Top

ಮುಂದಿನ ತಿಂಗಳು ಬಾಹ್ಯಕಾಶದಲ್ಲೊಂದು ದಶಕದ ವಿಸ್ಮಯ: ಏನದು ಗೊತ್ತಾ?

ಮುಂದಿನ ತಿಂಗಳು ಬಾಹ್ಯಕಾಶದಲ್ಲೊಂದು ದಶಕದ ವಿಸ್ಮಯ: ಏನದು ಗೊತ್ತಾ?
X

ವಾಷಿಂಗ್ಟನ್: ಮಂಗಳ ಮತ್ತು ಭೂಮಿ ದಶಕದ ನಂತರ ಮತ್ತೊಮ್ಮೆ ಅತೀ ಸಮೀಪಕ್ಕೆ ಬರಲಿದ್ದು, ಬಾಹ್ಯಕಾಶದಲ್ಲಿ ನಡೆಯುವ ಈ ಅಪೂರ್ವ ಘಟನೆಗೆ ಜುಲೈ 27 ಸಾಕ್ಷಿಯಾಗಲಿದೆ.

2003 ರ ಬಳಿಕ ಇದೇ ಮೊದಲ ಬಾರಿಗೆ ಮಂಗಳ ಗ್ರಹ ಭೂಮಿಗೆ ಇಷ್ಟು ಸಮೀಪ ಆಗಮಿಸುತ್ತಿದೆ ಎಂದು ನಾಸಾ ಹೇಳಿದೆ. ಮಂಗಳ ಗ್ರಹವು ಸೂರ್ಯನಿಗೆ ಎದುರಾಗಿ ಬರುವಾಗ ಭೂಮಿಯಿಂದ ಕೆಂಪು ಗ್ರಹವನ್ನು ಸಮೀಪದಿಂದ ನೋಡುವ ಅವಕಾಶ ಲಭಿಸುತ್ತದೆ.

ಈ ಅಪೂರ್ವ ಸಮಯದಲ್ಲಿ ಮಂಗಳನ ಛಾಯಾಚಿತ್ರ ತೆಗೆದುಕೊಳ್ಳಲು ಅಭಿಮಾನಿಗಳಿಗೆ ಉತ್ತಮ ಅವಕಾಶ ಒದಗಲಿದ್ದು, ಸೂರ್ಯನ ಬೆಳಕಿನ ಪ್ರತಿಫಲನ ಮಂಗಳನ ಮೇಲೆ ಆಗುವ ಕಾರಣ ಭೂಮಿಯಿಂದ ಗ್ರಹದ ಸ್ಪಷ್ಟ ರೂಪ ಗೋಚರಿಸಲಿದೆ.

ಪ್ರತಿ 15 ಅಥವಾ 17 ವರ್ಷಗಳಿಗೊಮ್ಮೆ ಮಂಗಳ ಗ್ರಹ ಸೂರ್ಯನ ನೇರಕ್ಕೆ ಬರುತ್ತದೆ. ಆಗ ಕೆಂಪು ಗ್ರಹದ ಕಕ್ಷೆಯ ಬಿಂದುವು ಭೂಮಿಯ ಸಮೀಪದಲ್ಲಿರಲಿದೆ. ಈ ಸಮಯ ಕೆಂಪು ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪವಾಗಿರಲಿದೆ. ಇದನ್ನು ’ಪೆರಿಥಿಲಿಕ್ ಆಪೊಸಿಷನ್’ ಎಂದು ಕರೆಯಲಾಗುತ್ತದೆ.

ಜುಲೈ 27 ರಂದು ಮಂಗಳ ಗ್ರಹ ’ಪೆರಿಥಿಲಿಕ್ ಆಪೊಸಿಷನ್ ಸ್ಥಿತಿಯಲ್ಲಿರಲಿದೆ ಎಂದು ಅಮೆರಿಕದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಮಾರು 60,000 ವರ್ಷಗಳ ಕಾಲಾವಧಿಯಲ್ಲಿ 2003ರಲ್ಲಿ ಮಂಗಳ ಭೂಮಿಗೆ ಅತೀ ಸಮೀಪ ಬಂದಿತ್ತು ಎಂದು ನಾಸಾ ತಿಳಿಸಿದೆ.

Next Story

RELATED STORIES