Top

ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದ ಯದುವೀರ್ ದಂಪತಿ

ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದ ಯದುವೀರ್ ದಂಪತಿ
X

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆಗೆ ಯದುವೀರ್ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ತ್ರಿಷಿಕಾ ಪುತ್ರ ಆದ್ಯವೀರ್ ಜೊತೆಗೂಡಿ ಪೂಜೆ ಸಲ್ಲಿಸಿದ ಯದುವೀರ್, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು. ದೇಗುಲದ ಅರ್ಚಕರು ಯದುವೀರ್ ದಂಪತಿಯನ್ನು ಸಂಪ್ರದಾಯದಂತೆ ವಾಲಗ ಸಮೇತವಾಗಿ ಬರಮಾಡಿಕೊಂಡರು.

ಸುಮಾರು 15 ನಿಮಿಷಗಳ ಕಾಲ ದೇಗುದಲ್ಲಿ ಪ್ರಾರ್ಥನೆ ಸಲ್ಲಿಸಿದ ಯದುವೀರ್‌ಗೆ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಮಾರ್ಗದರ್ಶನ ನೀಡಿದರು. ಇನ್ನು ಪೂಜೆ ಮುಗಿಸಿ ಹೊರ ಬರುತ್ತಿದ್ದ ಯದುವೀರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದ ಘಟನೆಯೂ ನಡೆಯಿತು.

Next Story

RELATED STORIES