Top

ನೈಸ್ ರೋಡ್​ನಲ್ಲಿ ಉಪ್ಪಿ ಡಾನ್ ಖದರ್..!!

ನೈಸ್ ರೋಡ್​ನಲ್ಲಿ ಉಪ್ಪಿ ಡಾನ್ ಖದರ್..!!
X

ಕಳೆದ ಮೂವತ್ತು ದಿನದ ಹಿಂದೆ ಇದೇ ದಿನ ಐ ಲವ್ ಯು... ವಿ ಲವ್ ಯು ಅಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಂಡ್ ಚಂದ್ರು ಟೀಂ, ಇದೀಗ ಮತ್ತೆ ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದೆ. ಹೆಲಿಕಾಫ್ಟರ್ ತರಿಸಿ ದುಬಾರಿ ದೃಶ್ಯಗಳನ್ನು ಚಿತ್ರಿಸುವ ಮೂಲಕ ಗಾಂಧಿನಗರದ ಹುಬ್ಬೇರಿಸಿದೆ. ಈ ಕುರಿತ ಎಕ್ಸ್​ಕ್ಲೂಸಿವ್ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಐ ಲವ್ ಯು... ರಿಯಲ್ ಸ್ಟಾರ್ ಉಪೇಂದ್ರ ಕಾಲೇಜ್ ಹುಡ್ಗನಾಗಿ ಬಣ್ಣ ಹಚ್ಚಿರೋ ಹೊಚ್ಚ ಹೊಸ ಸಿನಿಮಾ. ಉಪೇಂದ್ರ ಸ್ಟೈಲಿಶ್ ಲುಕ್ಸ್​ನಿಂದ ಸದ್ದು ಮಾಡಿದ್ದ ಐ ಲವ್ ಯು ಸಿನಿಮಾ, ಕಳೆದ ಮೇ 21ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಡಾ ಶಿವರಾಜ್​ಕುಮಾರ್ ಬಂದು ಕ್ಲಾಪ್ ಮಾಡಿ ಶುಭಹಾರೈಸಿದರು.

ಯೆಸ್... ಇದು ಸದ್ಯ ನೈಸ್ ರೋಡ್​ನಲ್ಲಿ ನಡೀತಿರೋ ಐ ಲವ್ ಯು ಚಿತ್ರದ ಶೂಟಿಂಗ್ ಝಲಕ್. ರಿಯಲ್ ಸ್ಟಾರ್ ಉಪೇಂದ್ರ ಡಾನ್ ಖದರ್​ನಲ್ಲಿ ಮಿಂಚ್ತಿದ್ದು, ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದ ಟಗರು ಚಿತ್ರದ ಕಾನ್​ಸ್ಟೇಬಲ್ ಸರೋಜಾ ಕೂಡ ಗ್ಲಾಮರ್ ಲುಕ್​ನಲ್ಲಿ ಶೂಟಿಂಗ್ ಸೊಗಡು ಸೊಬಗು ಹೆಚ್ಚಿಸಿದ್ದಾರೆ.

ಸ್ಯಾಂಡಲ್​ವುಡ್​ನ ಮೋಸ್ಟ್ ಪ್ಯಾಷನಬಲ್ ಡೈರೆಕ್ಟರ್ ಆರ್ ಚಂದ್ರು ನಿರ್ದೇಶಿಸಿ ನಿರ್ಮಿಸ್ತಿರುವ ಸಿನಿಮಾ ಇದಾಗಿದ್ದು, ಪ್ರತಿಯೊಂದು ಫ್ರೇಮ್ ಕೂಡ ಸಖತ್ ಅದ್ಧೂರಿಯಾಗಿ ಮೂಡಿ ಬರುತ್ತಿದೆ ಅಂದಹಾಗೆ ಚಂದ್ರು ಇಲ್ಲಿಯವರೆಗೆ ನಿರ್ಮಿಸಿರೋ ಎಲ್ಲಾ ಸಿನಿಮಾಗಳಿಗಿಂತ ದುಬಾರಿ ವೆಚ್ಚದಲ್ಲಿ ಕ್ವಾಲಿಟಿ ಮೇಕಿಂಗ್​ನಿಂದ ಈ ಸಿನಿಮಾ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.

ರಿಯಲ್ ಸ್ಟಾರ್ ಸಿನಿಮಾಗಳು ಸಾಕಷ್ಟು ರಿಯಲಿಸ್ಟಿಕ್ ಆಗಿರುತ್ವೆ. ಅದ್ರಲ್ಲೂ ಚಂದ್ರು ನಿರ್ಮಾಣ ಅಂದ್ರೆ ಅಲ್ಲೊಂದು ಅದ್ಧೂರಿತನ, ಆಡಂಭರ ಇದ್ದೇ ಇರುತ್ತೆ. ಸದ್ಯ ನಡೀತಿರೋ ಚಿತ್ರೀಕರಣಕ್ಕಾಗಿ ಐ ಲವ್ ಯು ಟೀಂ, ಚಾಪರ್ ಬಳಸಿದೆ. ಅಂದಹಾಗೆ ಇದಕ್ಕೆ ಮೂರು ಲಕ್ಷ ರೂ ಮುಂಗಡ ಹಣ ನೀಡಿ ಶೂಟಿಂಗ್ ಲೊಕೇಷನ್​ಗೆ ತಂದಿದ್ದಾರೆ ಚಂದ್ರು ಅಂಡ್ ಟೀಂ.

ಒಂದು ಗಂಟೆ ಹಾರಾಟಕ್ಕೆ 3 ಲಕ್ಷ ಚಾರ್ಜ್​ ಮಾಡೋ ಈ ಚಾಪರ್, ಸುಮ್ಮನೆ ನಿಂತಿದ್ರೂ ಸಹ ಗಂಟೆಗೆ 90 ಸಾವಿರ ಬೆಲೆ ತೆರಲೇಬೇಕು. ಇನ್ನು ಫಸ್ಟ್ ಲುಕ್ನಲ್ಲಿ ಉಪ್ಪಿ ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ರು. ಇದೀಗ ಉಪ್ಪಿ ಗೆಟಪ್ ಮತ್ತು ಸೆಟಪ್ ನೋಡಿದ್ರೆ ಇವ್ರೇನು ಡಾನಾ ಅಥ್ವಾ ಬ್ಯುಸಿನೆಸ್ ಮ್ಯಾನಾ ಅನ್ನೋ ಕುತೂಹಲ ಮೂಡಲಿದೆ.

ಹೌದು... ಈಗಾಗ್ಲೇ ನಾಲ್ಕು ದಿನದ ಶೂಟಿಂಗ್ ಮುಗಿಸಿರೋ ಟೀಂ ಐ ಲವ್ ಯು, 65 ದಿನದ ನಾನ್​ಸ್ಟಾಪ್ ಲಾಂಗ್ ಶೆಡ್ಯೂಲ್​ ಶೂಟಿಂಗ್​ಗೆ ಪ್ಲಾನ್ ಮಾಡಿಕೊಂಡಿದೆ. ಒಂದೇ ಸ್ಟ್ರೆಚ್​ನಲ್ಲಿ ಸಿನಿಮಾನ ಮುಗಿಸೋ ಸನ್ನಾಹದಲ್ಲಿರೋ ಚಂದ್ರು, ಅದಕ್ಕಾಗಿ ಎಲ್ಲಾ ರೀತಿಯ ಸಕಲ ತಯಾರಿಗಳನ್ನ ಮಾಡಿ ಮುಗಿಸಿದ್ದಾರೆ.

ಅಂದಹಾಗೆ ಆರ್ ಚಂದ್ರುರ ಈ ಹಿಂದಿನ ಸಿನಿಮಾ ಕನಕಗೆ ಫೈಟ್​ ಕಂಫೋಸ್ ಮಾಡಿದ್ದ ವಿನೋದ್ ಮಾಸ್ಟರ್, ಈ ಬಾರಿ ಉಪೇಂದ್ರಗೆ ಫೈಟ್ ಹೇಳಿಕೊಡಲಿದ್ದಾರೆ. ಸದ್ಯ ಚಾಪರ್​ನಿಂದ ಉಪ್ಪಿ ಎಂಟ್ರಿ ಸೀಕ್ವೆನ್ಸ್ ಸೇರಿದಂತೆ ಒಂದಷ್ಟು ಸೀನ್​ಗಳನ್ನ ವಿನೋದ್ ಮಾಸ್ಟರ್ ನಿರ್ವಹಿಸ್ತಿರೋದು ವಿಶೇಷ.

ಐ ಲವ್ ಯು ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣ ಹಚ್ತಿದ್ದು, ಮುಂದಿನ ವಾರದಿಂದ ಶೂಟಿಂಗ್ ಸೆಟ್​ಗೆ ಬುಲ್ ಬುಲ್ ಬೆಡಗಿ ಎಂಟ್ರಿ ಕೊಡಲಿದ್ದಾರೆ. ಬಿಗ್ ಸ್ಟಾರ್ಸ್​ ಜೊತೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸೋ ಮೂಲಕ ನಿರ್ಮಾಪಕರ ಪಾಲಿನ ಲಕ್ಕಿ ಚಾರ್ಮ್​ ಆಗಿರೋ ರಚಿತಾ, ಈ ಚಿತ್ರದಲ್ಲಿ ಕೂಡ ಕಮಾಲ್ ಮಾಡೋ ಸೂಚನೆ ಕೊಟ್ಟಿದ್ದಾರೆ.

Next Story

RELATED STORIES