Top

`ವಾಸು' ಮೊದಲ ಹಾಡಿಗೆ ಕಮರ್ಷಿಯಲ್ ಟಚ್​!

`ವಾಸು ಮೊದಲ ಹಾಡಿಗೆ ಕಮರ್ಷಿಯಲ್ ಟಚ್​!
X

ಟೀಸರ್ ಮತ್ತು ಟ್ರೈಲರ್​ನಿಂದ ಗಮನ ಸೆಳೆಯುತ್ತಿರುವ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೊದಲ ಹಾಡು ಹೊರಬಂದಿದೆ. ಆಲ್ಬಮ್​ನ ಮೊದಲ ಹಾಡಿಗೆ ನಟ ಶ್ರೀಮುರಳಿ ಕಮರ್ಷಿಯಲ್ ಟಚ್ ಕೊಟ್ಟಿದ್ದಾರೆ.

ಹೌದು, ಇದು ಇತ್ತೀಚೆಗೆ ಬಿಡುಗಡೆ ಆದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಆಲ್ಬಮ್​ನ ಮೊದಲ ಸಾಂಗ್. ಅಕಿರ ಖ್ಯಾತಿಯ ಅನೀಶ್ ತೇಜೇಶ್ವರ್ ಅಭಿನಯದ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ ಇದಾಗಿದ್ದು, ಟೀಸರ್ ಮತ್ತು ಟ್ರೈಲರ್​ನಿಂದ ಸಿನಿಮಾ ಸಖತ್ ಸದ್ದು ಮಾಡ್ತಿತ್ತು.

ಅಜಿತ್ ವಾಸನ್ ನಿರ್ದೇಶನದ ಈ ಚಿತ್ರವನ್ನ ಅನೀಶ್ ನಟಿಸೋದ್ರ ಜೊತೆಗೆ ನಿರ್ಮಾಣ ಕೂಡ ಮಾಡಿರೋದು ವಿಶೇಷ. ಚಿತ್ರರಂಗದಲ್ಲಿ ಪ್ರತಿಭಾವಂತ ಕಲಾವಿದನಾಗಿ ಗುರ್ತಿಸಿಕೊಂಡಿರೋ ಅನೀಶ್​ ಮೊಟ್ಟ ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೂ ಕೈಹಾಕಿರೋದು ನೋಡಿ, ಸ್ಯಾಂಡಲ್​ವುಡ್ ಸ್ಟಾರ್ಸ್​ ಕೂಡ ಸಾಥ್ ಕೊಡ್ತಿದ್ದಾರೆ. ಸದ್ಯ ಚಿತ್ರದ ಮೊದಲ ಹಾಡನ್ನ ಶ್ರೀಮುರಳಿ ಲಾಂಚ್ ಮಾಡಿದ್ದಾರೆ.

ಅಲೆಮಾರಿ ಸಂತು ಸಾಹಿತ್ಯವಿರೋ ಈ ಹಾಡಿಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಫೋಸ್ ಮಾಡೋದ್ರ ಜೊತೆಗೆ, ಅವರೇ ಹಾಡಿದ್ದಾರೆ. ಇಡೀ ಹಾಡನ್ನ ಪೊಲೀಸ್ ಸ್ಟೇಷನ್ ಸೆಟ್​ನಲ್ಲಿ ಚಿತ್ರಿಸಿದ್ದು, ನಾಯಕನಟ ಪ್ರೀತಿಯನ್ನ ಕಳೆದುಕೊಂಡ ಸಂದರ್ಭದಲ್ಲಿ ಚಿತ್ರಿಸಲಾಗಿದೆ. ಫ್ಯಾಥೋ ಟಚ್ ಇರೋ ಈ ಹಾಡನ್ನ ರೋರಿಂಗ್ ಸ್ಟಾರ್ ಕೊಂಡಾಡಿರೋದು ವಿಶೇಷ.ಒಂದೊಂದು ಹಾಡನ್ನ ಒಬ್ಬೊಬ್ಬ ಸ್ಟಾರ್ ಕೈಯಲ್ಲಿ ಲಾಂಚ್ ಮಾಡಿಸೋ ಪ್ಲಾನ್​ನಲ್ಲಿರೋ ಅನೀಶ್, ಮುಂದಿನ ಹಾಡನ್ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಆಹ್ವಾನ ನೀಡಿದ್ದಾರಂತೆ. ಅದೇನೇ ಇರಲಿ, ಅನೀಶ್​ಗೆ ಸಿನಿಮಾ ಮೇಲಿನ ಪ್ಯಾಷನ್ ಈ ಚಿತ್ರದಿಂದ ಗೊತ್ತಾಗ್ತಿದ್ದು, ಆದಷ್ಟು ಬೇಗ ಸಿನಿಪ್ರಿಯರ ಮುಂದೆ ತರೋ ಯೋಜನೆಯಲ್ಲಿದೆ ಚಿತ್ರತಂಡ.

Next Story

RELATED STORIES