Top

ಜನಪರ ಬಜೆಟ್​ಗೆ ಕುಮಾರಸ್ವಾಮಿ ಅಂತಿಮ ಕಸರತ್ತು ಶುರು

ಜುಲೈ ಮೊದಲವಾರದಲ್ಲಿ ಹೊಸ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ಹೊಸ ಸರ್ಕಾರದ ಹೊಸ ಬಜೆಟ್ ಮಂಡನೆಗೆ ಕುಮಾರಸ್ವಾಮಿ ಫುಲ್ ವರ್ಕೌಟ್ ಮಾಡ್ತಿದ್ದಾರೆ..ಜನಪರ ಬಜೆಟ್ ನೀಡುವ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ಬಜೆಟ್ ಪೂರ್ವ ಭಾವಿ ಸಭೆಯನ್ನ ನಡೆಸ್ತಿದ್ದಾರೆ.

ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿಎಂ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪದ ನಡುವೆಯೂ ಎಐಸಿಸಿ ಮಹಾರಾಜನ ಒಪ್ಪಿಗೆ ಪಡೆದು ಬಜೆಟ್ ಮಂಡನೆಗಿದ್ದ ಆತಂಕವನ್ನೂ ದೂರಮಾಡಿಕೊಂಡಿದ್ದಾರೆ. ಹೀಗಾಗಿ ಉತ್ತಮ ಹಾಗೂ ಜನಪರ ಬಜೆಟ್ ನೀಡಲು ಉತ್ಸುಕರಾಗಿರುವ ಹೆಚ್ಡಿಕೆ, ಇವತ್ತಿನಿಂದ ೧೦ ದಿನಗಳ ಕಾಲ ಎಲ್ಲಾ ಇಲಾಖೆಗಳ ಅಧಿಕಾರಿಗಳು,ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಇಂದು ಶಕ್ತಿಭವನದಲ್ಲಿ ಎಂಟು ಇಲಾಖೆಗಳ ಸಚಿವರು,ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ರು. ಕಾರ್ಮಿಕ, ಕಂದಾಯ, ಜಲಸಂಪನ್ಮೂಲ, ವೈದ್ಯಕೀಯ, ಕೌಶಲ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಭೆಯನ್ನ ನಡೆಸಿ ಬೇಕು-ಬೇಡಗಳ ಪಟ್ಟಿಯನ್ನ ಪಡೆದುಕೊಂಡರು.

ಇನ್ನು ಬೆಳಗ್ಗೆ ನಡೆದ ಕಾರ್ಮಿಕ ಇಲಾಖೆ ಸಭೆಯಲ್ಲಿ ಹಲವು ಬೇಡಿಕೆಗಳನ್ನ ಸಚಿವ ವೆಂಕಟರಮಣಪ್ಪ ಮುಂದಿಟ್ಟಿದ್ದಾರೆ. ತುಮಕೂರು ಹಾಗೂ ರಾಮನಗರದಲ್ಲಿ ಬೃಹತ್ ಕಾರ್ಮಿಕಭವನ ನಿರ್ಮಾಣ, ಕಾರ್ಮಿಕರಿಗೆ ವಿಮೆ ತುಂಬುತ್ತಿದ್ದ ಹಣ ಸರ್ಕಾರವೇ ಇಟ್ಟುಕೊಂಡು ಸಮಸ್ಯೆಗೊಳಗಾದ ಕಾರ್ಮಿಕನಿಗೆ ತಕ್ಷಣ ಪರಿಹಾರ ನೀಡುವುದರ ಬಗ್ಗೆ ಸಲಹೆ ಮುಂದಿಟ್ಟಿದ್ದಾರೆ. ಅಲ್ಲದೆ ಕಾರ್ಮಿಕರ ಜಾಗೃತಿಗಾಗಿ ಗ್ರಾಮಪಂಚಾಯತ್ ನಲ್ಲಿ ನೂಡನ್ ಅಧಿಕಾರಿಗಳನ್ನ ನೇಮಕಮಾಡುವ ಬಗ್ಗೆ ಸಲಹೆ ನೀಡಿದ್ದಾರೆ. ಇನ್ನು ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಭೆಯಲ್ಲೂ ಹಲವು ಬೇಡಿಕೆಯಿಟ್ಟಿದ್ದೇವೆ ಆದರೆ ಯಾವು ಅನ್ನುವುದನ್ನ ಬಹಿರಂಗಪಡಿಸಲ್ಲ ಅಂತ ಸಚಿವ ಡಿಕೆಶಿ ಸ್ಪಷ್ಟಪಡಿಸಿದರು.

ಇನ್ನು ಕಂದಾಯ ಇಲಾಖೆಯ ಸಭೆಗೆ ಆಗಮಿಸಿದ ಸಚಿವ ಆರ್.ವಿ.ದೇಶಪಾಂಡೆಗೆ ಪೊಲೀಸರು ಮುಜುಗರ ಉಂಟುಮಾಡಿದ್ರು..ಶಕ್ತಿಭವನದ ಮೊದಲ ಗೇಟ್ ಗೆ ಬೀಗ ಹಾಕಿ ಆ ಬಾಗಿಲಿನಿಂದ ಒಳಬನ್ನಿ ಅಂತ ಸಾಗಹಾಕಿದ್ರು..ಅನಿವಾರ್ಯವಾಗಿ ಅಲ್ಲಿಯೇ ಕಾರು ಬಿಟ್ಟು ದೇಶಪಾಂಡೆ ಸಾಹೇಬ್ರು ಮತ್ತೊಂದು ಗೇಟ್ ಮೂಲಕ ಒಳಪ್ರವೇಶಿಸಿದ್ರು..ಇದಾದ ಐದು ನಿಮಿಷದಲ್ಲಿಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೂಡ ಶಕ್ತಿಭವನಕ್ಕೆ ಬಂದ್ರು..ಆದ್ರೆ ಗೇಟ್ ಮುಂದೆ ಸರಸರನೆ ಬಂದ ಪೊಲೀಸರು ಗೇಟ್ ಕೀ ತೆಗೆದು ರೇವಣ್ಣನವರು ಕುಳಿತಿದ್ದ ಕಾರನ್ನೇ ಒಳಗೆ ಬಿಟ್ರು..ಡಿಕೆಶಿ,ವೆಂಕಟರಮಣಪ್ಪಸೇರಿಯಾವ ಸಚಿವರ ಕಾರನ್ನೂ ಒಳ ಬಿಡದ ಪೊಲೀಸರು,ರೇವಣ್ಣನವರನ್ನ ಸೂಪರ್ ಸಿಎಂ ಅಂತ ಟ್ರೀಟ್ ಮಾಡಿದ್ದಾರೆ..ಇವತ್ತು ತಮ್ಮ ಇಲಾಖೆಯ ಮೀಟಿಂಗ್ ಇಲ್ಲದಿದ್ರೂ ರೇವಣ್ಣ ಸಭೆಗೆ ಬಂದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ...

ಇದರ ನಡುವೆಯೇ ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಕೂಡ ಶಕ್ತಿಭವನಕ್ಕೆ ಬೇಟಿ ಕೊಟ್ರು..ಸಚಿವ ಸ್ಥಾನದ ಮೇಲೆ ಇನ್ನೂ ನನ್ನ ಆಸೆಯಿದೆ ಅನ್ನೋದನ್ನ ಒತ್ತಿಒತ್ತಿ ಹೇಳಿದ್ರು,ಇವರ ನಡುವೆ ಶಾಸಕ ಮುನಿರತ್ನ, ಎಸ್.ಟಿ. ಸೋಮಶೇಖರ್ ಕೂಡ ಭೇಟಿ ನೀಡಿ ಹೋದರು.

Next Story

RELATED STORIES