ತುಂಬಿದ ಕಬಿನಿ : ರೈತರ ಸಂಭ್ರಮಕ್ಕೆ ಮುಖ್ಯಮಂತ್ರಿಗಳೇ ಅಡ್ಡಿ.?

ಮೈಸೂರು : ರಾಜ್ಯದಲ್ಲೆ ಮೊದಲು ತುಂಬಿರುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಕಬಿನಿ ಜಲಾಶಯ. ಜಲಾಶಯದ ಗರಿಷ್ಠ ಮಟ್ಟ ತಲುಪಿ ತುಂಬಿ ತುಳುಕುತ್ತಿರುವ ಕಬಿನಿ ರೈತರ ಮೊಗದಲ್ಲಿ ಸಂತಸ ತಂದಿದ್ದಾಳೆ. ಆದ್ರೆ ರೈತರ ಸಂಭ್ರಮಕ್ಕೆ ಸ್ವತಹ ಮುಖ್ಯಮಂತ್ರಿಗಳೆ ಅಡ್ಡಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅದು ಯಾಕೆ..? ಹೇಗೆ..? ಎಂಬುದರ ಮುಂದೆ ಓದಿ..
ಮಳೆ ಬಂದ 20 ದಿನಕ್ಕೆ ಮೈಸೂರಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ತನ್ನ ಗರಿಷ್ಠ ಮಟ್ಟವಾದ 2284 ಅಡಿಗಳನ್ನ ತಲುಪಿ ಸುರಕ್ಷತಾ ದೃಷ್ಠಿಯಿಂದ ಎಲ್ಲ ಒಳಹರಿವಿನ ನೀರನ್ನ ಹೊರಹರಿವಿನ ರೂಪದಲ್ಲಿ ಹರಿಯುತ್ತಿರುವ ಕಪಿಲೆ, ಪ್ರಕೃತಿ ಸೊಬಗನ್ನೆ ನಾಚಿಸುತ್ತಿದ್ದಾಳೆ.
ಇಡೀ ರಾಜ್ಯಕ್ಕೆ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆಗು ಪಾತ್ರವಾಗಿರುವ ಕಬಿನಿ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ತುಂಬಿದೆ. ಮೊದಲು ತುಂಬುವ ಜಲಾಶಯಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸೋದು ವಾಡಿಕೆ. ಕಬಿನಿ ತುಂಬಿ ವಾರ ಕಳೆದರು ಕುಮಾರಸ್ವಾಮಿ ಮಾತ್ರ ಆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನೆ ಹಮ್ಮಿಕೊಂಡಿಲ್ಲ.
ಸಿಎಂ ಬಂದು ಬಾಗಿನ ಅರ್ಪಿಸುವವರೆಗು ನಾಲೆಗಳಿಗೆ, ಕೆರೆಗಳಿಗೆ ನೀರು ಬಿಡುವಂತಿಲ್ಲ. ಬಜೆಟ್ ಮಂಡನೆಗೆ ಬ್ಯೂಸಿಯಾಗಿರುವ ಸಿಎಂ ಅವರೇ ನಿಮ್ಮ ಸಮಯವನ್ನ ನಮಗಾಗಿ ಮಿಸಲಿಡಿ. ಬೇಗ ಬಂದು ಬಾಗಿನ ಅರ್ಪಿಸಿ ರೈತರನ್ನ ಉಳಿಸಿ ಅಂತಿದ್ದಾರೆ ಕಬಿನಿ ಜಲಾನಯನ ಪ್ರದೇಶದ ರೈತರು.
[story-lines]
ಇನ್ನು ಜಲಾಶಯ ತನ್ನ ಗರಿಷ್ಠಮಟ್ಟ ಈಗಾಲಗೇ ಮುಟ್ಟಿದೆ. ನಾಲ್ಕು ದಿನಗಳ ಹಿಂದೆ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗಿತ್ತು. ಇದೀಗ ಜಲಾಶಯಕ್ಕೆ ಒಳಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಜಲಾಶಯದ ಹೊರಹರಿವನ್ನು ಕಡಿಮೆ ಮಾಡಿದ್ದೇವೆ. ಡ್ಯಾಂನ ಸುರಕ್ಷತಾ ದೃಷ್ಟಿಯಿಂದ 2 ಅಡಿ ಬಾಕಿ ಉಳಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಒಳಹರಿವು ನೋಡಿಕೊಂಡು ಹೊರಹರಿವನ್ನ ಹೆಚ್ಚು ಮಾಡ್ತಿವಿ ಅಂತಾರೆ ಡ್ಯಾಂನ ಅಧಿಕಾರಿಗಳು. ಆದ್ರೆ ಸಿಎಂ ಯಾಕೇ ಬಂದಿಲ್ಲ ಅನ್ನೋ ಬಗ್ಗೆ ಒಂದೆ ಒಂದು ಮಾತಾಡೋಲ್ಲ ಡ್ಯಾಂನ ಅಧಿಕಾರಿಗಳು.
ಒಟ್ಟಾರೆ ಮೊದಲು ತುಂಬುವ ಜಲಾಶಯಕ್ಕೆ ಮೊಟ್ಟಮೊದಲ ಬಾಗಿನ ಅರ್ಪಿಸೋದಕ್ಕೆ ವಿಳಂಬ ಮಾಡುತ್ತಿರುವ ಸಿಎಂ ಕುಮಾರಸ್ವಾಮಿಯವರ ನಡೆ ರೈತರಲ್ಲಿ ಬೇಸರ ತರಿಸಿದೆ. ಇನ್ನಾದ್ರು ಕುಮಾರಸ್ವಾಮಿಯವರು ಕಬಿನಿ ಜಲಾಶಯಕ್ಕೆ ಆಗಮಿಸಿ ಬಾಗಿನ ಅರ್ಪಿಸಲಿ ಅನ್ನೋದೆ ಈ ಭಾಗದ ರೈತರ ಆಶಯ.
ವರದಿ : ಸುರೇಶ್, Tv5 ಮೈಸೂರು