Top

ಕಬ್ಬಿನ ಬಿಲ್ ಬಾಕಿ : ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಕುಟುಂಬ

ಕಬ್ಬಿನ ಬಿಲ್ ಬಾಕಿ : ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಕುಟುಂಬ
X

ಬೆಳಗಾವಿ : ಕಳೆದ ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್‌ ನೀಡದೆ ರೈತರನ್ನ ಸತಾಯಿಸುತ್ತಿವೆ. ಹೀಗಾಗಿ ಕಬ್ಬಿನ ಬಿಲ್ ಬಾಕಿಯಿಂದಾಗಿ ಆರ್ಥಿಕವಾಗಿ ಹಲವು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಶಂಕರ್ ಮಾಟೋಳಿ ಕುಟುಂಬಸ್ಥರೇ ಇಂತಹ ನಿರ್ಧಾರಕ್ಕೆ ಮುಂದಾಗಿರುವ ಆರ್ಥಿಕ ಸಂಕಷ್ಟದಲ್ಲಿರುವ ರೈತ ಕುಟುಂಬವಾಗಿದೆ. ಈ ಕುಟುಂಬ, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಕುಮಾರಸ್ವಾಮಿಗೆ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಸಚಿವ ರಮೇಶ್ ಜಾರಕಿಹೋಳಿ ಒಡೆತನದ ಹಿರೇನಂದಿ ಸಕ್ಕರೆ ಕಾರ್ಖಾನೆಯಿಂದ ಲಾರಿ ಬಾಡಿಗೆ ಹಣ ನೀಡುತ್ತಿಲ್ಲ. ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಬಿಲ್ ಬರಬೇಕು. ಆದರೆ ಬಾಕಿ ಹಣನೀಡದೆ ಕಾರ್ಖಾನೆಗಳು ಸತಾಯಿಸುತ್ತಿವೆ. ಕಬ್ಬಿನ ಬಾಕಿ ಬಿಲ್ ಬಾರದೇ ಇದ್ದರಿಂದಾಗಿ, ಲಾರಿಯನ್ನೂ ಮಾರಾಟ ಮಾಡಲಾಗಿದೆ. ಲಾರಿಯೇ ಮನೆಯ ಜೀವನಕ್ಕೆ ದಾರಿ ದೀಪಗಳಾಗಿದ್ದವು. ಇಂತಹ ಲಾರಿಗಳು ಸಾಲಕ್ಕಾಗಿ ಮಾರಾಟ ಮಾಡಿದ ಮೇಲೆ ಕುಟುಂಬದ ನಿರ್ವಹಣೆ ಕಷ್ಟವಾಗಿದೆ.

ಅಲ್ಲದೇ, ಮನೆಯಲ್ಲಿ ತಂದೆ ಖಾಯಿಲೆಯಿಂದ ಬಳಲುತ್ತಿದ್ದಾರೆ, ತಾಯಿಗೂ ವಯಸ್ಸಾಗಿದೆ. ಈಗಾಗಲೇ ತಂದೆಯವ್ರ ಚಿಕಿತ್ಸೆಗಾಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು, ಇನ್ಮುಂದೆ ಅವರಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ. ಅವರ ಸ್ಥಿತಿ ಗಂಭೀರವಾಗಿದೆ. ಇದನ್ನ ಕಾರ್ಖಾನೆಯವರ ಗಮನಕ್ಕೆ ತಂದ್ರು ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ನಾವು ಕುಟುಂಬಸ್ಥರೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆದು ತಿಳಿಸಿದ್ದಾರೆ.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಕ್ರಮ ಕೈಗೊಳ್ಳಬೇಕು. ಈ ಮೂಲಕ ಕೂಡಲೇ ನೊಂದ ಕುಟುಂಬಕ್ಕೆ ನೆರವಾಗಬೇಕು. ಇಲ್ಲವಾದಲ್ಲಿ ಕುಟುಂಬವೊಂದರ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣವಾಗಿ ಬಿಡುತ್ತದೆ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.

Next Story

RELATED STORIES