Top

ಕುಂದಾನಗರಿಯಲ್ಲಿ ನಡೀತಿದೆ ಡೇಂಜರ್ಸ್ ಬೋಟಿಂಗ್

ಕುಂದಾನಗರಿಯಲ್ಲಿ ನಡೀತಿದೆ ಡೇಂಜರ್ಸ್ ಬೋಟಿಂಗ್
X

ಬೆಳಗಾವಿ : ಕುಂದಾನಗರಿ ಎಂದೇ ಪ್ರಸಿದ್ದವಾದ ಜಿಲ್ಲೆಯಲ್ಲಿ ಜನರು ಡೇಂಜರ್ಸ್ ಬೋಟಿಂಗ್ ಮಾಡ್ತಾರೆ. ಲೈಪ್ ಜಾಕೇಟ್ ಇಲ್ಲದೇ ಮಡದಿ, ಮಕ್ಕಳೊಂದಿಗೆ ನೀರಿನಲ್ಲಿ ಮೋಜು-ಮಸ್ತಿಗೆ ಇಳಿಯುತ್ತಾರೆ. ಸ್ವಲ್ಪ ಯಾಮಾರಿದ್ರೂ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವುದು ಗ್ಯಾರೇಂಟಿ. ಡೇಂಜರ್ಸ್ ಬೋಟಿಂಗ್ ಬ್ರೇಕ್ ಹಾಕಬೇಕಾದ ಪಾಲಿಕೆ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತ್ತಿದ್ದಾರೆ.

ಹೌದು.. ಕುಂದಾನಗರಿ ಬೆಳಗಾವಿಯಲ್ಲಿ ರಾಜಾರೋಷವಾಗಿ ಡೇಂಜರ್ಸ್ ಬೋಡಿಂಗ್ ಮಾಡಲಾಗುತ್ತಿದೆ.. ನಗರದ ಕೋಟೆ ಕೆರೆಯಲ್ಲಿ ಈ ರಿಸ್ಕಿ ಬೋಟಿಂಗ್ ನಡೆಯುತ್ತದೆ.. ಬೆಳಗಾವಿಯ ಕೋಟೆ ಕೆರೆ ಸ್ಮಾರ್ಟ ಸಿಟಿಯ ಪ್ರವಾಸ ತಾಣಗಳಲ್ಲಿ ಒಂದಾಗಿದೆ.. ಇಲ್ಲಿ ಆಗಮಿಸ ಜನರಿಗಾಗಿ ಪಾಲಿಕೆಯಿಂದ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.. ಹೀಗೆ ದಿನವೂ ಇಲ್ಲಿ ಸಾವಿರಾರು ಜನರು ಬರ್ತಾರೆ.

ಇತ್ತೀಚಿನ ದಿನಗಳಲ್ಲಿ ನೀರನಲ್ಲಿ ಮೋಜು-ಮಸ್ತಿಗೆ ಹೋದವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಬೋಟಿಂಗ್ ಮಾಡುವವರು ಕಡ್ಡಾಯವಾಗಿ ಲೈಪ್ ಜಾಕೇಟ್ ಹಾಕಿಕೊಳ್ಳಬೇಕು. ಆದ್ರೆ ಇಲ್ಲಿ ಮಕ್ಕಳು, ಮಡದಿಯೊಂದಿಗೆ ನೀರಿಗಿಳಿದ್ರೂ ಯಾರೊಬ್ಬರು ಲೈಪ್ ಜಾಕೇಟ್ ಹಾಕಿಕೊಳ್ಳುವುದಿಲ್ಲ. ಅಲ್ಲದೇ, ಲೈಪ್ ಜಾಕೇಟ್ ಇಲ್ಲದೇ ಯಾರೊಬ್ಬರನ್ನ ನೀರಿಗೆ ಇಳಿಯದಂತೆ ಎಚ್ಚರವಹಿಸಬೇಕಾದ ಗುತ್ತಿಗೆದಾರನು ಜನರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾನೆ ನೋಡಿ.

ಬೆಳಗಾವಿ ಕೋಟೆ ಕೆರೆಯಲ್ಲಿ ದಿನವೂ ಬೆಳಗ್ಗೆಯಿಂದ ಸಂಜೆಯ ವರೆಗೂ ಬೋಟಿಂಗ್ ನಡೆಯುತ್ತದೆ. ಈ ರೀತಿ ಪ್ರಾಣವನ್ನ ರಿಸ್ಕನಲ್ಲಿ ತೆಗೆದುಕೊಂಡು ಜನರು ಬೋಟಿಂಗ್ ಮಾಡುತ್ತಾರೆ. ಹೀಗೆ ಬೋಟಿಂಗಗೆ ಇಳಿಯುವವರು ಮೋಜು-ಮಸ್ತಿ ಭರಾಟೆಯಲ್ಲಿ ಸುರಕ್ಷತಾ ಕ್ರಮಗಳನ್ನ ಅನುಸರಿಸುವುದಿಲ್ಲ. ಲೈಪ್ ಜಾಕೇಟ್ ಧರಿಸದೇ ಬೋಟಿಂಗಗೆ ಗುತ್ತಿಗೆದಾರನು ಅವಕಾಶ ಮಾಡಿಕೊಡಬಾರದು. ಇನ್ನು ಪ್ರವಾಸಿ ತಾಣವಾಗಿ ಪರಿವರ್ತನೆ ಆಗುತ್ತಿರುವ ಕೋಟೆ ಕೆರೆಯಲ್ಲಿ ಡೇಂಜರ್ಸ್ ಬೋಟಿಂಗ್ ನಡೆಯುತ್ತಿದ್ದರೂ ಬೆಳಗಾವಿ ಮಹಾನಗರ ಪಾಲಿಕೆ ಕಣ್ಮಮುಚ್ಚಿ ಕುಳಿದೆ.. ಸುರಕ್ಷತಾ ಕ್ರಮವನ್ನ ಗಾಳಿಗೆ ತೂರಿ ಬೋಟಿಂಗ್ ನಡೆಯುತ್ತಿದ್ದರೂ ಯಾರು ಹೇಳುವವರು, ಕೇಳುವವರು ಇಲ್ಲದಂತಾಗಿದೆ.

ಒಟ್ಟ್ನಲ್ಲಿ ಮಳೆಗಾಲ ಬಂದ್ರೆ ಸಾಕು ಜನರು ಬೆಳಗಾವಿ ಕೋಟೆ ಕರೆ ನೀರಿನಲ್ಲಿ ಮೋಜು-ಮಸ್ತಿಗೆ ಇಳಿಯುತ್ತಾರೆ.. ಹೀಗೆ ಲೈಪ್ ಜಾಕೇಟ್ ಇಲ್ಲದೇ ಡೇಂಜರ್ಸ್ ಬೋಟಿಂಗ್ ನಡೆಯುತ್ತಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನ ಹರಿಸದೇ ಇರುವುದು ದುರಂತ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ.

Next Story

RELATED STORIES