ಫಿಫಾ ವಿಶ್ವಕಪ್: ಜಪಾನ್ಗೆ ಸೋತ ಕೊಲಂಬಿಯಾ

X
TV5 Kannada19 Jun 2018 2:51 PM GMT
ಮಾಸ್ಕೊ: 10 ಮಂದಿ ಆಟಗಾರ ಕೊಲಂಬಿಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮಂಗಳವಾರ ನಡೆದ 'ಎಚ್' ಗುಂಪಿನ ಪಂದ್ಯದಲ್ಲಿ ಜಪಾನ್ ತಂಡದ ಪರ ಶಿಂಜಿ ಕಾಗವಾ (6ನೇ ನಿಮಿಷ) ಮತ್ತು ಯುಯಾ ಒಸಾಕೊ (73ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಕೊಲಂಬಿಯಾ ತಂಡ ಜುವಾನ್ ಫರ್ನಾಂಡೊ ಕ್ವಿಂಟಾರೊ (39ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.
ಪಂದ್ಯ ಅರಂಭವಾದ 5ನೇ ನಿಮಿಷದಲ್ಲಿ ಕೊಲಂಬಿಯಾದ ಕಾರ್ಲೊಸ್ ಸ್ಯಾಂಚೆಸ್ ಮೊರೆನೊ ಕೈಗೆ ಚೆಂಡು ವೃತ್ತದೊಳಗೆ ತಗುಲಿತು. ಇದರಿಂದ ಅವರ ರೆಡ್ ಕಾರ್ಡ್ ನೀಡಲಾಯಿತು. ಕೊಲಂಬಿಯಾ ಒಬ್ಬ ಆಟಗಾರನನ್ನು ಕಳೆದುಕೊಂಡಿದ್ದೂ ಅಲ್ಲದೇ ಜಪಾನ್ಗೆ ಪೆನಾಲ್ಟಿ ಅವಕಾಶ ಕೂಡ ಉಡುಗೊರೆಯಾಗಿ ನೀಡಿತು. 6ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಿಕ್ ಅವರನ್ನು ಸಮರ್ಥವಾಗಿ ಬಳಸಿಕೊಂಡ ಶಿಂಜಿ ಸುಲಭ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು.
Next Story