Top

ಡ್ರಾ ಮಾಡಿಕೊಂಡ ಡೆನ್ಮಾರ್ಕ್​, ಆಸ್ಟ್ರೇಲಿಯಾ ಆಸೆ ಜೀವಂತ

ಡ್ರಾ ಮಾಡಿಕೊಂಡ ಡೆನ್ಮಾರ್ಕ್​, ಆಸ್ಟ್ರೇಲಿಯಾ ಆಸೆ ಜೀವಂತ
X

ಮಾಸ್ಕೊ: ಆಸ್ಟ್ರೇಲಿಯಾ ತಂಡದ ನಾಯಕ ಮಿಲೆ ಜೆಡಿನೆಕ್ ಫಿಫಾ ವಿಶ್ವಕಪ್​ನಲ್ಲಿ ಸತತ ಮೂರನೇ ವಿಶ್ವಕಪ್ ಗೋಲು ಬಾರಿಸಿದರು. ಈ ಮೂಲಕ ಫೀಫಾ ವಿಶ್ವಕಪ್​ನಲ್ಲಿ ಬಲಿಷ್ಠ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯ ಸಮಬಲದಲ್ಲಿ ಅಂತ್ಯಗೊಳ್ಳುವ ಮೂಲಕ ಎರಡೂ ತಂಡಗಳು ಪ್ರೀ ಕ್ವಾರ್ಟರ್​ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಗುರುವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ- ಡೆನ್ಮಾರ್ಕ್​ ತಂಡಗಳು 1-1ರಿಂದ ಸಮಬಲ ಸಾಧಿಸಿದವು. ಆಸ್ಟ್ರೇಲಿಯಾ ಪರ ಮಿಲೆ ಜೆಡಿನೆಕ್ ಪಂದ್ಯದ (38ನೇ ನಿಮಿಷ) ಮತ್ತು ಡೆನ್ಮಾರ್ಕ್​ ಪರ ಕ್ರಿಸ್ಟಿಯಾನ್ ಎರಿಕ್ಸನ್ (7ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು.

ಡೆನ್ಮಾರ್ಕ್ ತಂಡ ಇಡೀ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಪಂದ್ಯದ 37ನೇ ನಿಮಿಷದಲ್ಲಿ ಅತ್ಯಂತ ಸುಲಭವಾಗಿ ಎದುರಾಳಿಗೆ ಪೆನಾಲ್ಟಿ ಕಿಕ್ ಅವಕಾಶ ನೀಡಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಸುಲಭವಾಗಿ ಗೋಲು ಬಾರಿಸಿದ ಮಿಲೆ ಆಸ್ಟ್ರೇಲಿಯಾ ಪರ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಗೌರವಕ್ಕೆ ಪಾತ್ರರಾದರು.

Next Story

RELATED STORIES