Top

ಟಾಲಿವುಡ್ ಸೆಕ್ಸ್ ರಾಕೆಟ್ ಬಗ್ಗೆ ಸಂಜನಾ ಹೇಳೋದೇನು..?

ಟಾಲಿವುಡ್ ಸೆಕ್ಸ್ ರಾಕೆಟ್ ಬಗ್ಗೆ ಸಂಜನಾ ಹೇಳೋದೇನು..?
X

ಅಮೇರಿಕಾದ ತನಿಖಾ ಸಂಸ್ಥೆ ಭೇದಿಸಿದ್ದ ಟಾಲಿವುಡ್ ಸೆಕ್ಸ್ ರಾಕೆಟ್​​​ನಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದವರು ಯಾರು ಇಲ್ಲ ಅಂತ ನಟಿ ಸಂಜನಾ ಗರ್ಲಾನಿ ಹೇಳಿದ್ದಾರೆ. ಅಮೆರಿಕದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಹಾಗೂ ಆತನ ಪತ್ನಿಯನ್ನು ಚಿಕಾಗೋ ಪೊಲೀಸರು ಬಂಧಿಸಿರೋ ವಿಚಾರ ಸಂಚಲನ ಸೃಷ್ಟಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತೀಯ ನಟಿಯರನ್ನ ಆಹ್ವಾನಿಸಿ, ಅವ್ರಿಗೆ ಹಣದ ಆಮಿಷ ತೋರಿಸಿ, ಈ ದಂಪತಿ ಹೈಟೆಕ್ ವೇಶ್ಯಾವಾಟಿಕೆ ನಡೆಸ್ತಿದ್ದರು ಅಂತ ಅಮೇರಿಕಾ ತನಿಖಾ ಸಂಸ್ಥೆ ಬಹಿರಂಗ ಪಡಿಸಿದೆ.

ಸೌತ್​ ಸಿನಿದುನಿಯಾದ ಟಾಪ್ ನಟಿಯರು ಸಹ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋ ವಿಚಾರ ದೊಡ್ಡದಾಗಿ ಸದ್ದು ಮಾಡ್ತಿದೆ. ಆದ್ರೆ ಈ ಮಾತಿನಲ್ಲಿ ಎಳ್ಳಷ್ಟೂ ಸತ್ಯ ಇಲ್ಲ ಅನ್ನೋದು ಸಂಜನಾ ಅಭಿಪ್ರಾಯ. ಪ್ರಕರಣದಲ್ಲಿ ಟಾಲಿವುಡ್​ನ ಟಾಪ್ ನಟಿಯರ ಜೊತೆಗೆ ಕನ್ನಡದ ನಟಿಯರ ಹೆಸರೂ ಇದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಆದ್ರೆ ಇದೆಲ್ಲಾ ಸುಳ್ಳು, ವಿನಾಃ ಕಾರಣ ಕೆಲವರು ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ. ಅಂತವರ ಗಾಳಿ ಮಾತುಗಳಿಗೆ ಯಾರೂ ಕಿವಿಗೊಡಬೇಡಿ ಅಂತ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರೋ ಸಂಜನಾ ತಿಳಿಸಿದ್ದಾರೆ.

Next Story

RELATED STORIES