Top

ಶಾಲಾ ಮಕ್ಕಳನ್ನು ಕೂಲಿಯಾಳುಗಳಂತೆ ಬಳಸಿಕೊಂಡ ಖಾಸಗಿ ಶಾಲೆ

ಶಾಲಾ ಮಕ್ಕಳನ್ನು ಕೂಲಿಯಾಳುಗಳಂತೆ ಬಳಸಿಕೊಂಡ ಖಾಸಗಿ ಶಾಲೆ
X

ಮಂಡ್ಯ : ಖಾಸಗಿ ಶಾಲೆಯೊಂದರಲ್ಲಿ ಮಕ್ಕಳನ್ನು ಕೂಲಿಯಾಳುಗಳಂತೆ ಬಳಸಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ‌.

ನಗರದಲ್ಲಿರುವ ಪ್ರತಿಷ್ಠಿತ "ಡ್ಯಾಫೋಡಿಲ್ಸ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್" ಎಂಬ ಖಾಸಗಿ ಶಾಲೆಯ ಶಿಕ್ಷಕರು ಸಾವಿರಾರು ರೂಪಾಯಿ ಫೀಸ್ ಪಡೆದು ವಿಧ್ಯಾರ್ಥಿಗಳ ಕೈಲಿ ಕಲ್ಲು ಮಣ್ಣು ಹೊರಸಿ ಕೂಲಿಯಾಳುಗಳಂತೆ ನಡೆಸಿಕೊಂಡಿದ್ದಾರೆ‌.

ಮಂಡ್ಯದ ಪ್ರತಿಷ್ಠಿತ ಶಾಲೆಗಳ ಪೈಕಿ ಡ್ಯಾಫೋಡಿಲ್ಸ್ ಶಾಲೆ ಕೂಡ ಒಂದಾಗಿದ್ದು, ಇಂತಹ ಶಾಲೆಯಲ್ಲೆ ಮಕ್ಕಳನ್ನು ಈ ರೀತಿ ನಡೆಸಿಕೊಂಡಿರುವುದು ಪೋಷಕರಲ್ಲಿ ಬೇಸರ ಮೂಡಿಸಿದೆ. ಶಾಲಾ ಆವರಣದಲ್ಲಿ ಮಕ್ಕಳು ಆರೆ, ಗುದಲಿ ಹಿಡಿದು ಕಲ್ಲು ಮಣ್ಣುಗಳನ್ನು ಹೊತ್ತು ಕೆಲ್ಸ ಮಾಡ್ತಿರುವ ದೃಶ್ಯಗಳನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ಬಿಟ್ಟಿದೆ.

ಇನ್ನೂ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಮಾತ್ರ ನಾವು ಮಕ್ಕಳನ್ನು ನಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಂಡಿಲ್ಲ. ಕೆಲವು ದಿನಗಳಿಂದ ಬಿಡದೇ ಮಳೆ ಸುರಿದಿದ್ರಿಂದ ಶಾಲಾ ಆಟದ ಮೈದಾನ ಹದಗೆಟ್ಟಿತ್ತು. ಆ ಸಮಯದಲ್ಲಿ ಮಕ್ಕಳು ಸಣ್ಣ ಪುಟ್ಟ ಕೆಲಸ ಮಾಡಿದ್ದಾರೆ ಅಷ್ಟೇ. ಇದಕ್ಕೆ ಪೋಷಕರು ಒಪ್ಪಿಗೆಯು ಇದೇ ಎಂದು ಬೇಜವಬ್ದಾರಿ ಉತ್ತರ ನೀಡಿದ್ದಾರೆ.

ಆದರೆ ಈ ಘಟನೆ ಸಂಬಂಧ ಬಿಇಓ ವೆಂಕಟೇಶ್ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ, ಮಕ್ಕಳಿಂದ ಶಾಲಾ ಆಡಳಿತ ಮಂಡಳಿ ಕೆಲಸ ಮಾಡಿಸುವಂತಿಲ್ಲ ಆಟದ ಮೈದಾನ ಹದಗೆಟ್ಟಿದ್ರೆ ಅದನ್ನು ಶಾಲಾ ಆಡಳಿತ ಮಂಡಳಿಯೇ ಸರಿಪಡಿಸಬೇಕು. ತಪ್ಪಿತಸ್ಥರ ವಿರುದ್ದ ಶೀಘ್ರವೇ ದೂರು ನೀಡಲಾಗುವುದು ಎಂದಿದ್ದಾರೆ‌.

ಅದೇನೇ ಆಗಲೀ, ಮಕ್ಕಳನ್ನು, ಶಾಲಾ ಆವಣ ಸ್ವಚ್ಛ ಮಾಡಿಸೋಕೆ, ಹಾರೆ, ಗುದಜಿ, ಚೆಲಿಕೆ ಇಡಿಸಿದ್ದು ಮಾತ್ರ ಖೇದಕರ. ಈ ಘಟನೆಯ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ಜರುಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಪೋಷಕರ ಮನವಿಯಾಗಿದೆ.

Next Story

RELATED STORIES