Top

ಫಿಲ್ಮ್ ಚೇಂಬರ್ ಚುನಾವಣೆ: ಚಿನ್ನೇಗೌಡ, ಸುರೇಶ್ ನಡುವೆ ಪೈಪೋಟಿ

ಫಿಲ್ಮ್ ಚೇಂಬರ್ ಚುನಾವಣೆ: ಚಿನ್ನೇಗೌಡ, ಸುರೇಶ್ ನಡುವೆ ಪೈಪೋಟಿ
X

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಜೂನ್ 26ಕ್ಕೆ ಮಂಡಳಿಯ ಹಲವು ವಿಭಾಗಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚೇಂಬರ್ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಗೌರವ ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ 721 ನಿರ್ಮಾಪಕರು, 378 ವಿತರಕರು ಹಾಗೂ 136 ಪ್ರದರ್ಶಕರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಸದ್ಯ ಯಾವ ಯಾವ ಸ್ಥಾನಗಳಿಗೆ ಯಾರು ಸ್ಫರ್ಧಿಸ್ತಾರೆ ಎಂಬ ವಿವರ ಇಲ್ಲಿದೆ.

ಅಧ್ಯಕ್ಷ ಸ್ಥಾನಕ್ಕೆ ಸವೇಶ್ವರಿ ಕಂಬೈನ್ಸ್​ನ ಚಿನ್ನೇಗೌಡ ಹಾಗೂ ಮಾರ್ಸ್ ಸುರೇಶ್ ಸ್ಪರ್ಧಿಸಿದ್ದಾರೆ. ಇನ್ನೂ ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವುದು ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ ಹಾಗೂ ಕರಿಸುಬ್ಬು. ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಬಿ.ಆರ್.ಕೇಶವ, ನಾಗಣ್ಣ, ಕೆ.ಮಂಜು ಕಣದಲ್ಲಿದ್ದಾರೆ.

ಪ್ರದರ್ಶಕರ ವಲಯದಿಂದ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ರೆ, ಗೌರವ ಖಜಾಂಚಿ ಸ್ಥಾನಕ್ಕೆ ಚಿತ್ರಲೋಕ ಮೂವೀಸ್‍ನ ಕೆ.ಎಂ. ವೀರೇಶ್ ಮತ್ತು ಜಯಸಿಂಹ ಮುಸುರಿ ಮಧ್ಯೆ ಸ್ಪರ್ಧೆಯಿದೆ. ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಕೂಡಾ ಚುನಾವಣೆ ನಡೆಯಲಿದೆ. ಜೂನ್ 26ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಪ್ರದರ್ಶಕರ ವಲಯದಿಂದ ಅಶೋಕ ಥಿಯೇಟರ್ ಮಾಲೀಕ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿರುವುದು ಎ. ಗಣೇಶ್ ಹಾಗೂ ಭಾ.ಮಾ.ಹರೀಶ್, ವಿತರಕರ ವಲಯದಿಂದ ಪಾರ್ಥಸಾರಥಿ, ರಾಜಶೇಖರ್, ವೆಂಕಟೇಶ್ ಹಾಗೂ ಶಿಲ್ಪ ಶ್ರೀನಿವಾಸ್ ಸ್ಪರ್ಧೆಯಲ್ಲಿದ್ದಾರೆ.

Next Story

RELATED STORIES