಾಸ್ಕೊ (ರಷ್ಯಾ): ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಅರ್ಜೆಂಟೀನಾ ತಂಡ ಈ ಬಾರಿ ಫಿಫಾ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದೆ. ಕ್ರೊವೇಶಿಯಾ ವಿರುದ್ಧ 0-3ರಿಂದ ಸೋಲುವ ಮೂಲಕ ಮಾಜಿ ಚಾಂಪಿಯನ್​ ಅರ್ಜೆಂಟೀನಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದೆ.

ಗುರುವಾರ ತಡರಾತ್ರಿ ನಡೆದ ಡಿ ಗುಂಪಿನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಒಂದು ಕೂಡ ಗೋಲು ಬಾರಿಸದೇ ನಿರಾಸೆ ಅನುಭವಿಸಿತು. ಕ್ರೊವೇಶಿಯಾ ತಂಡದ ಪರ ಅಂಟೆ ರೆಬಿಕ್ (54ನೇ ನಿಮಿಷ), ಲೂಕಾ ಮೊಡ್ನಿಕ್ (80ನೇ ನಿಮಿಷ) ಮತ್ತು ಇವಾನ್ ರಾಕಿಟಿಕ್ (90+1ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಮಾಜಿ ಚಾಂಪಿಯನ್​ಗೆ ಚೇತರಿಸಿಕೊಳ್ಳಲು ಆಗದ ಆಘಾತ ನೀಡಿದರು.

ಲೀಗ್​ನ ಮೊದಲ ಪಂದ್ಯದಲ್ಲಿ ಐಸ್​ಲ್ಯಾಂಡ್ ವಿರುದ್ಧ 1-1 ಗೋಲಿನಿಂದ ಡ್ರಾ ಮಾಡಿಕೊಂಡಿತ್ತು. ಇದೀಗ ಕ್ರೊವೇಶಿಯ ವಿರುದ್ಧ ಸೋಲುಂಡಿದೆ. ಲೀಗ್​ನ ಅಂತಿಮ ಪಂದ್ಯದಲ್ಲಿ ನೈಜಿರಿಯಾ ವಿರುದ್ಧ ಗೆದ್ದರೂ ಮುಂದಿನ ಹಂತಕ್ಕೆ ತೇರ್ಗಡೆ ಆಗುವುದು ಅನುಮಾನವಿದೆ. ಏಕೆಂದರೆ ಉಳಿದ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿದೆ.

Next Story

RELATED STORIES