Top

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು..!

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು..!
X

ಬೆಂಗಳೂರು: ನಡೆದಾಡುವ ದೇವರು,ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ, ಶ್ರೀಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಶ್ರೀಗಳನ್ನು ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಶ್ರೀಗಳ ದೇಹದೊಳಗೆ ಎಂಟು ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಶ್ರೀಗಳು ಜನರಲ್ ಚೆಕಪ್‌ಗಾಗಿ ಆಗಮಿಸಿದ್ದು, ಡಾ.ರವೀಂದ್ರರವರು ಸ್ವಾಮಿಜಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇನ್ನು ಈ ಬಗ್ಗೆ ಡಾ.ರವೀಂದ್ರ ಹೇಳಿಕೆ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು, ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ಲಡ್ ಚೆಕಪ್ ಸೇರಿದಂತೆ ರೆಗ್ಯೂಲರ್ ಚೆಕಪ್ ಮಾಡಲಾಗುವುದು, ಆ ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಬಿಜಿಎಸ್ ಆಸ್ಪತ್ರೆಯ ಹಿರಿಯ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡಲಿದೆ. ಕಳೆದ ನಾಲ್ಕು ಬಾರಿ ಯಾವೆಲ್ಲಾ ವೈದ್ಯರಿದ್ದರೋ ಅದೇ ತಂಡ ಈ ಬಾರಿಯೂ ಚಿಕಿತ್ಸೆ ನೀಡಲಿದೆ. ಎಕ್ಸ್ ರೆ ಇಸಿಜಿ, ಆಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನು ಶ್ರೀಗಳು ಆಸ್ಪತ್ರೆಗೆ ಬರಲು ಒಪ್ಪಲಿಲ್ಲ, ಅವರ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಜನರಲ್ ಚೆಕ್ ಅಪ್ ನ ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಜನವರಿಯಲ್ಲಿ ಮೂರು ಸ್ಟಂಟ್ ಅಳವಡಿಕೆ ಮಾಡಲಾಗಿತ್ತು.ಒಟ್ಟು ಅವರ ದೇಹದಲ್ಲಿ ೮ ಸ್ಟಂಟ್ ಗಳಿದ್ದು, ಒಂದು ಸ್ಟಂಟ್ ನ ಅವಧಿ ಕೇವಲ ಆರು ತಿಂಗಳು. ಹೀಗಾಗಿ ಸ್ಟಂಟ್ ನ ಕಾರ್ಯವೈಖರಿ ಬಗ್ಗೆ ತಪಾಸಣೆ ಮಾಡಲಾಗುವುದು. ಆ ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಾ.ರವೀಂದ್ರ ಹೇಳಿದ್ದಾರೆ.

Next Story

RELATED STORIES