Top

ಐಪಿಎಲ್ ಮಾದರಿಯಲ್ಲಿ ಐಸಿಸಿ 13 ತಂಡಗಳ ಏಕದಿನ ಲೀಗ್​

ಐಪಿಎಲ್ ಮಾದರಿಯಲ್ಲಿ ಐಸಿಸಿ 13 ತಂಡಗಳ ಏಕದಿನ ಲೀಗ್​
X

ಬಹುಚರ್ಚಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ ಜೊತೆಗೆ ಐಪಿಎಲ್ ಮಾದರಿಯಲ್ಲಿ 13 ತಂಡಗಳ ಏಕದಿನ ಲೀಗ್ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತೀರ್ಮಾನಿಸಿದ್ದು, ಇದೇ ವರ್ಷ ನಡೆಯಲಿದೆ.

ಬುಧವಾರ ಐಸಿಸಿ ಅಂತಾರಾಷ್ಟ್ರೀಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಜುಲೈ 15, 2019ರಿಂದ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಲಿದೆ. 2 ವರ್ಷಗಳ ಅವಧಿಯಲ್ಲಿ ಈ 9 ರಾಷ್ಟ್ರಗಳು ತಲಾ 2 ಸರಣಿ (ಸ್ವದೇಶ-ವಿದೇಶ) ಆಡಲಿವೆ. ಅಗ್ರ 2 ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಲಿದ್ದು, 2021 ಜೂನ್​ನಲ್ಲಿ ಫೈನಲ್ ನಡೆಯಲಿದೆ.

ಐಪಿಎಲ್ ಮಾದರಿಯಲ್ಲಿ ಏಕದಿನ ಕ್ರಿಕೆಟ್ ಲೀಗ್ ಮೇ 1, 2020ರಿಂದ 2022 ಮಾರ್ಚ್ 31ರ ನಡುವೆ ನಡೆಯಲಿದ್ದು, 12 ಟೆಸ್ಟ್ ಮಾನ್ಯತೆ ಪಡೆದ ತಂಡಗಳು ಹಾಗೂ ಹಾಲೆಂಡ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಭಾರತ ತನ್ನ ಮೊದಲ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ 2019 ಜುಲೈನಲ್ಲಿ ಆಡಲಿದೆ. ಏಕದಿನ ಲೀಗ್​ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ 2020 ಜೂನ್​ನಲ್ಲಿ ಆಡಲಿದೆ.

Next Story

RELATED STORIES