Top

ಡಿಫ್‌ರೆಂಟ್ ಆಗಿ ತೆರೆ ಮೇಲೆ ಬರ್ತಿದ್ದಾರೆ ರಾಕಿಂಗ್ ಸ್ಟಾರ್..!Tv5 EXCLUSIVE

ಡಿಫ್‌ರೆಂಟ್ ಆಗಿ ತೆರೆ ಮೇಲೆ ಬರ್ತಿದ್ದಾರೆ ರಾಕಿಂಗ್ ಸ್ಟಾರ್..!Tv5 EXCLUSIVE
X

ರಾಕಿಂಗ್ ಸ್ಟಾರ್ ಯಶ್ ಏನೇ ಮಾಡಿದ್ರು ಡಿಫರೆಂಟ್.. ಬ್ಯಾಕ್ ಟು ಬ್ಯಾಕ್ ಮಾಸ್ ಎಂಟ್ರಟೈನರ್ ಸಿನಿಮಾಗಳಿಂದ ರಂಜಿಸ್ತಿದ್ದ ಯಶ್, ಇದೀಗ ಕ್ಲಾಸಿಕ್ ಕಾಮಿಡಿಯತ್ತ ಮುಖ ಮಾಡಿದ್ದಾರೆ. ಕೆಜಿಎಫ್ ನಂತ್ರ ಯಾವ ಸಿನಿಮಾ ಅಂತ ಕಾಯ್ತಿದ್ದ ಫ್ಯಾನ್ಸ್​ಗೆ ರಾಜಾಹುಲಿ ಸಿಹಿಸುದ್ದಿ ಕೊಟ್ಟಿದ್ದಾರೆ.

ಸ್ಯಾಂಡಲ್​ವುಡ್​ನ ಮಾಸ್ ಮಹಾರಾಜ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕೊನೆಗೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಯಶ್ ಕರಿಯರ್​ನ ಬಿಗ್ಗೆಸ್ಟ್ ಸಿನಿಮಾ ಇದಾಗಿದ್ದು, ಬರೋಬ್ಬರಿ ಎರಡು ವರ್ಷ ಇದೊಂದೇ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ತನು ಮನ ಧನವನ್ನು ಅರ್ಪಿಸಿದ್ರು. ಇದೀಗ ಕೆಜಿಎಫ್ ಮುಗಿದ ಹಿನ್ನೆಲೆ ಯಶ್ ಮುಂದಿನ ಸಿನಿಮಾದ ಬಗ್ಗೆ ಟಾಕ್ ಕ್ರಿಯೇಟ್ ಆಗ್ತಿದೆ.

ರಾಜಾಹುಲಿ, ಗಜಕೇಸರಿ ಸಿನಿಮಾಗಳ ಮೂಲಕ ಔಟ್ ಅಂಡ್ ಔಟ್ ಮಾಸ್ ಹೀರೋ ಆಗಿ ಬದಲಾದ್ರು ರಾಕಿಂಗ್ ಸ್ಟಾರ್. ಅದ್ರಲ್ಲೂ ರಾಮಾಚಾರಿ, ಮಾಸ್ಟರ್ ಪೀಸ್ ಮತ್ತು ಸಂತು ಸ್ಟ್ರೈಟ್ ಫಾರ್ವರ್ಡ್​ ಚಿತ್ರಗಳಿಂದ ಯಶ್​ಗಿದ್ದ ಮಾಸಿಸಂ ದುಪ್ಪಟ್ಟಾಯ್ತು.

ಅಂದಹಾಗೆ ಕಿರಾತಕ, ಡ್ರಾಮಾ ಸಿನಿಮಾಗಳ ನಂತ್ರ ಯಶ್ ಆ ರೀತಿಯ ಕ್ಲಾಸಿಕ್ ಕಾಮಿಡಿ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಡ್ರಾಮಾ ಸಿನಿಮಾಗೇನೇ ಫುಲ್ ಸ್ಟಾಪ್ ಇಟ್ಟಿದ್ದ ಯಶ್, ಇದೀಗ ಅಂತಹದ್ದೇ ಫ್ಲೇವರ್​ನ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.

ಯಶ್ ಮುಂದಿನ ಸಿನಿಮಾದ ಹೆಸರು ಕಿರಾತಕ ಸೀಕ್ವೆಲ್​ ಅನ್ನೋದು ಬಹುತೇಕ ಖಚಿತವಾಗಿದೆ. ಆದ್ರೆ ಈ ಬಾರಿ ಕಿರಾತಕ 2 ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿರೋದು ಪ್ರದೀಪ್ ರಾಜ್ ಅಲ್ಲ. ಬದಲಿಗೆ ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಅನಿಸಿಕೊಂಡ ರ್ಯಾಂಬೋ 2 ನಿರ್ದೇಶಕ ಅನಿಲ್.

ಚಿತ್ರತಂಡ ಅದನ್ನ ಕಿರಾತಕ ಸೀಕ್ವೆಲ್ ಅಂತ ಒಪ್ಪಿಕೊಳ್ಳದಿದ್ರೂ, ಅದೇ ಫ್ಲೇವರ್​ನಲ್ಲಿ ಅಂತಹದ್ದೇ ಫ್ರೆಶ್ ಫೀಲ್ ಕೊಡೋ ಸಬ್ಜೆಕ್ಟ್​ನ ತೆರೆಗೆ ತರೋ ಯತ್ನದಲ್ಲಿದೆಯಂತೆ. ಸದ್ಯ ಸದ್ದಿಲ್ಲದೆ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿರೋ ಚಿತ್ರತಂಡ, ಬಹುತೇಕ ಸ್ಕ್ರಿಪ್ಟ್ ವರ್ಕ್​ ಮಾಡಿ ಮುಗಿಸಿದೆ.

ಜಾನು, ಡ್ರಾಮಾ, ಗೂಗ್ಲಿ ಮತ್ತು ರಾಮಾಚಾರಿ ಅಂತಹ ನಾಲ್ಕು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ನಂತ್ರ ಯಶ್ ಮತ್ತೆ ಜಯಣ್ಣ ಕಂಬೈನ್ಸ್ ಬ್ಯಾನರ್​ನಲ್ಲಿ ಸಿನಿಮಾ ಮಾಡಲಿದ್ದಾರೆ. ಹೌದು, ಬರೋಬ್ಬರಿ ನಾಲ್ಕು ವರ್ಷದ ನಂತ್ರ K2 ಸಿನಿಮಾಗಾಗಿ ಮತ್ತೆ ಈ ಸ್ಯಾಂಡಲ್​ವುಡ್​ನ ಮೆಗಾ ಜೋಡಿ ಒಂದಾಗ್ತಿದೆ.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಸಿನಿಮಾ ಅಂದ್ರೆ ಅಲ್ಲೊಂದು ಅದ್ದೂರಿತನ ಇರುತ್ತೆ. ನೋಡುಗರಿಗೆ ವಿಶ್ಯುವಲ್ ಟ್ರೀಟ್ ಇರಲಿದೆ. ಕ್ವಾಲಿಟಿ ಸಿನಿಮಾ ಮಾಡೋದಿಕ್ಕೇ ಫೇಮಸ್ ಆಗಿರೋ ಈ ಜೋಡಿ ಮತ್ತೆ ಯಶ್​ರಂತಹ ಮಾಸ್ ಹೀರೋಗೆ ಪ್ರೊಡಕ್ಷನ್ ಮಾಡ್ತಿರೋದು ಕುತೂಹಲ ಹೆಚ್ಚಿಸಿದೆ.

K2 ಸಿನಿಮಾದ ಶೂಟಿಂಗ್ ಬೆಂಗಳೂರು ಮತ್ತು ದುಬೈನಲ್ಲಿ ನಡೆಯಲಿದೆ. ಮುಂದಿನ ತಿಂಗಳು ಅಂದ್ರೆ ಜುಲೈ 4ರಿಂದ ಸಿನಿಮಾ ಶೂಟಿಂಗ್​ಗೆ ಕಿಕ್ ಸ್ಟಾರ್ಟ್​ ಕೊಡ್ತಿದೆ ಚಿತ್ರತಂಡ. ಇನ್ನು ಮುಕುಂದ ಮುರಾರಿ, ಚೌಕ, ರ್ಯಾಂಬೋ 2 ಅಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿರೋ ಸ್ಟಾರ್ ಕ್ಯಾಮೆರಾಮ್ಯಾನ್ ಸುಧಾಕರ್ ಈ ಚಿತ್ರವನ್ನ ಚಿತ್ರಿಸಲಿದ್ದಾರೆ.

ಖ್ಯಾತ ಸಂಕಲನಕಾರ ಕೆ ಎಂ ಪ್ರಕಾಶ್ K2 ಸಿನಿಮಾನ ಎಡಿಟ್ ಮಾಡಲಿದ್ದು, ಬಹುತೇಕ ನುರಿತ ತಂತ್ರಜ್ಞರೇ ಈ ಸಿನಿಮಾದಲ್ಲಿರಲಿದ್ದಾರೆ. ಅಂದಹಾಗೆ ಈ ಸಿನಿಮಾನ ದುಬೈನಲ್ಲೇ ಚಿತ್ರಿಸೋಕೆ ಒಂದು ಪ್ರಮುಖ ಕಾರಣವಿದೆ. ಅದೇನಪ್ಪಾಂದ್ರೆ ಮತ್ತದೇ ಯಶ್​ರ ಕಿರಾತಕ.

ಕಿರಾತಕ ಕ್ಲೈಮ್ಯಾಕ್ಸ್​ನಲ್ಲಿ ಯಶ್ ದುಬೈಗೆ ಹೊರಡ್ತಾರೆ. ಅದಾದ ಬಳಿಕ ದುಬೈನಲ್ಲಿ ಸೆಟಲ್ ಕೂಡ ಆಗ್ತಾರೆ. ಅದೇ ಸ್ಟೋರಿ ಇಲ್ಲಿ ಕಂಟಿನ್ಯೂ ಆಗುತ್ತಾ ಅನ್ನೋ ಕುತೂಹಲ ಕೂಡ ಗಾಂಧಿನಗರದಲ್ಲಿ ಗರಿಗೆದರಿದೆ. ಸುಮಾರು 42 ದಿನಗಳ ಲಾಂಗ್ ಶೆಡ್ಯೂಲ್ ಶೂಟಿಂಗ್ ದುಬೈನಲ್ಲಿ ನಡೆಯಲಿದ್ದು, ಬಹುತೇಕ ಸಿನಿಮಾ ಅಲ್ಲೇ ಶೂಟ್ ಆಗಲಿದೆ. ಅದೇನೇ ಇರಲಿ, ಯಶ್ ಹೊಸ ಸಿನಿಮಾ ಸೆಟ್ಟೇರ್ತಿರೋದು ಯಶ್ ಫ್ಯಾನ್ಸ್ ಸೇರಿದಂತೆ ಇಡೀ ಸಿನಿಪ್ರಿಯರಿಗೆ ಎಲ್ಲಿಲ್ಲದ ಖುಷಿ ತಂದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಟಿವಿ5

Next Story

RELATED STORIES