Top

ಕಡೂರಲ್ಲಿ ಉರುಳಿದ ಪೆಟ್ರೋಲ್ ಟ್ಯಾಂಕರ್​: ಮನೆಗಳಿಗೆ ಬೆಂಕಿ

ಕಡೂರಲ್ಲಿ ಉರುಳಿದ ಪೆಟ್ರೋಲ್ ಟ್ಯಾಂಕರ್​: ಮನೆಗಳಿಗೆ ಬೆಂಕಿ
X

ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಉರುಳಿಬಿದ್ದ ಪರಿಣಾಮ ರಸ್ತೆ ಬದಿಯ ಮನೆಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದರಿಂದ ಒಬ್ಬ ವ್ಯಕ್ತಿ ಸಜೀವದಹನಗೊಂಡ ಘಟನೆ ಚಕ್ಕಮಗಳೂರಿನ ಕಡೂರು ತಾಲೂಕಿನ ಗಿರಿಯಾಪುರದಲ್ಲಿ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಉರುಳಿ ಬಿದ್ದಿದ್ದರಿಂದ ಪೆಟ್ರೋಲ್ ಮನೆಗಳಿಗೆ ಹರಿದು ಹೋಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದಿದೆ. ಪೆಟ್ರೋಲ್ ಟ್ಯಾಂಕ್ ಹಾಗೂ 15 ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿ ಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಸುಮಾರು 100 ಮೀ ನಷ್ಟು ಆವರಿಸಿರುವ ಬೆಂಕಿಯ ಹೊಗೆ ಆವರಿಸಿಕೊಂಡಿತ್ತು.

ಕಡೂರಿನಿಂದ ಹೊಸದುರ್ಗ ಕಡೆಗೆ ಹೋಗುತ್ತಿದ್ದ ಲಾರಿ ಎಂದು ತಿಳಿದು ಬಂದಿದ್ದು, ಆಜ್ಜಂಪುರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES