Top

ರಶ್ಮಿಕಾ, ಅರ್ಜುನ್ ರೆಡ್ಡಿಗೆ ಹೀಗಂದ್ರಾ..?

ರಶ್ಮಿಕಾ, ಅರ್ಜುನ್ ರೆಡ್ಡಿಗೆ ಹೀಗಂದ್ರಾ..?
X

ಕಿರಿಕ್ ಪಾರ್ಟಿ ಖ್ಯಾತಿಯ ಸಾನ್ವಿ ರಶ್ಮಿಕಾ ಮಂದಣ್ಣ, ಸದ್ಯ ಸ್ಯಾಂಡಲ್​ವುಡ್​ ಮತ್ತು ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಚಲೋ ನಂತ್ರ ತೆಲುಗಿನ ಗೀತ ಗೋವಿಂದಂ ಚಿತ್ರದ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಈ ಚಿತ್ರದಲ್ಲಿ ಸಾನ್ವಿ ಮಿಂಚಿದ್ದಾರೆ. ಪರಶು ರಾಮ್ ನಿರ್ದೇಶನದ ಈ ಚಿತ್ರಕ್ಕೆ ಗೀತಾ ಆರ್ಟ್ಸ್ ಬ್ಯಾನರ್​​ನ ಅಲ್ಲು ಅರವಿಂದ್ ಬಂಡವಾಳ ಹಾಕಿದ್ದಾರೆ. ಜೂನ್ 23ಕ್ಕೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ.

ಇದೆಲ್ಲಾ ಒಂದ್ಕಡೆ ಆದ್ರೆ, ಸದ್ಯ ಟ್ವಿಟ್ಟರ್​ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಟ್ವಿಟ್ಟರ್​ ಚಾಟ್ ನೆಟ್ಟಿಗರ ಗಮನ ಸೆಳೆದಿದೆ. ‘ನಿನಗೆ ಒಬ್ಬರು ಸಾಲಲ್ಲ.. ಯಾರನ್ನೂ ಬಿಡಲ್ಲ’ ಅಂತ ತಮಾಷೆಯಾಗಿ ರಶ್ಮಿಕಾ ಚಮಕ್ ಕೊಟ್ಟಿರೋದು ಅದಕ್ಕೆ ಅರ್ಜುನ್ ರೆಡ್ಡಿ ತಮ್ಮದೇ ಸ್ಟೈಲ್​ನಲ್ಲಿ ರಿಪ್ಲೇ ಕೊಟ್ಟಿರೋದನ್ನ ಫ್ಯಾನ್ಸ್ ಎಂಜಾಯ್ ಮಾಡ್ತಿದ್ದಾರೆ. ಈ ಗೀತಾ ಗೋವಿಂದರ ತೆಲುಗು ಸಂಭಾಷಣೆಯ ಅನುವಾದ ಹೀಗಿದೆ ನೋಡಿ.

ರಶ್ಮಿಕಾ ಮಂದಣ್ಣ: ಫಿಲ್ಮ್ ಫೇರ್ ಬೆಸ್ಟ್ ಆ್ಯಕ್ಟರ್ ಅಂತೆ..ಕಂಗ್ರಾಟ್ಸ್ ಗೋವಿಂದು.

ವಿಜಯ್ ದೇವರಕೊಂಡ: ಮೇಡಮ್, ಗೀತಾ ಮೇಡಂ ನಿಮ್ಮ ಜೊತೆ ಟೈಂ ಸ್ಪೆಂಡ್ ಮಾಡೋದು ನನಗೆ ನಿಜವಾದ ಅವಾರ್ಡ್. ಇಂತಹವೆಲ್ಲ ಬರ್ತಿರುತ್ತೆ, ಹೋಗ್ತಿರುತ್ತೆ.

ರಶ್ಮಿಕಾ ಮಂದಣ್ಣ: ಇಗೋ ಗೋವಿಂದು.. ಈ ಓವರ್​ ಆ್ಯಕ್ಷನ್​ನ ಕಡಿಮೆ ಮಾಡ್ಕೊ ಅನ್ನೋದು. ಅಸಲಿಗೆ ನಿನಗಲ್ಲ. ಪ್ರಭಾಸ್​ಗೋ, ತಾರಕ್​ಗೋ ಬೆಸ್ಟ್ ಆ್ಯಕ್ಟರ್ ಕೊಟ್ಟಿದ್ರೆ, ಈ ರಾಮಾಯಣ ಇರ್ತಿರ್ಲಿಲ್ಲ.

ವಿಜಯ್ ದೇವರಕೊಂಡ: ಅವಾರ್ಡ್​ನಲ್ಲಿ ಏನಿದೆ ಮೇಡಂ. ನಿಮ್ಮಂತಹವರು ನನ್ನನ್ನ ಪ್ರೀತ್ಸೋದು ಸಾಕು. ಗೀತಾ ಮೇಡಂ.

ರಶ್ಮಿಕಾ ಮಂದಣ್ಣ: ನನ್ನಂತಹವರಾ..? ಅವರು ಏನು..? ಆ ಬಹುವಚನ ಏನು..? ನಿನ್ನ ಬಗ್ಗೆ ಗೊತ್ತು ಬಿಡು, ಒಬ್ಬರು ಸಾಲಲ್ಲ, ಯಾರನ್ನೂ ಬಿಡಲ್ಲ ಅಲ್ವಾ.

ವಿಜಯ್ ದೇವರಕೊಂಡ: ನನ್ನ ಉದ್ದೇಶ ಅಲ್ಲ ಮೇಡಂ. ಒಮ್ಮೆ 23ರಂದು ಭೇಟಿಯಾಗಿ, ಎಲ್ಲಾ ಎಕ್ಸ್​ಪ್ಲೇನ್ ಮಾಡ್ತೀನಿ, ಅಂತ ನಮಸ್ಕಾರದ ಎಮೋಜಿ ಕಳಿಸಿ, ಸಂಭಾಷಣೆಗೆ ಫುಲ್​ಸ್ಟಾಪ್ ಇಟ್ಟಿದ್ದಾರೆ ವಿಜಯ್ ದೇವರಕೊಂಡ.

ಇವರಿಬ್ಬರ ಈ ಟ್ವೀಟ್ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಕೆಲ ಕನ್ನಡದ ಅಭಿಮಾನಿಗಳು ಕನ್ನಡಿಗರು ಏನಾದ್ರೂ ಕೇಳಿದ್ರೆ, ಇಂಗ್ಲೀಷ್​​ನಲ್ಲಿ ರಿಪ್ಲೇ ಮಾಡ್ತೀರಾ, ಆದ್ರೆ, ಈಗ ನೋಡಿದ್ರೆ, ತೆಲುಗು ಹೀರೋ ಜೊತೆ ಅವ್ರ ಭಾಷೆಯಲ್ಲೇ ಟ್ವೀಟ್ ಮಾಡಿದ್ದೀರಾ ಅಂತ ಕಾಲೆಳೆದಿದ್ದಾರೆ. ಮತ್ತೆ ಕೆಲವರು ನಿಮಗೆ ಇಷ್ಟು ಒಳ್ಳೆ ತೆಲುಗು ಬರಲ್ಲ, ಬೇರೆ ಯಾರೋ ಸಹಾಯ ಮಾಡಿದ್ದಾರೆ ಅಂತ ರಿಪ್ಲೇ ಮಾಡಿದ್ದಾರೆ.

Next Story

RELATED STORIES