Top

ಮತ್ತೆ ಬಣ್ಣ ಹಚ್ಚಿದ ಕ್ರೇಜಿಸ್ಟಾರ್ ಮೆಚ್ಚಿದ ಅಪೂರ್ವ

ಮತ್ತೆ ಬಣ್ಣ ಹಚ್ಚಿದ ಕ್ರೇಜಿಸ್ಟಾರ್ ಮೆಚ್ಚಿದ ಅಪೂರ್ವ
X

ಅಪೂರ್ವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ಅರಮನೆ ನಗರಿ ಮೈಸೂರಿನ ಅಚ್ಚ ಕನ್ನಡತಿ ಅಪೂರ್ವ, ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಸ್ಟಾರ್ ಶರಣ್ ಅಭಿನಯದ ವಿಕ್ಟರಿ 2 ಸಿನಿಮಾದಲ್ಲಿ ಅಪೂರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಖತ್ ಗ್ಲಾಮರ್ ಲುಕ್​ನಲ್ಲಿ ಮಿಂಚಲಿದ್ದಾರಂತೆ. ಅಲೆಮಾರಿ, ಕಾಲೇಜ್ ಕುಮಾರ ಖ್ಯಾತಿಯ ಹರಿ ಸಂತು ನಿರ್ದೇಶನದ ವಿಕ್ಟರಿ- 2 ಸಿನಿಮಾನ ಮಾಸ್ ಲೀಡರ್ ಖ್ಯಾತಿಯ ತರುಣ್ ಶಿವಪ್ಪ ನಿರ್ಮಿಸುತ್ತಿದ್ದು, ಸದ್ದಿಲ್ಲದೆ ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ.

ಅಂದಹಾಗೆ ಅಪೂರ್ವ ಡೆಡಿಕೇಷನ್​ಗೆ ಶಹಬ್ಬಾಸ್ ಹೇಳಲೇಬೇಕು. ಕ್ರೇಜಿಸ್ಟಾರ್ ರವಿಚಂದ್ರನ್​ರ ಅಪೂರ್ವ ಸಿನಿಮಾಗಾಗಿ ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿಬಿಟ್ಟಿದ್ರು ಈ ಚೆಲುವೆ. ಸಿನಿಮಾ ಕಮರ್ಷಿಯಲ್ ಹಿಟ್ ಆಗದ ಹಿನ್ನೆಲೆಯಲ್ಲಿ ಎಲ್ಲೂ ಕಾಣಿಸಿಕೊಂಡಿರದ ಅಪೂರ್ವ, ಇದೀಗ ದಿಢೀರ್ ಅಂತ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಎನಿವೇ, ಕಂಬ್ಯಾಕ್ ಮಾಡ್ತಿರೋ ಅಪೂರ್ವಗೆ ನಿರೀಕ್ಷೆಯಂತೆ ಸಕ್ಸಸ್ ಸಿಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES