Top

ಬೀದರ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ : ಡಿಸಿ ನೋಟಿಸ್‌ಗೆ ಡೋಂಟ್‌ ಕೇರ್‌

ಬೀದರ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ : ಡಿಸಿ ನೋಟಿಸ್‌ಗೆ ಡೋಂಟ್‌ ಕೇರ್‌
X

ಬೀದರ್ : ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಅದ್ಯಾಕೋ ಇನ್ನು ಸರಿ ಹೋಗುವಂತೆ ಕಾಣುತ್ತಿಲ್ಲಾ.. ಖುದ್ದಾಗಿ ಜಿಲ್ಲಾಧಿಕಾರಿ ಭೇಟಿ ನೀಡಿ ಪ್ರತಿವಾರ ಪರಿಶೀಲನೆ ಮಾಡುತ್ತಿದ್ದರು, ಬಡ ರೋಗಿಗಳ ಪರದಾಟ ಅಲೇದಾಟ ಇನ್ನು ನಿಲ್ಲುವಂತೆ ಕಾಣುತ್ತಿಲ್ಲಾ.. ಅಂದಹಾಗೇ ಬ್ರೀಮಸ್​ ನಲ್ಲಿ ಇವತ್ತು ಮತ್ತೆ ಅದೇ ಸ್ಥಿತಿ ಮುಂದುವರೆದಿದೆ.

ಮತ್ತೆ ನಿಯಮ ಉಲ್ಲಂಘಿಸಿದ ಬ್ರೀಮ್ಸ್ ಅಧಿಕಾರಿಗಳು

ಬ್ರೀಮ್ಸ್ ಆಸ್ಪತ್ರೆಯ ಕರ್ಮಕಾಂಡ ಬಗ್ಗೆ ಹೇಳುತ್ತಾ ಹೋದ್ರೆ ಒಂದಾ ಎರಡಾ. ಈ ಹಿಂದೆ ಟಿವಿ5 ನಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಕರ್ಮಕಾಂಡದ ಬಗ್ಗೆ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಿತ್ತು. ಇದ್ರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಧಧಿಕಾರಿ ಅನಿರುದ್ ಶರವಣ್ ಖುದ್ದಾಗಿ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದ್ರು. ಕಳೆದ ಒಂದು ತಿಂಗಳಿಂದ ಪರಿಶೀಲನೆ ನಡೆಸುತ್ತಿದ್ದ ಜಿಲ್ಲಾಧೀಕಾರಿಗಳಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಅಲ್ಲಿನ ಅವ್ಯವಹಾರದ ಬಗ್ಗೆ ಗಮನಕ್ಕೆ ಬಂದಿತ್ತು.. ಈದ್ರಿಂದಾಗಿ ಬ್ರೀಮ್ಸ್ ನ 20ಕ್ಕೂ ಹೆಚ್ಚು ವೈದ್ಯರಿಗೆ ನೋಟಿಸ್ ಜಾರಿ ಮಾಡಿ ಅವ್ರಿಂದ 50 ಸಾವಿರ ಮೌಲ್ಯದ ಬಾಂಡ್ ಬರೆಸಿಕೊಂಡು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಖಡಕ್ ಆಗಿ ವಾರ್ನ್ ಮಾಡಿದ್ದು, ಈ ಬಗ್ಗೆ ನಿನ್ನೆ ಜಿಲ್ಲಾಧೀಕಾರಿ ಕರೆದ ಪತ್ರಿಕಾಗೋಷ್ಟೀಯಲ್ಲಿ ಖುದ್ದಾಗಿ ಹೇಳಿದ್ರು.

ಜಿಲ್ಲಾಧೀಕಾರಿಗಳ ಆದೇಶಕ್ಕೂ ಬೆಲೆ ಕೊಡದ ವೈದ್ಯರು

ಜಿಲ್ಲಾಧೀಕಾರಿಗಳ ಈ ಖಡಕ್ ನಿರ್ಧಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತೇ ಮತ್ತೆ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತೆ ಅಂತಾ ಜನ್ರು ನಿರೀಕ್ಷೆಯಲ್ಲಿದ್ರು. ಜಿಲ್ಲಾಧಿಕಾರಿಗಳ ಆದೇಶಕ್ಕೆ ಬೆಲೆ ಕೊಡದ ಬ್ರೀಮ್ಸ್ ಅಧಿಕಾರಿಗಳು ಇಂದು ಮತ್ತೆ ಸರಕಾರಿ ನಿಯಮವನ್ನ ಉಲ್ಲಂಘಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಖಾಸಗಿ ಆಸ್ಪತ್ರೆಯಲ್ಲೇ ಅಧಿಕಾರಿಗಳು ಕಾಲ ಕೆಳೆಯುತ್ತಿದ್ದಾರೆ..ವೈದ್ಯರು ತಮ್ಮ ಹಳೆ ಚಾಳಿಯನ್ನೇ ಇವತ್ತು ಸಹ ಮುಂದುವರೆಸಿದ್ದು,ಈದ್ರಿಂದಾಗಿ ಆಸ್ಪತ್ರೆಯಲ್ಲಿ ವೈದ್ಯರುಗಳಿಲ್ಲದೇ ರೋಗಿಗಳು ಮತ್ತೆ ಪರದಾಟ ಎಂದಿತಂತೆ ಸಾಮಾನ್ಯವಾಗಿತ್ತು..

ಕಳೆದ ಎರಡುವಾರದ ಹಿಂದೆಯಷ್ಟೇ ಬ್ರೀಮ್ಸ್ ಆಸ್ಪತ್ರೆಗೆಭೇಟಿನೀಡಿದಾಗ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ಬಗ್ಗೆ ಗಮನಕ್ಕೆ ಬಂದಿತ್ತು, ಆದ್ರೇ ಇಂದು ಸಹ ಅದೇ ಸಮಸ್ಯೆ ಮತ್ತೆ ಮುಂದುವರೆದಿದೆ,ಬ್ರಿಮ್ಸ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ರು, ರೋಗಿಗಳ ಚಿಕಿತ್ಸೆಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲಾ, ಪ್ರಭಾವಿ ಶಾಸಕರು ಹಾಗೂ ಸಚಿವರುಗಳ ಜತೆಯಲ್ಲಿ ಉತ್ತಮ ಭಾಂದವ್ಯ ಹೊಂದಿದ್ದ ವ್ಯಕ್ತಿಗಳೇ ಇಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲಾ ಎನ್ನುವಮಾತುಗಳು ಕೇಳೀ ಬರುತ್ತಿವೆ..

ಅದೇನೆ ಇರಲಿ ಬಡ ಜನ್ರು ಖಸಗಿ ಆಸ್ಪತ್ರೆಯನ್ನ ಬಿಟ್ಟು ಸರ್ಕಾರಿ ಆಸ್ಪತ್ರೆಯಲ್ಲೇ ಎಲ್ಲಾ ಸೌಲಭ್ಯಗಳನ್ನ ಪಡೆಯಲಿ ಅಂತಾ ಸರಕಾರ ಕೋಟೀ ಕೋಟಿ ಹಣ ಖರ್ಚು ಮಾಡುತ್ತಿದ್ದರೆ ಬೀದರ್ ಜನತೆಗೆ ಮಾತ್ರ ಅದ್ಯಾಕ್ಕೂ ಇನ್ನು ಸಿಗುವಂತೆ ಕಾಣುತ್ತಿಲ್ಲಾ. ಇಲ್ಲಿನ ಸಿಬ್ಬಂದಿಗಳನ್ನ ಬೆರೆಕಡೆ ವರ್ಗಾವಣೆ ಮಾಡಿ ಇಲ್ಲಿ ಬರೆ ಸಿಬ್ಬಂದಿಗಳನ್ನ ಹಾಕಿದ್ರೆ ಬ್ರಿಮ್ಸ್ ನಲ್ಲಿ ಉತ್ತಮ ಸೇವೆ ಸಿಗಬಹುದು ಎನ್ನುವುದು ಸ್ಥಳೀಯರ ಆಶಯವಾಗಿದೆ. ಇನ್ನಾದ್ರು ಸರ್ಕಾರ ಇತ್ತ ಗಮನ ಹರಿಸಿ ಬಡ ಜನ್ರ ಸೇವೆಗೆ ಮುಂದಾಗಬೇಕಿದೆ.

ವರದಿ : ವಿಶ್ವ ಕುಮಾರ್, ಟಿವಿ5 ಬೀದರ್

Next Story

RELATED STORIES