Top

ನಾನು ದೊಡ್ಡ ಗಾಡಿಯಲ್ಲೇ ಓಡಾಡೋದು: ಜಮೀರ್ ಅಹಮದ್

ನಾನು ದೊಡ್ಡ ಗಾಡಿಯಲ್ಲೇ ಓಡಾಡೋದು: ಜಮೀರ್ ಅಹಮದ್
X

ಬೆಂಗಳೂರು: ತಮಗೆ ಹಜ್ ಖಾತೆ ನೀಡಿದ್ದಕ್ಕೆ ರೋಷನ್ ಬೇಗ್ ಅಸಮಾಧಾನ ವ್ಯಕ್ತಪಡಿಸಿದರ ಬಗ್ಗೆ, ಆಹಾರ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ, ಎಲ್ಲರಿಗೂ ಅಸಮಾಧಾನ ಇರುತ್ತೆ,ರೋಷನ್ ಬೇಗ್ ಹಿರಿಯ ನಾಯಕರು, ಅವರು ಹಜ್ ಖಾತೆ ಕೇಳೋದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಅಲ್ಲದೇ, ಹೊಸಬರಿಗೆ ಕೋಡೋಣ ಅಂತ ನಮ್ಮ ಹೈಕಮಾಂಡ್ ನೀಡಿದೆ.ಯಾರು ಕೆೇಪಬಲ್ ಇರ್ತಾರೋ ಅವರಿಗೆ ನೀಡಿದ್ದಾರೆ ಎಂದರು.

ಇನ್ನು ಕಾರು ಕೇಳಿದ ಬಗ್ಗೆ ಮಾತನಾಡಿದ ಜಮೀರ್ ಅಹ್ಮದ್, ನಾನು ದೊಡ್ಡ ಗಾಡಿಯಲ್ಲೇ ಓಡಾಡೋದು, ಹೀಗಾಗಿ ಮಾಜಿ ಸಿಎಂ ಅವರ ಫಾರ್ಚೂನರ್ ಕಾರು ಕೇಳಿದೆ. ದೊಡ್ಡಗಾಡಿಯಲ್ಲಿ ಓಡಾಡಿದ್ರೆ ತಾನೇ ಮಂತ್ರಿ ಅನ್ನೋದು..? ಎಂದು ಪ್ರಶ್ನಿಸಿದ ಜಮೀರ್. ಕುಮಾರಸ್ವಾಮಿಯವರು ಬಹಳ ಪಾಪ್ಯುಲರ್, ಅದಕ್ಕೆ ಅವರು ಇನ್ನೂ ಸರ್ಕಾರಿ ಕಾರು ಪಡೆದಿಲ್ಲ. ನನ್ನನ್ನ ಯಾರು ಗುರುತಿಸುತ್ತಾರೆ..? ಅದಕ್ಕೆ ದೊಡ್ಡ ಗಾಡಿಯಲ್ಲಿ ಓಡಾಡಿದ್ರೆ ತಾನೇ ಜನರಿಗೆ ಗೊತ್ತಾಗೋದು ಎಂದು ಹೇಳಿದ್ದಾರೆ.ಅ್ಲದೇ ಸಚಿವನಾದರೆ ಗಿನ್ನಿಸ್ ರೆಕಾರ್ಡ್ ಮಾಡ್ತೇನೆ ಅಂತಾ ಹೇಳಿದ್ದೆ. ಈಗಲೂ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಸ್ವಲ್ಪ ಟೈಮ್ ಕೊಡಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಜಮೀರ್ ಅಲ್ಪ ಸಂಖ್ಯಾತ ನಾಯಕರಲ್ಲ ಎಂಬ ತನ್ವೀರ್ ಸೇಠ್ ಆರೋಪಕ್ಕೆ ಜಮೀರ್ ಟಾಂಗ್ ನೀಡಿದ್ದಾರೆ. ಸುಮ್ಮಸುಮ್ಮನೆ ಸಚಿವ ಸ್ಥಾನ ನೀಡುತ್ತಾರಾ..? ನಾನೇನು ರಾಹುಲ್ ಗಾಂಧಿಯವರ ಸಂಬಂಧಿಕನಾ..?ಕೇಪಬಲ್ ಇದ್ರೆ ತಾನೇ ನಾಯಕನಾಗೋದು..? ನಾನು ಎನ್.ಆರ್.ಮೊಹಲ್ಲಾಗೆ ಬರ್ತೇನೆ. ಅವರು ಅಲ್ಲಿಗೆ ಬರಲಿ. ಯಾರಿಗೆ ಜನ ಬೆಂಬಲವಿದೆ ಅನ್ನೋದು ಗೊತ್ತಾಗಲಿದೆ ಎಂದು ತನ್ವೀರ್ ಸೇಠ್‌ಗೆ ಜಮೀರ್ ಸವಾಲ್ ಎಸೆದಿದ್ದಾರೆ.

ಇನ್ನು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಜಮೀರ್, ಸಿದ್ದರಾಮಯ್ಯನವರು ಸೈಡ್‌ಲೈನ್ ಆಗಿಲ್ಲ. ಈಗಲೂ ಅವರೇ ನಮ್ಮ ನಾಯಕರು. ಬಜೆಟ್ ಮಾಡಲೇಬೇಡಿ ಅಂತ ಅವರು ಹೇಳಿಲ್ಲ. ನಾನು ಬಜೆಟ್ ಕೊಟ್ಟಿದ್ದೆ, ಅದನ್ನ ಮುಂದುವರಿಸಿ ಅಂತ ಸಲಹೆ ಕೊಟ್ಟಿದ್ದರಷ್ಟೇ ಎಂದು ಹೇಳಿದ್ದಾರೆ.

Next Story

RELATED STORIES