Top

ನಂಬರ್ ಪ್ಲೇಟ್ ಖರೀದಿಸಿ 'ಬಾಸ್' ಆದ ಯಶ್

ನಂಬರ್ ಪ್ಲೇಟ್ ಖರೀದಿಸಿ ಬಾಸ್ ಆದ ಯಶ್
X

ಸ್ಯಾಂಡಲ್​ವುಡ್ ಕಂಡ ಅಪರೂಪದ ಮಾಸ್ಟರ್ ಪೀಸ್ ರಾಕಿಂಗ್ ಸ್ಟಾರ್ ಯಶ್. ಈತ ಬೆಳೆದು ಬಂದ ಹಾದಿ ಎಂಥವ್ರಿಗೂ ಸ್ಫೂರ್ತಿ. ಈತ ಮಾಡಿದಂತಹ ದಾಖಲೆಗಳು ನಿಜಕ್ಕೂ ಅದ್ಭುತ. ಅದ್ರಲ್ಲೂ ಸ್ಯಾಂಡಲ್​ವುಡ್​ನ ಟ್ರೆಂಡ್ ಸೆಟ್ ಸ್ಟಾರ್​ಗಳಲ್ಲಿ ಯಶ್ ಹೆಸ್ರು ರಾರಾಜಿಸ್ತಿದೆ.

ಮೊಗ್ಗಿನ ಮನಸ್ಸಿನಂತಹ ಯಶ್ ರಾಜಧಾನಿಯ ಕಳ್ಳರ ಸಂತೆಗೆ ಮೊದಲಾಸಲ ರಾಕಿಯಾಗಿ ಎಂಟ್ರಿ ಕೊಟ್ಟ ಕಲಾವಿದ. ಡ್ರಾಮಾ ಮಾಡಿದ್ರೂ ಕಿರಾತಕ ಅನಿಸಿಕೊಂಡ್ರೂ, ರಾಜಾಹುಲಿ ಮೂಲಕ ಲಕ್ಕಿ ಮಾಸ್ ಹೀರೋ ಆಗಿ ಸಿನಿಪ್ರಿಯರ ಹಾರ್ಟ್​ಗೆ ಲಗ್ಗೆ ಇಟ್ಟ ಅಪರೂಪದ ಪ್ರತಿಭೆ.

ಎಸ್... ತನ್ನ ಸ್ಟ್ರೈಟ್ ಫಾರ್ವರ್ಡ್​ ಸ್ಟೈಲು ಮ್ಯಾನರಿಸಂನಿಂದ ಚಿತ್ರರಂಗದಲ್ಲಿ ತನ್ನದೇ ಆದಂತಹ ಯುನಿಕ್ ಇಮೇಜ್ ಬ್ಯುಲ್ಡ್ ಮಾಡಿಕೊಂಡ ಸ್ಟಾರ್ ಯಶ್. ಅದ್ರಲ್ಲೂ ಸಾಮಾನ್ಯ ಕಲಾವಿದನೊಬ್ಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದನ್ನ ಚಿತ್ರರಂಗಕ್ಕೆ ಸಾರಿ ಹೇಳಿದ ಮಾಸ್ಟರ್ ಪೀಸ್. ಇಂತಹ ಸ್ಟಾರ್ ಇದೀಗ ಸ್ಯಾಂಡಲ್​ವುಡ್​ನ ಬಾಸ್.

ಹೌದು, ಯಶ್ ಕಳೆದ ಡಿಸೆಂಬರ್​ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ಸಂದರ್ಭದ ವಿಶೇಷ ಮೂರು ದುಬಾರಿ ಬೆಂಝ್ ಕಾರ್​ಗಳನ್ನ ಖರೀದಿಸಿದ್ದರು. ಅದ್ರಲ್ಲಿ ಒಂದು ಮುದ್ದಿನ ಮಡದಿ ರಾಧಿಕಾ ಪಂಡಿತ್​ಗೆ, ಮತ್ತೊಂದು ಅಪ್ಪ-ಅಮ್ಮನಿಗಾದ್ರೆ ಮಗದೊಂದು ಸ್ವಂತಕ್ಕಾಗಿ ಖರೀದಿಸಿದ್ದರು.

ಇದೀಗ ತಮ್ಮ Benz GLC AMG Coupe ಕಾರ್​ಗೆ ಹೊಸ ನಂಬರ್ ಖರೀದಿಸಿದ್ದಾರೆ. ಅದು 8055. ಅಂದ್ರೆ BOSS ಅಂತ ಅರ್ಥ. ಈ ನಂಬರ್​ಗಾಗಿ ಆರ್​ಟಿಓಗೆ ಯಶ್ ಕೊಟ್ಟಿದ್ದು ಬರೋಬ್ಬರಿ 78 ಸಾವಿರ ರೂಪಾಯಿ. ಹೌದು.. ಇತ್ತೀಚೆಗೆ ಶಾಂತಿನಗರದ ಆರ್​ಟಿಓ ಅಧಿಕಾರಿಗಳು ನಡೆಸಿದ ನಂಬರ್ ಬಿಡ್ಡಿಂಗ್​ನಲ್ಲಿ ರಾಕಿಂಗ್ ಸ್ಟಾರ್ ತನ್ನ ರೆಡ್ ಕಲರ್ ಬೆಂಝ್ ಕಾರ್​ಗೆ ಈ ರೀತಿಯ ನಂಬರ್ ಖರೀದಿಸಿರೋದು ವಿಶೇಷ.

ಅಂದಹಾಗೆ ಸಂತು ಸ್ಟ್ರೈಟ್ ಫಾರ್ವರ್ಡ್​ ಸಿನಿಮಾದ ಹಾಡೊಂದರಲ್ಲಿ ಬಾಸ್ ಅನ್ನೋ ಬ್ಯಾಗ್ರೌಂಡ್ ಇಟ್ಟು ಹಾಡನ್ನ ಚಿತ್ರಿಸಲಾಗಿತ್ತು. ಅಷ್ಟೇ ಅಲ್ಲ, ಅಭಿಮಾನಿಗಳು ಕೂಡ ಅವ್ರನ್ನ ಅಕ್ಷರಶಃ ಬಾಸ್ ಅಂತಲೇ ಕರೆಯುತ್ತಾರೆ.

ಸದ್ಯ ಸ್ಯಾಂಡಲ್​ವುಡ್ ಬಾಸ್ ಪಟ್ಟಕ್ಕೆ ದರ್ಶನ್, ಶಿವರಾಜ್​ಕುಮಾರ್, ಸುದೀಪ್ ಫ್ಯಾನ್ಸ್ ಮಧ್ಯೆ ಈಗಾಗ್ಲೇ ಸೋಷಿಯಲ್ ಮೀಡಿಯಾ ವಾರ್ ನಡೆಯುತ್ತಿತ್ತು. ಇದೀಗ ಯಶ್ ಬೆಂಝ್ ಕಾರ್​ಗೆ ಬಾಸ್ ನಂಬರ್ ಹಾಕಿಸಿರೋದು ಮತ್ತಷ್ಟು ಸಿಪ್ ಗಾಸಿಪ್​ಗಳಿಗೆ ಕಾರಣವಾಗ್ತಿದೆ.

ಅದೇನೇ ಇರಲಿ.. ಯಶ್ ತನ್ನ ನೇರ ನುಡಿಯಿಂದ ನಿಷ್ಠುರತೆಗೆ ಒಳಗಾದರೂ ಸಹ, ನುಡಿದಂತೆ ನಡೆಯೋ ಕಲಾವಿದ ಅನ್ನೋದು ಸಾಕಷ್ಟು ಬಾರಿ ಪ್ರೂವ್ ಮಾಡಿದ್ದಾರೆ. ಸದ್ಯ ಯಶ್ ಕಾರ್​ನಿಂದ ಸ್ಯಾಂಡಲ್​ವುಡ್ ಬಾಸ್ ವಿವಾದ ಮತ್ತೆ ಭುಗಿಲೆದ್ದರೂ ಅಚ್ಚರಿಯಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಟಿವಿ5

Next Story

RELATED STORIES