Top

ಆಸ್ಪತ್ರೆ ಸಿಬ್ಬಂದಿಗಳಿಗೆ ಮಾತಿನ ಇಂಜೆಕ್ಷನ್‌ ನೀಡಿದ ಶಾಸಕ ಎಲ್.ನಾಗೇಂದ್ರ

ಆಸ್ಪತ್ರೆ ಸಿಬ್ಬಂದಿಗಳಿಗೆ ಮಾತಿನ ಇಂಜೆಕ್ಷನ್‌ ನೀಡಿದ ಶಾಸಕ ಎಲ್.ನಾಗೇಂದ್ರ
X

ಮೈಸೂರಿನ : ಚೆಲುವಾಂಬ ಸರ್ಕಾರಿ ಆಸ್ಪತ್ರೆಗೆ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ದಿಢೀರ್ ಭೇಟಿ ನೀಡಿ, ವೈದ್ಯರು, ಸಿಬ್ಬಂದಿಗಳಿಗೆ ಮಾತಿನ ಇಂಜೆಕ್ಷನ್ ನೀಡಿದ್ದಾರೆ.

ಶಾಸಕರಾಗಿ ಆಯ್ಕೆಯಾದ ನಂತರ ಇದೆ ಮೊದಲ ಬಾರಿಗೆ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಚೆಲುವಾಂಬ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಾಗೇಂದ್ರ, ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರಿಂದ ಸಮಸ್ಯೆಗಳನ್ನು ಆಲಿಸಿದರು. ಶಾಸಕರ ಭೇಟಿ ವೇಳೆ ನೆಲದ ಮೇಲೆ ಮಲಗಿದ್ದ ಬಾಣಂತಿಯರನ್ನ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಪ್ರಾಣಿಗಳು ಇರಲು ಸಾಧ್ಯವಿಲ್ಲ ಇಂತಹ ಸ್ಥಳದಲ್ಲಿ ಜನರನ್ನು ಇರಿಸಿದ್ದೀರಾ ಅಂತ ಪ್ರಶ್ನೆ ಮಾಡಿದರು. ಶಾಸಕರ ಪ್ರಶ್ನೆಗೆ ಏನು ಉತ್ತರ ನೀಡದೆ ನಿಂತ ವೈದ್ಯೆ ಡಾ.ಗಂಗಮ್ಮ ಸಮಸ್ಯೆ ಸರಿಪಡಿಸುವುದಾಗಿ ಹೇಳಿದರು. ನಂತರ ಆಸ್ಪತ್ರೆಯ ಮೂಲೆ ಮೂಲೆ ಓಡಾಡಿದ ಶಾಸಕ ಆಸ್ಪತ್ರೆಯ ಅವ್ಯವಸ್ಥೆಗೆ ಕಂಡು ಕೆಂಡಾಮಂಡಲರಾದ್ರು.

ನೀವೇಲ್ಲ ಯಾವ ಶತಮಾನದಲ್ಲಿ ಜೀವನ ಮಾಡ್ತಿದ್ದೀರಾ..? ಜನರನ್ನ ಏನಂದುಕೊಂಡಿದ್ದೀರಾ..? ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆಯಲ್ಲೆ ಮಾತನಾಡುತ್ತೇನೆ. ಅದಕ್ಕೂ ಮೊದಲೇ ಶೀಘ್ರದಲ್ಲಿ ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

Next Story

RELATED STORIES