Top

ಆರೋಪ ಸಾಬೀತಾದರೆ ಡಿಕೆಶಿಗೆ 7 ವರ್ಷ ಶಿಕ್ಷೆ?

ಆರೋಪ ಸಾಬೀತಾದರೆ ಡಿಕೆಶಿಗೆ 7 ವರ್ಷ ಶಿಕ್ಷೆ?
X

ಹವಾಲಾ ಪ್ರಕರಣ, ತೆರಿಗೆ ವಂಚನೆ.. ಮುಂತಾದ ಪ್ರಕರಣಗಳಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲು ತೆರಿಗೆ ಇಲಾಖೆ ಸಜ್ಜಾಗಿರುವ ಬೆನ್ನಲ್ಲೇ ಶಿಕ್ಷೆಯ ಪ್ರಮಾಣದ ಬಗ್ಗೆಯೂ ಚರ್ಚೆಯಾಗುತ್ತಿದೆ.

ಡಿಕೆ ಶಿವಕುಮಾರ್ ವಿರುದ್ಧದ ಅರೋಪ ಸಾಬೀತಾದರೆ ಗರಿಷ್ಠ 7 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಆದರೆ ವಿಚಾರಣೆ ಹಂತದಲ್ಲಿಯೇ ಎಷ್ಟು ವರ್ಷ ಕಂಬಿ ಹಿಂದೆ ಇರಬೇಕಾದೀತು ಎಂಬುದು ಕೂಡ ಪ್ರಶ್ನೆಯಾಗಿದೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಜಾಮೀನಿಗೆ ಪ್ರಯತ್ನ ನಡೆಸಿದ್ದು, ಕಾನೂನು ಸಮರಕ್ಕೆ ಸಜ್ಜಾಗುತ್ತಿದ್ದಾರೆ.

ಐಟಿ ಸೆಕ್ಷನ್ 277ರ ಪ್ರಕಾರ ಐಟಿ ಅಧಿಕಾರಿಗಳ ವೇಳೆ 1 ಲಕ್ಷ ರೂ.ಗಿಂತ ಅಧಿಕ ಪ್ರಮಾಣದಲ್ಲಿ ತೆರಿಗೆ ವಂಚನೆ ಸಾಬೀತಾದರೆ ಆ ವ್ಯಕ್ತಿಗೆ 6 ತಿಂಗಳಿಂದ 7 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಬಹುದು. 1 ಲಕ್ಷಕ್ಕಿಂತ ಕಡಿಮೆ ಮೊತ್ತದ ತೆರಿಗೆ ವಂಚಿಸಿದರೆ ಇತರ ಪ್ರಕರಣದಲ್ಲಿ ಕನಿಷ್ಠ 3 ತಿಂಗಳಿನಿಂದ 3 ವರ್ಷದ ವರೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಬಹುದು.

ಐಟಿ ಸೆಕ್ಷನ್ 276ಸಿ(1) ಪ್ರಕಾರ ಉದ್ದೇಶ ಪೂರ್ವಕವಾಗಿ ಯಾವುದೇ ವ್ಯಕ್ತಿ ತೆರಿಗೆ, ದಂಡ ಅಥವಾ ಬಡ್ಡಿ ಪಾವತಿಸದೇ ವಂಚಿಸಲು ಪ್ರಯತ್ನಿಸಿದರೆ, ಮೊತ್ತ 1 ಲಕ್ಷ ರೂ.ಗಿಂತ ಜಾಸ್ತಿಯಿದ್ದು, ತೆರಿಗೆ ವಂಚನೆ ಮಾಡಿದ್ದು ಸಾಬೀತಾದರೆ ಆ ವ್ಯಕ್ತಿಗೆ ಕನಿಷ್ಠ 6 ತಿಂಗಳಿನಿಂದ ಗರಿಷ್ಠ 7 ವರ್ಷದ ವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.

Next Story

RELATED STORIES