Top

ಡಿಕೆಶಿ ಹವಾಲಾ ವ್ಯವಹಾರ ನಡೆಸ್ತಿದ್ದರಾ? ಬಂಧನಕ್ಕೆ ಐಟಿ ಸಿದ್ಧತೆ

ಡಿಕೆಶಿ ಹವಾಲಾ ವ್ಯವಹಾರ ನಡೆಸ್ತಿದ್ದರಾ? ಬಂಧನಕ್ಕೆ ಐಟಿ ಸಿದ್ಧತೆ
X

ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಸತತವಾಗಿ ದಾಳಿ ಎದುರಿಸುತ್ತಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಇತ್ತೀಚೆಗೆ ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ನಾನಾ ಕಡೆ ದಾಳಿ ನಡೆಸಿದ್ದ ಐಟಿ ಡಿ.ಕೆ.ಶಿವಕುಮಾರ್​ ಹವಾಲಾ ವ್ಯವಹಾರ ನಡೆಸುತ್ತಿರುವ ಬಗ್ಗೆ ಸುಳಿವು ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ಎಐಸಿಸಿಗೆ ಡಿ.ಕೆ. ಶಿವಕುಮಾರ್ ಕೋಟ್ಯಂತರ ರೂ. ಹಣ ಪಾವತಿಸಿದ್ದು, ಇದಕ್ಕಾಗಿ ಹವಾಲಾ ಬಳಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ದೆಹಲಿಯ ಡಿಕೆಶಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಪತ್ತೆಯಾಗಿದ್ದ 8.59 ಲಕ್ಷ ರೂ. ಹವಾಲಾ ಹಣ ಎಂದು ಐಟಿ ದಾಖಲಿಸಿದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಡಿ.ಕೆ.ಶಿವಕುಮಾರ್​ ಹಣದ ವರ್ಗಾವಣೆಯ ವಿವರಗಳನ್ನು ಲಕ್ಷಗಳನ್ನು ಕೆಜಿ ಎಂದು ಉಲ್ಲೇಖಿಸಿದ್ದಾರೆ. ವಿ. ಮುಳುಂದ್​ಗೆ 5 ಕೋಟಿ ಎಐಸಿಸಿಗೆ ನೀಡುವಂತೆ ಸೂಚಿಸಿರುವ ಮಾಹಿತಿಯನ್ನು ಐಟಿ ಹೊಂದಿದೆ.

ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ರಾಜೇಂದ್ರ ಎಂಬಾತ ಮಾಜಿ ಸಚಿವ ಆಂಜನೇಯಗೆ 3.24 ಕೋಟಿ ರೂ. ಡಿಕೆಶಿಗೆ 2 ಕೋಟಿ ರವಾನಿಸಿದ್ದಾರೆ. ಡೈರಿಯಲ್ಲಿನ ಅಂಶಗಳ ಬಗ್ಗೆ ರಾಜೇಂದ್ರ ಐಟಿಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಡಿಕೆಶಿ ಅಘೋಷಿತ ಹಣ ರಕ್ಷಣೆಗೆ ಸಚಿನ್ ನಾರಾಯಣ್ ಎಂಬಾತನನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Next Story

RELATED STORIES