Top

ಬಾದಾಮಿಯಲ್ಲಿ ಮಳೆಗಾಗಿ ಚಂಡಿಕಾ ಹೋಮ

ಬಾದಾಮಿಯಲ್ಲಿ ಮಳೆಗಾಗಿ ಚಂಡಿಕಾ ಹೋಮ
X

ಬಾಗಲಕೋಟೆ : ರಾಜ್ಯ ದಲ್ಲಿ ಮುಂಗಾರು ಮಳೆ ಒಂದೆಡೆ ಹಲವು ಅವಾಂತರ ಸೃಷ್ಪಿಸಿದ್ರೆ, ಇನ್ನೊಂದೆಡೆ ಮಳೆಗಾಗಿ ಜನ್ರು ಹೋಮ ಹವನ ಹಾಗೂ ಕತ್ತೆ ಮದುವೆಗೂ ಮುಂದಾಗಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರವಾಗಿರೋ ಬಾದಾಮಿಯಲ್ಲಿ ವರುಣನಿಗಾಗಿ ಬರೋಬ್ಬರಿ 10 ಗಂಟೆಗಳ ಕಾಲ ಹೋಮ - ಹವನ ಮಾಡೋ ಮೂಲಕ ಜನ್ರು ದೇವರ ಮೊರೆಹೋಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ. ಪಟ್ಟಣದ ಕಿಲ್ಲಾ ಓಣಿಯಲ್ಲಿರೋ ದುರ್ಗಮ್ಮ - ದ್ಯಾಮವ್ವ ದೇಗುಲದ ಎದುರು ನಿನ್ನೆ ಅದ್ದೂರಿಯಾಗಿ ಅಗ್ನಿಕುಂಡ ತಯಾರಿಸಿ ಬೃಹತ್ ಚಂಡಿಕಾ ಹೋಮ ನಡೆಸಲಾಯ್ತು.ಚಂಡಿಕಾ ಹೋಮದಲ್ಲಿ ಐದು ತರಹದ ಕಟ್ಟಿಗೆ, ಹಾಗೂ ತುಪ್ಪದೊಂದಿಗೆ ಹೋಮ ಹವನ ನಡೀತು. ಇನ್ನು ರೋಣ ತಾಲೂಕಿನ ಸೂಡಿ ಗ್ರಾಮದ ಭಟ್ಟರು, ನೀಲಕಂಠ ಶ್ರೀ ಹಾಗೂ ವಿರುಪಾಕ್ಷ ಶ್ರೀಗಳಿಂದ ಹೋಮ ಹವನ ನಡೆದ್ವು. ಐದು ಜೋಡಿ ನವವಿವಾಹಿತರು ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ರು.

ಬಾದಾಮಿ ಸೀಮೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ್ಲೂ ಉತ್ತಮ ಮಳೆ ಆಗಿಲ್ಲ.ಆದ್ರೆ ಬೇರೆಯೆಡೆ ಮಳೆ ಆಗಿರೋದನ್ನು ಕಂಡು ಈ ಭಾಗದ ರೈತ್ರು ಚಿಂತೆಗೀಡಾಗಿದ್ರು.ಮಳೆಗಾಗಿ ವೈಜ್ಞಾನಿಕವಾಗಿ ಚಂಡಿಕಾ,ಗಣಪತಿ ಹೋಮ ಮಾಡಲಾಗಿದೆ. ಇದ್ರಿಂದ ಮಳೆಯಾಗುತ್ತೆ ಅನ್ನೋ ನಂಬಿಕೆ ಸ್ಥಳೀಯರಲ್ಲಿದೆ.

ಇನ್ನು ಬಾದಾಮಿಯಲ್ಲಿ ಮಳೆಯಾಗಿಲ್ಲವೆಂದು ಹಿರಿಯರು ಮುರನಾಳದ ಮಳೆರಾಜೇಂದ್ರ ಸ್ವಾಮೀಜಿ ಬಳಿ ಕೇಳಿದ್ದಾರೆ. ಆಗ ಸ್ವಾಮೀಜಿಗಳು ನಿಮ್ಮಲ್ಲಿ ಮಳೆ ಆಗದೆ ಇರೋದಕ್ಕೆ ಗ್ರಾಮ ದೇವಿಯ ವಕ್ರದೃಷ್ಠಿ ಕಾರಣ. ಈ ಹಿಂದೆ ಹೋಮ ಹವನ ಮಾಡ್ತಿದ್ರು ಈಗ ನೀವೂ ಬಿಟ್ಟಿದ್ದೀರಿ. ಮತ್ತೆ ಮಳೆಗಾಗಿ ಚಂಡಿಕಾ ಹೋಮ ಮಾಡ್ರಿ ಎಂದಿದ್ದರಂತೆ.ಹಾಗಾಗಿ ಪಟ್ಟಣದ ಹಿರಿಯರು ಶ್ರದ್ಧಾ ಭಕ್ತಿಯಿಂದ ಚಂಡಿಕಾ ಹೋಮ ಮಾಡೋ ಮೂಲಕ ಮಳೆಗಾಗಿ ದೇವರ ಮೊರೆ ಹೋಗಿದ್ರು.

ಅಂದಹಾಗೇ, ಬಾದಾಮಿ ಪಟ್ಟಣದಲ್ಲಿ ಅಧಿಕ ಮರಗಳಿದ್ದವು.ಕೆಸಿಪ್ ಯೋಜನೆ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡೆದಿದ್ದಾರೆ. ಆವಾಗನಿಂದಲೂ ಉತ್ತಮ ಮಳೆ ಆಗಿಲ್ಲವೆನ್ನುವುದು ಇಲ್ಲಿನ ಅನೇಕರ ಅಭಿಪ್ರಾಯ. ಪಟ್ಟಣದಲ್ಲಿ ಹೋಮದ ಹಿನ್ನೆಲೆ ಕೂಲಿಕಾರ್ಮಿಕರ ಕೆಲಸ ಜೊತೆಗೆ ಮನೆಯಲ್ಲಿ ಯಾರು ರೊಟ್ಟಿ ತಟ್ಟದಂತೆ ನಿಷೇಧ ಹೇರಿ ಡಂಗೂರ ಸಾರಲಾಗಿತ್ತು. ದೇಗುಲಕ್ಕೆ ಬಂದಿದ್ದ ಭಕ್ತರಿಗೆ ಸರಾಯಿ ತೀರ್ಥ ವನ್ನು ನೀಡಲಾಯ್ತು. ಹೋಮದ ಬಳಿಕ ಭಕ್ತರಿಗೆ ಮೂರು ಕ್ವಿಂಟಲ್ ಜೋಳದ ಕಿಚಡಿ ಪ್ರಸಾದ ವ್ಯವಸ್ಥೆ ಮಾಡಿದ್ರು.

ತಡರಾತ್ರಿಯವರೆಗೂ ಭಕ್ತರು ದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ರು.

ಒಟ್ನಲ್ಲಿ ಬಾದಾಮಿ ಜನತೆ ಮಳೆಗಾಗಿ ನಡೆಸಿರೋ ಚಂಡಿಕಾ ಹೋಮಕ್ಕೆ ವರುಣದೇವ ಒಲಿಯುತ್ತಾನಾ ಅನ್ನೋ ನಂಬಿಕೆಯಿದೆ. ಹೀಗಾಗಿ ಇಂದು ಚಂಡಿಕಾ ಹೋಮ ಮಾಡುವ ಮೂಲಕ ಜನರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇವರ ಪ್ರಾರ್ಥನೆಗೆ ಮಳೆರಾಯನ ಕೃಪೆಯಾಗಿ, ಧರಣಿಗೆ ತಂಪೆರೆಯಲಿ ಎಂದು ಆಶಿಸೋಣ.

ವರದಿ : ಮಂಜುನಾಥ್ ತಳವಾರ್, ಟಿವಿ5 ಬಾಗಲಕೋಟೆ

Next Story

RELATED STORIES