Top

ಫೇಸ್‌ಬುಕ್‌ನಲ್ಲಿ ಮತ್ತೋರ್ವ ಪೇದೆಯ ಎಡವಟ್ಟು..!

ಫೇಸ್‌ಬುಕ್‌ನಲ್ಲಿ ಮತ್ತೋರ್ವ ಪೇದೆಯ ಎಡವಟ್ಟು..!
X

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೇದೆಯೋರ್ವ ಪ್ರಧಾನಿ ಮೋದಿ ಪರ ಫೇಸ್‌ಬುಕ್ ಪೋಸ್ಟ್ ಹಾಕಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ಹೊಗಳುವ ಭರದಲ್ಲಿ ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಅಣಕಿಸುವ ಪೋಸ್ಟ್ ಹಾಕಿದ್ದಾರೆ.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ದಕ್ಷಿಣ ಎಸಿಪಿ ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ರವಿಕುಮಾರ್ ಎಂಬುವವರು ಈ ರೀತಿ ಪೋಸ್ಟ್ ಹಾಕಿದ್ದಾರೆ. ಇನ್ನು ಕಳೆದ ವಾರ ಶಹರ ಠಾಣೆ ಪೇದೆ ಅರುಣ್ ಡೊಳ್ಳಿನ ಎಂಬುವವರು ಸಾಲಮನ್ನಾ ಮಾಡದೇ ಇರುವ ಕುರಿತು ಸಿಎಂ ಅವರನ್ನು ಪ್ರಶ್ನಿಸಿದ್ದಕ್ಕಾಗಿ, ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.ಈ ಪ್ರಕರಣ ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Next Story

RELATED STORIES