Top

ಯೋಗ ದಿನಾಚರಣೆ ಆಚರಿಸಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಸ್

ಯೋಗ ದಿನಾಚರಣೆ ಆಚರಿಸಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಸ್
X

ಇಂದು ಅಂತರಾಷ್ಟ್ರೀಯ ಯೋಗದಿನಾಚರಣೆ ಹಿನ್ನಲೆ ರಾಷ್ಟ್ರದ ಮೂಲೆಮೂಲೆಯಲ್ಲೂ ಯೋಗ ಭ್ಯಾಸ ಜೋರಾಗಿದ್ದು, ಇದಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಹೊರತಾಗಿರಲಿಲ್ಲ... ನಟಿ ಸಂಜನಾ ನೇತೃತ್ವದ ಅಕ್ಷರ ಯೋಗ ಅಕಾಡೆಮಿಯಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಯೋಗ ಮಾಡೋದ್ರ ಮೂಲಕ ಫಿಟ್​ನೆಸ್ ಮಂತ್ರವನ್ನ ಸಾರಿದ್ದಾರೆ.

ಸ್ಯಾಂಡಲ್​ವುಡ್ ನಟಿ ಸಂಜನಾ ಗರ್ಲಾನಿ ಕಳೆದ 2 ವರೆ ವರ್ಷಗಳಿಂದ, ಕೋರಮಂಗದಲ್ಲಿ ಅಕ್ಷರ ಯೋಗ ಅಕಾಡೆಮಿ ನಡೆಸ್ತಿದ್ದಾರೆ..ಇಂದು ಯೋಗದಿನಾಚರಣೆಯ ಅಂಗವಾಗಿ ಗುರೂಜಿ ಮಹಾನ್ ಯೋಗಿ ಅಕ್ಷರನಾಥ್ ನೇತೃತ್ವದಲ್ಲಿ ಸೆಲೆಬ್ರೆಟಿಗಳ ಜೊತೆಗೂಡಿ ಯೋಗಾಭ್ಯಾಸವನ್ನ ಮಾಡಿದ್ದಾರೆ.

ಅಂದ್ಹಾಗೇ ಇಂದು ಅಕ್ಷರ ಅಕಾಡೆಮಿ ಯೋಗ ಕಾರ್ಯಕ್ರಮದಲ್ಲಿ ನಟ ಲವ್ಲಿ ಸ್ಟಾರ್ ಪ್ರೇಮ್,ಬಿಗ್​ ಬಾಸ್ ಖ್ಯಾತಿಯ ಪ್ರಥಮ್ ಮತ್ತು ನಟ ಅನಿರುಧ್ದ ಕೂಡ ಭಾಗವಾಹಿಸಿದ್ದು, ಬೆಳಿಗ್ಗೆ 8.30 ರಿಂದ 10 ಗಂಟೆವರೆಗೆ ಅಂದ್ರೆ ಸುಮಾರು 1.30 ಗಂಟೆಗಳ ಕಾಲ ಯೋಗಾಭ್ಯಾಸ ಮಾಡಿದ್ದಾರೆ.

ಇಷ್ಟು ದಿನ ಜಿಮ್​ ನಲ್ಲಿ ವರ್ಕ್​ಔಟ್ ಮೂಲಕ ದೇಹವನ್ನ ಫೀಟ್ ಆಗಿ ಇರಿಸಿಕೊಳ್ತಿದ್ದ ಸೆಲೆಬ್ರೆಟಿಗಳು, ದೇಹದ ಜೊತೆ ಮನಸ್ಸಿಗೂ ನೆಮ್ಮದಿ ಸಿಗುವಂತ ಯೋಗದ ಮೊರೆ ಹೋಗಿದ್ದು, ಯೋಗದ ಮೂಲಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳಿ ಅಂತ ಸಂದೇಶ ನೀಡಿದ್ದಾರೆ.

ಒಟ್ನಲ್ಲಿ ಈಗಿನ ಜಿಮ್​ ಯುಗದಲ್ಲೂ, ಎಲ್ಲರೂ ಯೋಗದ ಮೊರೆ ಹೋಗ್ತಿರೋದು ಖುಷಿಯ ವಿಚಾರ.ವರ್ಕ್​ಔಟ್ ಕೇವಲ ದೇಹವನ್ನ ದಂಡಿಸುವಲ್ಲಿ ಉಪಯೋಗವಾದ್ರೆ, ಯೋಗ ದೇಹದ ಜೊತೆಗೆ ಮನಸ್ಸಿನ ಫಿಟ್​ನೆಸ್​ಗೂ ಸಹಕಾರಿಯಾಗಿದೆ.

ಅರ್ಚನಾಶರ್ಮಾ, ಟಿವಿ5

Next Story

RELATED STORIES