Top

ಬರದಿಂದ ಸಾಗಿದೆ ಹೆಚ್ ಎನ್ ವ್ಯಾಲಿ ಯೋಜನೆ

ಬರದಿಂದ ಸಾಗಿದೆ ಹೆಚ್ ಎನ್ ವ್ಯಾಲಿ ಯೋಜನೆ
X

ಚಿಕ್ಕಬಳ್ಳಾಪುರ : ಬಯಲು ಸೀಮೆಯ ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿತವಾಗಿದ್ದು 1200 ಅಡಿ ಕೊಳವೇ ಭಾವಿ ಕೊರೆದರು ನೀರು ಸಿಗುವುದು ಕಷ್ಟವಾಗಿದೆ. ಸಿಗುತ್ತಿರುವ ನೀರಿನಲ್ಲಿ ಪ್ಲೋರೈಡ್ ಅಂಶ ಅಧಿಕವಾಗಿದ್ದು ಇದು ಜನರಿಗೆ ಅಪಾಯವನ್ನು ತಂದೋಡ್ಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಸಲುವಾಗಿ ರೂಪಗೊಂಡಿದ್ದೆ, ಎಚ್ ಎನ್ ವ್ಯಾಲಿ ಯೋಜನೆ. ಈ ಎಚ್ ಎನ್ ವ್ಯಾಲಿ ಯೋಜನೆ ಒಂದು ಕಡೆ ವೇಗವಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಯೋಜನೆಯನ್ನು ಸ್ಥಗಿತ ಗೊಳಿಸಲು ಶಾಶ್ವತ ನೀರಾವರಿಯವರು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಯಾವುದಾದರೂ ಮೂಲಗಳೀಂದ ನೀರನ್ನು ಅರಿಸಬೇಕು. ಇದೇ ಉದ್ದೇಶದೊಂದಿಗೆ ರೂಪಗೊಂಡಿದ್ದೆ ಚಿಕ್ಕಬಳ್ಳಾಪುರಕ್ಕೆ ನೀರು ಹರಿಸಬೇಕೆಂದು ಉದ್ದೇಶಿಸಿರುವ ಎಚ್ ಎನ್ ವ್ಯಾಲಿ ಯೋಜನೆ ಸುಮಾರು 900 ಕೋಟಿ ರೂಪಾಯಿಗಳ ಈ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಸೆಪ್ಟೆಂಬರ್ ನಲ್ಲಿ ಚಾಲನೆ ನೀಡಿದರು.

ಹೆಚ್ ಎನ್ ವ್ಯಾಲಿ ಯೋಜನೆ ಎಂದರೆ ಹೆಬ್ಬಾಳ ನಾಗವಾರ ತ್ಯಾಜ್ಯ ನೀರನ್ನ ಎರಡು ಹಂತದಲ್ಲಿ ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ. ಈ ಮಹತ್ವಕಾಂಕ್ಷಿ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು ಹೈದಾರಬಾದ್ ಮೂಲದ ಕಂಪನಿಗೆ ಸರ್ಕಾರ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಮೊದಲು ನೀರು ಹರಿದು ಬರಲಿದೆ. ಈಗಾಗಲೇ ಚಿಕ್ಕಬಳ್ಳಾಪುರದ ಕಂದವಾರದಿಂದ ಹೆಬ್ಬಾಳದವರೆಗೂ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಸುಮಾರು 120 ಕಿ.ಮೀನಷ್ಟು ದೂರ ಪೈಪ್ ಅಳವಡಿಕೆಯಾಗಬೇಕಿದೆ.

ಇನ್ನು ಈ ಕಾಮಗಾರಿಗೆ ಬೃಹತ್ ಗಾತ್ರದ ಜೇಸಿಬಿ ಮತ್ತು ಕ್ರೇನ್‌ಗಳನ್ನು ಅಳವಡಿಸಿ ಹಗಲು ರಾತ್ರಿ ಎನ್ನದೇ ಪೈಪ್ ಲೈನ್ ಕಾಮಗಾರಿಗೆ ತೊಡಗಿದ್ದಾರೆ. ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಸರ್ಕಾರ ಇನ್ನೇನು ಕೆಲವೇ ತಿಂಗಳಲ್ಲಿ ಚಿಕ್ಕಬಳ್ಳಾಪುರದ ಕೆರೆಗಳಿಗೆ ನೀರನ್ನು ತುಂಬಿಸಲಿವೆ. ನಂದಿಯವರೆಗೂ ಈ ಕಾಮಗಾರಿ ಬಂದಿದ್ದು ರಸ್ತೆಯ ಪಕ್ಕದಲ್ಲಿ 6 ರಿಂದ 8 ಅಡಿ ಟ್ರಂಚ್ ನಿರ್ಮಿಸಿ ಅದರ ಮೂಲಕ ಪೈಪ್ ಅಳವಡಿಸಲಾಗುತ್ತಿದೆ.

ಹಿಂದೆ 2 ಹಂತದಲ್ಲಿ ಶುದ್ಧಿಕರಿಸಿ ಕೊಡುತ್ತೆವೆ ಎಂದು ಹೇಳಿದ್ದ ಸರ್ಕಾರ 3ನೇ ಹಂತಕ್ಕೂ ಕೂಡ ತಾನು ಹಣ ಕೊಡುತ್ತಿನಿ ಎಂದು ಹೇಳಿದ್ದ ಸಿದ್ದರಾಮಯ್ಯ ನವರು ಅಧಿಕಾರದಲ್ಲಿ ಇಲ್ಲದ ಕಾರಣ ಈಗ ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದು, ಅವರಿಗೆ 3ನೇ ಹಂತದಲ್ಲೂ ನೀರನ್ನು ಶುದ್ಧೀಕರಿಸಲು ಮನವಿಯನ್ನು ಮಾಡುತ್ತೆನೆ ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೆಳೀದ್ದಾರೆ. ನೀರು ಸಿಗಬಾರದು ಎಂದು ಹೋರಾಟಗಾರರು ಹೇಳುತ್ತಿದ್ದು, ಇನ್ನೂ ಹೈಕೋರ್ಟನಲ್ಲಿ ದಾಖಲು ಮಾಡಿದ್ದಾರಂತೆ ನೋಡಲಿ ಬೇರೆ ದೇಶಗಳಲ್ಲಿ ಶುದ್ಧಿಕರಿಸಿ ನೀರನ್ನು ನೀಡುತ್ತಿದ್ದು ಆ ದೇಶಗಳಲ್ಲಿ ಯಾವುದೇ ಖಾಯಿಲೆಗಳು ಬಂದಿಲ್ಲ ಎಂಬ ಆರೋಪ ವನ್ನು ಮಾಡುತ್ತಿದ್ದಾರೆ ಎಂದರು.

ಇನ್ನೂ ಶಾಶ್ವತ ನೀರಾವರಿ ಹೋರಾಟಗಾರರು ಒಳ್ಳೆ ನೀರನ್ನು ಕೊಡಲಿ ಅದು ಬಿಟ್ಟು ಇಂತಹ ರೋಗ ಬರುವ ನೀರನ್ನು ಕೊಟ್ಟು ಜನರಿಗೆ ದಾರಿ ತಪ್ಪಿಸಿಸುತ್ತಿದ್ದು ತಂತ್ರಜ್ಞಾನದಲ್ಲಿ ಮುಂದುವರಿದಿರುವ ಕೆಲ ದೇಶಗಳು, ಕಾರ್ಖನೆಗಳ ವಿಷಯುಕ್ತ ನೀರಿನ ಬದಲಿಗೆ, ಗೃಹ ಬಳಕೆಯ ನೀರನ್ನು ಪುನರ್ ಬಳಕೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರಕಾರ 2017ರ ಆಗಸ್ಟ್ ತಿಂಗಳಿನಲ್ಲಿ ೪೫೦ ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಿದ ಎಚ್‌ಎನ್ ವ್ಯಾಲಿ ಯೋಜನೆಯ ಸಂಪೂರ್ಣ ವಿಷಯುಕ್ತವಾಗಿದ್ದು. ಬಳಕೆಗೆ ಯೋಗ್ಯವಲ್ಲ ಎಂದು ೨೦೧೫ರಲ್ಲಿಯೇ ಐಐಎಸ್‌ಇ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್) ವರದಿ ನೀಡಿದೆ. ಈ ವರದಿಯನ್ನು ನಿರಾಕರಿಸಿರುವ ಸರಕಾರ, ಬಯಲು ಸೀಮೆಗೆ ನೀರಿನ ಹೆಸರಿನಲ್ಲಿ ವಿಷ ನೀಡಲು ಮುಂದಾಗಿದೆ ಎಂಬ ಆರೋಪಗಳು ಕಳೆದ 2 ವರ್ಷಗಳಿಂದಲ್ಲೂ ಕೇಳುತ್ತಲೇ ಇದೆ. ಬಹುತೇಕ ಕೆರೆಗಳಲ್ಲಿ ಕೈಗಾರಿಕೆಗಳ ರಾಸಾಯನಿಕ ವಸ್ತುಗಳು ಈಗಾಗಲೇ ಸೇರಿಕೊಂಡಿವೆ.

ಸಾರಜನಕ, ಪೊಟಾಷಿಯಂ, ಸೇರಿದಂತೆ ರಾಸಾಯನಿಕ ವಸ್ತುಗಳು ಕೆರೆಗಳಿಗೆ ಸೇರಿದ್ದು, ಈ ನೀರನ್ನು ಕೇವಲ ಎರಡು ಹಂತದಲ್ಲಿ ಸಂಸ್ಕರಿಸಿದರೇ ಖಂಡಿತ ಈ ನೀರು ಸುರಕ್ಷಿತ ಅಲ್ಲ. ಈ ನೀರು ಚಿಕ್ಕಬಳ್ಳಾಪುರ ಭಾಗದ ಕೆರೆಗಳಿಗೆ ಹರಿದರೆ ಖಂಡಿತ ಅಂರ್ತಜಲ ಕಲ್ಮಶವಾಗಲಿದೆ ಜಿಲ್ಲೆಗೆ ಈ ನೀರು ಹರಿದು ಬಂದರೆ, ಪ್ಲೋರೈಡ್, ನೈಟ್ರೈಟ್, ರಂಜಕ, ಸಾರಜನಕ ಸೇರಿದಂತೆ ಅಪಾಯಕಾರಿ ವಿಷಯುಕ್ತ ಲೋಹದ ಅಂಶಗಳುಳ್ಳ ನೀರು ಮನುಷ್ಯನ ಜೀವನ ನರಕಕ್ಕೆ ದೂಡಲಿದೆ. ಮೂರು ಹಂತದಲ್ಲಿ ನೀರನ್ನು ಶುದ್ಧಿಕರಿಸಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಮೂರನೆ ಹಂತದಲ್ಲಿ ನೀರನ್ನು ಶುದ್ದಿಕರಿಸಿ ಕೊಡುಬೇಕು ಈ ಯೋಜನೆಯನ್ನ ಸ್ಥಗಿತಗೊಳಿಸಬೇಕು ಎನ್ನುವುದು ಶಾಶ್ವತ ನೀರಾವರಿ ಹೋರಾಟಗಾರರ ಮಾತಾಗಿದೆ ಈ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯದಲ್ಲಿ ದಾವೆಯನ್ನು ಸಲ್ಲಿಸಿದ್ದಾರೆ, ನ್ಯಾಯಲಯದಲ್ಲಿ ಸಲ್ಲಿಸಿದ್ದು ರಾಜ್ಯದ ಉಚ್ಚನ್ಯಾಯಲಯ ಎಚ್ ಎನ್ ವ್ಯಾಲಿಯೋಜನೆಯ ನ್ಯಾಯಲಯದ ಮೆಟ್ಟಿಲೇರಿದ್ದು ಈ ಯೋಜನೆ ಆರಂಭವಾಗುತ್ತ ಅಥವಾ ಪೂರ್ಣಗೊಳ್ಳೂತ್ತ ಅಥವಾ ನ್ಯಾಯಾಲಯದ ವ್ಯತಿರಿಕ್ತವಾಗಿ ತಡೆಯಾಗಬಹುದ ಎನ್ನುವುದರ ಗೊಂದಲದಿದ್ದಾರೆ ಸಾರ್ವಜನಿಕರು.

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES